ನೇದರವಳ್ಳಿಯ ಸೊಪ್ಪಿನ ಬೆಟ್ಟ ಕಾಡು ಲೂಟಿಯಾಗುತ್ತಿದ್ದರೂ ಸುಮ್ಮನೆ ಕುಳಿತಿರುವ ಅಧಿಕಾರಿಗಳು : ಪರಿಸರ ಪ್ರೇಮಿ ಮಂಜಪ್ಪ ಗಂಭೀರ ಆರೋಪ.
ಸಾಗರ : ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯ್ತಿಯ ನೇದರವಳ್ಳಿಯಲ್ಲಿ ಸರ್ವೆ ನಂಬರ್ 10 ಮತ್ತು 11 ರಲ್ಲಿ 43ಎಕರೆ ಸೊಪ್ಪಿನ ಬೆಟ್ಟದಲ್ಲಿ ತೋಟಕ್ಕೆ ಮುಫತ್ತು ಎಂದು ಕಾಡು ಇತ್ತು. ಆದರೆ ಇತ್ತೀಚಿನ ಹತ್ತು ವರ್ಷದ ಈ ಕಡೆ ನೇದರವಳ್ಳಿ ಗ್ರಾಮದ 20 ಕ್ಕೂ ಹೆಚ್ಚು ಜನ ಈ ಕಾಡನ್ನು ಇದೀಗ ಒತ್ತುವರಿ ಮಾಡಿದ್ದಾರೆ ಟ್ರಂಚ್ ಹೊಡೆಸಿದ್ದಾರೆ ಹಾಗೂ ಬೆಳೆಯನ್ನು ಸಹ ಮಾಡಿದ್ದಾರೆ. ಹಾಗೂ ಕಾಡಿನ ಜಾಗದಲ್ಲಿ ಇದೀಗ ಕ್ರಿಕೆಟ್ ಮೈದಾನವನ್ನು ಮಾಡಿದ್ದು ಇದಕ್ಕೆ ಅವಕಾಶವನ್ನು ನೀಡಿದವರು ಯಾರು…