ರಿಪ್ಪನ್‌ಪೇಟೆ: ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲಿ, ಆನೆಗದ್ದೆ ಸಂಪರ್ಕ ರಸ್ತೆಯ 125ಮೀ. ಉದ್ದದ ಕಾಂಕ್ರೀಟ್ ರಸ್ತೆ ಮತ್ತು ಡಾಂಬರೀಕರಣ ರಸ್ತೆಯ ಕಾಮಗಾರಿಗೆ ಸರ್ಕಾರ ಮಂಜುರಾತಿ ಆದೇಶ ನೀಡಿದ್ದು ಆದರೆ ಕಾಮಗಾರಿಯ ಗುತ್ತಿಗೆದಾರರು ಮೂಡ್ಲಿ ರಸ್ತೆಯನ್ನು ಮಾಡದೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಕಾಮಗಾರಿ ತಡೆದು ಇಂದು ಮೂಡ್ಲಿ ಗ್ರಾಮದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇಂದು ಮೂಡ್ಲಿ ಗ್ರಾಮಕ್ಕೆ ಮಂಜೂರಾದ ರಸ್ತೆಯನ್ನು ಬೇರೆಡೆ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೆಲಸ ನಿಲ್ಲಿಸುವಂತೆ ಹೇಳಿದಾಗ ಗುತ್ತಿಗೆದಾರನು ಗ್ರಾಮಸ್ಥರ ಮೇಲೆ ದರ್ಪ ತೋರಿಸಿದ್ದಾನೆ.ಈ ಸಂಧರ್ಭದಲ್ಲಿ ಆಕ್ರೋಶಿತರಾದ ಗ್ರಾಮಸ್ಥರು ಗುತ್ತಿಗೆದಾರನ ಬೆವರಿಳಿಸಿ ಕಾಮಗಾರಿ ನಿಲ್ಲಿಸಿ ಕೂಡಲೇ ಜಿಲ್ಲಾ ಪಂಚಾಯತ್ ಸಿ ಇ ಒ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ನಮ್ಮ ಮೂಡ್ಲಿ ಗ್ರಾಮದಿಂದ ಸದಸ್ಯೆಯಾಗಿ ಆಯ್ಕೆಯಾದ ಪಲ್ಲವಿ ಚೇತನ್ ರವರು ಹುಂಚಾ ಗ್ರಾಪಂ ಅಧ್ಯಕ್ಷರಾಗಿದ್ದು ಅವರು ಪ್ರಭಾವಿಗಳಿಗೆ ಮಣಿದು ಈ ಅನ್ಯಾಯದ ವಿರುದ್ದ ದನಿ ಎತ್ತುತ್ತಿಲ್ಲ.ನಮ್ಮ ಊರಿಗೆ ಮಂಜೂರಾದ ರಸ್ತೆಯನ್ನು ನಮ್ಮೂರಿಗೆ ಕೊಡಿ ಇಲ್ಲದಿದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಮೂಡ್ಲಿ ಗ್ರಾಮದ ರಸ್ತೆ ಕಾಮಗಾರಿಗೆ ರಾಜ್ಯ ಗೃಹಸಚಿವರು ಶಂಕುಸ್ಥಾಪನೆ ನೇರವೇರಿಸಿದ್ದು ಇದನ್ನು ಮಂಜೂರಾದ ಸ್ಥಳದಿಂದ ಕಾಮಗಾರಿಯನ್ನು ಪ್ರಾರಂಭಿಸದೆ ಬೇರೆ ಭಾಗದಲ್ಲಿ ಕಾಮಗಾರಿ ಆರಂಭಸಿದ್ದಾರೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ನಂತರ ಗ್ರಾಮಸ್ಥರೆಲ್ಲಾ ಹುಂಚಾ ನಾಡಕಛೇರಿಗೆ ತೆರಳಿ ಉಪ ತಹಶಿಲ್ದಾರ್ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ರತ್ನಾಕರಗೌಡ್ರು ಕಬ್ಬಿನಮಕ್ಕಿ, ಲಿಂಗಪ್ಪ, ಅರುಣ,ಆದರ್ಶ ಹುಂಚದಕಟ್ಟೆ, ಕುಮಾರ್, ಚಂದನ್, ದಿವಾಕರ್, ನೀಲಪ್ಪ, ಪುರುಷೋತ್ತಮ್, ಸೋಮಶೇಖರ, ಪಣಿರಾಜ್, ಗುರುಭಂಡಾರಿ, ಗೀತಾ, ವಿದ್ಯಾ, ರಾಮಚಂದ್ರ, ಲಕ್ಷ್ಮಣ ಆಚಾರ್, ಟೀಕಾಚಾರ್, ರವಿಗೌಡರ್, , ಕೇಶವ ನಾಗರಹಳ್ಳಿ, ಸುರೇಶ ಗುಡ್ಡೆಕೊಪ್ಪ, ಗುರುರಾಜ್ ಸುಣಕಲ್ಲು, ಉಲ್ಲಾಸ್ ಕಡಸೂರು, ರಾಜಶೇಖರ ಹೀರೆಬೈಲು, ಪೃಥ್ವಿರಾಜ್.ಕೆ.ಸಿ ಇನ್ನಿತರರು ಭಾಗವಹಿಸಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇