ನಂದಿತಾ ಸಾವಿನ ಪ್ರಕರಣ ಸಿಬಿಐ ಗೆ ವಹಿಸಿ :ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್
ತೀರ್ಥಹಳ್ಳಿ: ನೂತನವಾಗಿ ಗೃಹ ಸಚಿವರಾಗಿ ಆಯ್ಕೆಯಾಗಿರುವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿ ನ್ಯಾಯ ಕೊಡಿಸುವ ಮೂಲಕ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ರವರು ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರದ ಅತಿಮುಖ್ಯ ಮತ್ತು ಎರಡನೇ ಮಹತ್ವದ ಖಾತೆಯನ್ನು ಅಲಂಕರಿಸಿದ್ದೀರಿ, ಅಭಿನಂದನೆಗಳು. ತೀರ್ಥಹಳ್ಳಿಯ ನಾಗರೀಕರಿಗೆ ನಿಮ್ಮಮೇಲೆ ಅತೀವ ನಿರೀಕ್ಷೆಯಿದೆ . ತಾವು ಪಕ್ಷದಲ್ಲೂ ಅತಿ ಪ್ರಭಾವಿಗಳು,ನೇರವಾಗಿ ದೆಹಲಿಯ ಸಂಪರ್ಕ ಹೊಂದಿರುವ ನಾಯಕರು. ಕಳೆದ ಚುನಾವಣೆಯಲ್ಲಿ ಅಂದಿನ ನಿಮ್ಮಪಕ್ಷದ…