ಬಿದರಹಳ್ಳಿ ಕುಮಧ್ವತಿ ನದಿಯಲ್ಲಿ ಮೀನುಗಳ ಮಾರಣಹೋಮ : ನದಿಯ ಒಡಲಿಗೆ ವಿಷ ಬೆರೆಸಿದ ಪಾಪಿಗಳು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ವಿಷ ಬೆರೆಸಿ ಮೀನು ಸೇರಿದಂತೆ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿರುವ ಘಟನೆ ನಡೆದಿದೆ.


ಹೌದು ಬಿದರಹಳ್ಳಿ ಕುಮದ್ವತಿ ನದಿಯಲ್ಲಿ ಕಿಡಿಗೇಡಿಗಳು ನದಿಯ ನೀರಿಗೆ  ಮೈಲುತುತ್ತ ವಿಷ ಬೆರೆಸಿ ಪ್ರಾಣಿ ಪ್ರಭೇದಗಳ ಮಾರಣಹೋಮ ನಡೆಸಿದ್ದಾರೆ.ಕುಮದ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಭೇದಗಳು ಜೀವಿಸುತ್ತವೆ.ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ “ಮೈಲುತುತ್ತ” ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ ಪ್ರಾಣಿ ಸಂಕುಲಗಳ ಮಾರಣಹೋಮಕ್ಕೆ ಕಾರಣವಾಗಿದ್ದಾರೆ.

ವಿಷ ಬೆರೆಸಿದ್ದರಿಂದ ಮೀನು,ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಬಿದ್ದಿದ್ದು.ಇದನ್ನೂ ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಇರುತ್ತದೆ.ಇನ್ನೂ ಜಾನುವಾರುಗಳು ಕುಡಿಯಲು ಇದೇ ನೀರು ಬಳಸುವುದರಿಂದ ಅವುಗಳ ಜೀವಕ್ಕೂ ಕಂಠಕವಾಗಿದೆ.

ಈ ಬಗ್ಗೆ ಅಮೃತ ಗ್ರಾಪಂ ಪಿಡಿಒ ರವರಿಗೆ ವಿಚಾರಿಸಿದಾಗ ಈ ಬಗ್ಗೆ ಗಮನಕ್ಕೆ ಬಂದಿದ್ದು ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


ಒಟ್ಟಾರೆಯಾಗಿ ಮೀನುಗಳ ಮಾರಣಹೋಮ ನಡೆಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಜಾನುವಾರುಗಳು ಹೊಳೆಯ ವಿಷಯುಕ್ತ ನೀರು ಕುಡಿಯದಂತೆ ತಡೆಯುವ ಕೆಲಸವನ್ನು ಅಮೃತ ಗ್ರಾಮಾಡಳಿತ ಮಾಡಬೇಕಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇



Leave a Reply

Your email address will not be published. Required fields are marked *