w
Headlines
Home » ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಸಾಗರದ ಪೊಲೀಸರು : ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ವಶ

ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಸಾಗರದ ಪೊಲೀಸರು : ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ವಶ

ಶಿವಮೊಗ್ಗ ಜಿಲ್ಲೆ ಸಾಗರ ಪೋಲಿಸರ ಚಾಣಾಕ್ಷತನದಿಂದ ಅಂತರ್ ಜಿಲ್ಲೆಗಳಲ್ಲಿ ಬೈಕ್  ಕಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಸಾಗರದ ಚಾಣಾಕ್ಷ  ಪೊಲೀಸರು ವಶಪಡಿಸಿಕೊಂಡು ಕಳ್ಳರನ್ನು ಬಂಧಿಸಿದ್ದಾರೆ.

ರಾಜ್ಯದ ಹಲವು ಭಾಗಗಳಲ್ಲಿ ಬೈಕ್ ಕಳ್ಳತನ ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಯವರ ಸೂಚನೆ ಮೇರೆಗೆ ಸಾಗರ ಎಎಸ್ಪಿ ರೋಹನ್ ಜಗದೀಶ್ ರವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸರು  ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಸಾಗರ ಸಿಪಿಐ ಕೃಷ್ಣಪ್ಪ ಕೆ ವಿ ,ಸಬ್ ಇನ್ಸ್ ಪೆಕ್ಟರ್ ಗಳಾದ  ತಿರುಮಲೇಶ್. ಜಿ.  ಟಿ ಡಿ ಸಾಗರ್ ಕರ್ ಹಾಗೂ ಸಿಬ್ಬಂದಿಗಳಾದ ರತ್ನಾಕರ್ ,ಸಂತೋಷ್ ನಾಯ್ಕ್, ಹಜರತ್ ಅಲಿ  ,ಅಶೋಕ್, ಶ್ರೀಧರ್, ರವಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Newsmatic - News WordPress Theme 2026. Powered By BlazeThemes.
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.