ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚಾ ಗ್ರಾಮ ಪಂಚಾಯಿತಿ ಮಠದ (ಜಿಗಳ) ಕೆರೆ ದುರಸ್ತಿ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ ಬಿಲ್ಲು ನೀಡಿ ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಯ ರಾಜ್ಯಾಧ್ಯಕ್ಷ ಯುವರಾಜ್ ಕೆ ಸಿ ಒತ್ತಾಯಿಸಿದ್ದಾರೆ.
ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ (ಜಿಗಳೆ) ಕೆರೆಗೆ 2021-2022 ನೇ ಸಾಲಿನ 2702 ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಯೋಜನೆಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರ ಮೂಲಕ ಟೆಂಡರ್ ಕರೆದು ಕೆಲಸ ಮಾಡಬೇಕಾಗಿರುತ್ತದೆ. ಆದರೆ ಗುತ್ತಿಗೆದಾರನು ಕೆಲಸ ಮಾಡುವ ಮುನ್ನವೆ ಶಿವಮೂರ್ತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ್ ರಾಜ್ ಉಪ ವಿಭಾಗ ಇವರು ಎಂ.ಬಿ ಪುಸ್ತಕವನ್ನು ಕಾಮಗಾರಿಗೂ ಮುನ್ನವೆ ಬರೆದು 18-03-2022 ಬಿಲ್ ಮಾಡಿರುತ್ತಾರೆ. ಮಾರ್ಚ 31 ರ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಕಾನೂನನ್ನು ಉಲ್ಲಂಘನೆ ಮಾಡಿ ಕಾಮಗಾರಿ ಮಾಡಿಸದೇ ಎಂ.ಬಿ ಪುಸ್ತಕವನ್ನು ಬರೆದು ಬಿಲ್ ಮಾಡಿ ಕರ್ತವ್ಯಲೋಪ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.
ಈ ಕಾಮಗಾರಿಯನ್ನು 04/04/2022 ರಿಂದ ಮಾಡುತ್ತಿರುವುದ್ದಕ್ಕೆ ನಮ್ಮ ಬಳಿ ಸೂಕ್ತ ದಾಖಲೆಗಳು ಇವೆ ಆದರೆ 18-03-2022 ಬಿಲ್ ಆಗಿರುವುದೆ ವಿಪರ್ಯಾಸ ಹಾಗೂ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ್ ರಾಜ್ ವಿಭಾಗ ಇವರು ಸಹ ಸ್ಥಳ ಪರಿಶೀಲನೆ ಮಾಡದೆ ಬಿಲ್ ನ್ನು ಪಾಸ್ ಮಾಡಿ ಇವರು ಸಹ ಕರ್ತವ್ಯ ನಿರ್ಲಕ್ಷತನ ಮಾಡಿರುತ್ತಾರೆ. ಮತ್ತು ಮೂರನೇ ಪಾರ್ಟಿಯವರು ಸಹ ಕಾಮಗಾರಿ ಆದಮೇಲೆ ಪರಿಶೀಲಿಸಿ ವರದಿ ನೀಡಿ ಬಿಲ್ಲನ್ನು ಮಾಡುವಂತೆ ಶಿಫಾರಸ್ಸು ಮಾಡಬೇಕು ಇವರು ಸಹ ಸ್ಥಳ ಪರಿಶೀಲನೆ ಮಾಡದೆ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಹಾಗೂ ಶಿವಮೂರ್ತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ್ ರಾಜ್ ಉಪ ವಿಭಾಗ ಇವರ ಕರ್ತವ್ಯ ಲೋಪದಿಂದ ಈ ಅವ್ಯವಹಾರ ನಡೆದಿದೆ ಎಂದ ಅವರು ಈ ಬಗ್ಗೆ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಈಗಾಗಲೇ ದೂರು ನೀಡಲಾಗಿದೆ ಎಂದು ತಿಳಿಸಿದರು.
ಹಾಗೂ ಈ ಅಧಿಕಾರಿಯು ಕಳೆದ 12 ವರ್ಷಗಳಿದ ಇದೇ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿರುತ್ತದೆ ಮೇಲಾಧಿಕಾರಿಗಳು ಇವರನ್ನು ಇದೆ ಜಾಗದಲ್ಲಿ ಉಳಿಸಿಕೊಳ್ಳಲು ಕಾರಣವೇನು ಎಂಬುವುದನ್ನು ಕೂಡ ತನಿಖೆ ಮಾಡಬೇಕು ಎಂದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ್ ರಾಜ್ ಉಪ ವಿಭಾಗ ಅಧಿಕಾರಿಯು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಂಡು ಹಣವನ್ನು ಪಡೆದು ಈ ರೀತಿ ಕಾಮಗಾರಿಗೂ ಮುನ್ನವೆ ಗುತ್ತಿಗೆದಾರರೊಂದಿಗೆ ಹಣ ಪಡೆದು ಬಿಲ್ಲುಗಳನ್ನು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ ತಾವುಗಳು ತನಿಖೆ ಮಾಡಿ ಈ ರೀತಿ ಕರ್ತವ್ಯಲೋಪ ಮಾಡಿ ಅಕ್ರಮವಾಗಿ ಬಿಲ್ ನ್ನು ಮಾಡಿರುವ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ ರಾಜ್ ವಿಭಾಗ ಸಾಗರ ಮತ್ತು ಶಿವಮೂರ್ತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಂಚಾಯಿತ್ ರಾಜ್ ಉಪ ವಿಭಾಗ ಹೊಸನಗರ ಮತ್ತು ಸಹಾಯಕ ಇಂಜಿನಿಯರ್ ಹಾಗೂ ಮೂರನೇ ಪಾರ್ಟಿಯ ಅಧಿಕಾರಿಯನ್ನು ಸಹ ಅಮಾನತು ಮಾಡಬೇಕು ಹಾಗೂ ಕರ್ತವ್ಯ ನಿರ್ಲಕ್ಷದಡಿ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಯುವ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಯ ರಾಜ್ಯಾಧ್ಯಕ್ಷ ನವೀನ್ ಹಾಗೂ ಭದ್ರಾವತಿಯ ಸಾಮಾಜಿಕ ಹೋರಾಟಗಾರ ಸುರೇಶ್ ಹಾಜರಿದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್