ಹೊಸನಗರ ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಎಂ ಗುಡ್ಡೆಕೊಪ್ಪದ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆಬಿದ್ದಿದರು.
ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು 9 ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಕೆಲಸಕ್ಕೆ ಪಿಡಿಒ ಮುರುಗೇಶ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಈ ಸಂಬಂಧ ಎಸಿಬಿ ಮೊರೆ ಹೋಗಿದ್ದ ಸತೀಶ್ ನಿನ್ನೆ ಪಿಡಿಒ ರವರನ್ನು ಎಸಿಬಿ ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಈಗ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಧರ್ ರವರು ದೂರುದಾರ ಸತೀಶ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.
ನಮ್ಮದೇ ಬೋರ್ಡ್ ಇರುವುದು ತಾಕತ್ತಿದ್ದಲ್ಲಿ ನಿನ್ನ ಜಾಗದ ಕೆಲಸ ಹೇಗೆ ಮಾಡಿಕೊಳ್ತೀಯಾ ನೋಡ್ತೇನೆ ,ಪಿಡಿಒ ರವರನ್ನು ಮೋಸದಿಂದ ಎಸಿಬಿ ಬಲೆಗೆ ಬೀಳಿಸಿದ್ದಿಯಾ. ಬೋ…….. ಸೂ…… ಎಂದು ಅವಾಚ್ಯವಾಗಿ ನಿಂದಿಸಿರುವಲ್ಲದೇ ಊರಿಗೆ ಕಾಲಿಡು ಎಂದು ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಲಭ್ಯವಾಗಿದೆ.
ಈ ಬಗ್ಗೆ ಸತೀಶ್ ರವರು ಪೊಲೀಸರಿಗೆ ಮಾಹಿತಿ ನೀಡಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸತೀಶ್ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಭ್ರಷ್ಟಾಚಾರದ ವಿರುದ್ದ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ದ ದನಿ ಎತ್ತುವವರ ಮೇಲೆ ಈ ರೀತಿಯಾಗಿ ದಬ್ಬಾಳಿಕೆ ಮಾಡಿರುವುದ ತಪ್ಪು ಕೂಡಲೇ ಸಂಬಂಧಪಟ್ಟ ಇಲಾಖೆ ಅವರ ವಿರುದ್ದ ಕ್ರಮ ಕೈಗೊಂಡು ಸತೀಶ್ ರವರಿಗೆ ಸೂಕ್ತ ಭದ್ರತೆ ನೀಡ ಬೇಕಾಗಿದೆ.
ದೂರುದಾರ ಸತೀಶ್ ಮತ್ತು ಗ್ರಾಪಂ ಸದಸ್ಯ ಶ್ರೀಧರ್ ರವರ ಸಂಭಾಷಣೆಯ ವೀಡಿಯೋ ಇಲ್ಲಿ ಕೇಳಿ 👇👇👇