ಹೊಸನಗರ ತಾಲೂಕ್ ಜೆಡಿಎಸ್ ನೂತನ ಅಧ್ಯಕ್ಷರಾಗಿ ಎನ್ ವರ್ತೇಶ್ ಅಧಿಕಾರ ಸ್ವೀಕಾರ:
ಹೊಸನಗರ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಕ್ಷೀಣಿಸುತ್ತಿದ್ದು ಇದನ್ನು ಬಲಪಡಿಸಲು ಹೊಸನಗರ ತಾಲ್ಲೂಕು ಕಾರ್ಯಕರ್ತರ ಸಭೆ ನಡೆಸಿ ಸಂಘಟನೆ ಮಾಡುವ ಉದ್ದೇಶದಿಂದ ಆಗಸ್ಟ್ 20 ಶನಿವಾರ 11 ಗಂಟೆಗೆ ಹೊಸನಗರ ಪ್ರವಾಸಿ ಮಂದಿರದ ಹತ್ತಿರವಿರುವ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪತ್ರಿಕಾಘೋಷ್ಟಿ…