ರಿಪ್ಪನ್‌ಪೇಟೆ : ಬೀದಿ ನಾಯಿಗಳ ಹಾವಳಿಗೆ ಬೆಚ್ಚಿಬೀಳುತ್ತಿರುವ ನಾಗರೀಕರು|stray dogs

ರಿಪ್ಪನ್‌ಪೇಟೆ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್‌, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ. ಪಟ್ಟಣದ  ,…

Read More

ಹಾರನಹಳ್ಳಿ : ನೇಣು ಬಿಗಿದುಕೊಂಡು ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ :

ಹಾರನಹಳ್ಳಿ : ಪಟ್ಟಣದ ವ್ಯಾಪ್ತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಏಳನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಏಳನೇ ತರಗತಿಯ ಸಹನಾ (13) ಮೃತಳು. ಶಿವಮೊಗ್ಗ ತಾಲೂಕು ಹಾರನಹಳ್ಳಿಯ ಸಹನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮನೆಯ ಬಾಗಿಲುಗಳನ್ನು ಬಂದ್ ಮಾಡಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹನಾ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.  ಹದಿಹರೆಯದ ಬಾಲಕ, ಬಾಲಕಿಯರಲ್ಲಿ ಇತ್ತೀಚಿನ ದಿನಗಳಲ್ಲಿ…

Read More

ಸಾಗರ-ಸಿಗಂದೂರು ಸಂಪರ್ಕ ರಸ್ತೆ ಸಂಪೂರ್ಣ ಬಂದ್ : ವಾಹನ ಸವಾರರ ಪರದಾಟ..

ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಕರಾವಳಿ- ಮಲೆನಾಡು ಭಾಗದಲ್ಲಂತೂ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರ, ವಿದ್ಯುತ್‌ ಕಂಬಗಳು ಉರುಳಿದ್ದು, ಗುಡ್ಡ ಕುಸಿತ, ಸೇತುವೆ ಮುಳುಗಡೆ, ನೆರೆಯಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ತೀರ್ಥಹಳ್ಳಿ, ಸಾಗರ,ಹೊಸನಗರದಲ್ಲಿ ಅವಘಡಗಳು ಹೆಚ್ಚಾಗುತ್ತಿವೆ ಭಾರಿ ಮಳೆಗೆ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಸಾಗರ- ಸಿಗಂದೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸಿಗಂದೂರು ಹೊಳೆಬಾಗಿಲು ಸಮೀಪದ ಅಂಬಾರಗೊಡ್ಡು ಬಳಿ ರಸ್ತೆಗೆ ಅಡ್ಡಲಾಗಿ ಹಲವಾರು ಮರಗಳು ಬಿದ್ದಿದ್ದು, ಕಳೆದ 1 ಗಂಟೆಯಿಂದ ಸಿಗಂದೂರು ರಸ್ತೆ ಸಂಪೂರ್ಣ ಬಂದ್ ಆಗಿದೆ….

Read More

Shivamogga | ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು

ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು ಶಿವಮೊಗ್ಗ ನಗರದ ಶೇಷಾದ್ರಿಪುರಂ  ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ಬೈಕ್ ನಲ್ಲಿ ಬಂದ ಮೂವರು ಯುವಕರಿಂದ ಮೊಬೈಲ್,ನಗದು ಹಣ ಹಾಗೂ ದಾಖಲಾತಿಗಳನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಜಯನಗರ ರಾಮಮಂದಿರ ನಿವಾಸಿ ವಿನಿತ್ ರಾಮ್ಜಿಯಾ ಎಂಬುವವರು ಫೆ.28 ರಂದು ರಾತ್ರಿ ರೈಲಿಗೆ ಹೋಗಲು  ಸ್ನೇಹಿತರನ್ನ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಿಡಲು ವಿನೀತ್ ಬಂದಿದ್ದರು. ರೈಲು ಬರಲು ಸಮಯವಿದ್ದಿದ್ದರಿಂದ ಗೂಡ್ ಶೆಡ್ ಬಳಿ ವಿನೀತ್ ಸ್ನೇಹಿತರಾದ ಮಾರುತಿ ಮತ್ತು‌ ರಮೆಶ್ ಎಂಬುವರ…

Read More

ರಿಪ್ಪನ್ ಪೇಟೆ: ಸರಳವಾಗಿ ನಡೆದ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವ

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಿದ್ದಪ್ಪನ ಗುಡಿ ಸಮೀಪದಲ್ಲಿರುವ ಶ್ರೀ ಗುರುಸಾರ್ವಭೌಮರ ದೇವಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ  ವಿಜೃಂಭಣೆಯಿಂದ ಮಂಗಳವಾರ ಸರಳವಾಗಿ ಕೋವಿಡ್ ನಿಯಮಾನುಸಾರ ಜರಗಿತು. ವೇದ ಬ್ರಹ್ಮ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾಕೈಂಕರ್ಯ ಜರಗಿತು.  ಈ ಪೂಜಾ ಸಂದರ್ಭದಲ್ಲಿ ನೂರಾರು ಭಕ್ತರು ದೇವರ ದರ್ಶನವನ್ನು ಪಡೆದು ಪುನೀತರಾದರು .ಈ ಪೂಜಾ ಕಾರ್ಯಕ್ರಮದಲ್ಲಿ ಗುರು ರಾಘವೇಂದ್ರ ಸ್ವಾಮಿ ಸಮಿತಿಯ ಅಧ್ಯಕ್ಷರಾದ ಟಿ. ಪುರುಷೋತ್ತಮ್ ರಾವ್. ಪ್ರಧಾನ ಕಾರ್ಯದರ್ಶಿಯಾದ ಕೆ.ಜಿ.ದೇವರಾಜ್ ಕೆರೆಹಳ್ಳಿ…

Read More

ನೆಟ್ವರ್ಕ್ ಸಮಸ್ಯೆ, ತುರ್ತು ಸೇವೆಗಳ ವಿಫಲತೆ – ಹೆರಿಗೆಯಾದ 25 ದಿನಗಳ ಬಳಿಕ ಬಾಣಂತಿಯ ದುರಂತ ಅಂತ್ಯ

A 29-year-old woman died 25 days after delivery in Thirthahalli taluk, allegedly due to lack of postnatal care, poor emergency services, and network issues. ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮದಲ್ಲಿ ಹೆರಿಗೆ ನಂತರ ಅಗತ್ಯ ಆರೈಕೆ ಹಾಗೂ ತುರ್ತು ವೈದ್ಯಕೀಯ ಸೇವೆಗಳ ಅಸಮರ್ಪಕ ಲಭ್ಯತೆಯಿಂದ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತರನ್ನು ಕಾವ್ಯಾ (29) ಎಂದು ಗುರುತಿಸಲಾಗಿದ್ದು, ಇವರು ಮೇಳಿಗೆ ಗ್ರಾಮದ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಧರ್ಮಪತ್ನಿ….

Read More

ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ | Rain

ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ | Rain ರಿಪ್ಪನ್‌ಪೇಟೆ : ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರಿ ಮಳೆಯಿಂದ ಹಲವಾರು ಅವಘಡಗಳು  ಸಂಭವಿಸಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸಿಲ್ದಾರ್ ರಶ್ಮಿ ಹಾಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತುಲ ಗ್ರಾಮದ ಜನ್ನಂಗೆ ಹೊಳೆ ತುಂಬಿ ಮುಖ್ಯ ಹಾಗೂ ನಂಜವಳ್ಳಿ ಸಂಪರ್ಕ ಕಡಿತಗೊಂಡಿತ್ತು ಹಾಗೂ ಅಕ್ಕ ಪಕ್ಕದ ಜಮೀನು ತೋಟಗಳಿಗೆ…

Read More

ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಿದ ತೀರ್ಥಹಳ್ಳಿ ಭಜರಂಗದಳದ ಕಾರ್ಯಕರ್ತರು

ತೀರ್ಥಹಳ್ಳಿ : ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ `ಮತಾಂತರದಿಂದ ನಿಮ್ಮ ಮೋಸದ ಪ್ರಚಾರ,ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂದು ಮತಾಂತರಗೊಳಿಸಿ “ಸ್ವಇಚ್ಚೆಯ ಮತಾಂತರ” ಎಂದು ಬಿಂಬಿಸಲಾಗುತ್ತಿದೆ.  ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ…

Read More

ಕಾರು ಅಡ್ಡಗಟ್ಟಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ದೋಚಿದ್ದ ನಾಲ್ವರು ಅರೆಸ್ಟ್

ಕಾರು ಅಡ್ಡಗಟ್ಟಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ದೋಚಿದ್ದ ನಾಲ್ವರು ಅರೆಸ್ಟ್ ಕಾರು ಅಡ್ಡಗಟ್ಟಿ 3.50 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ಗುಜರಿ ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಗುಜರಿ ವಸ್ತುಗಳು ಸೇರಿ ಒಟ್ಟು 7.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಹೊಸಮನೆಯ ಭೋವಿ ಕಾಲೋನಿಯ ಕವಿರಾಜ್‌ (21), ಶಿವಮೊಗ್ಗದ ಮೇಲಿನ ತುಂಗಾನಗರದ ಮುಬಾರಕ್‌ (24), ಭದ್ರಾವತಿ ಬಾರಂದೂರಿನ ಅಜಿತ್‌ ಅಲಿಯಾಸ್‌…

Read More

ಜೈಲಿನಲ್ಲಿದ್ದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ – ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ

ಜೈಲಿನಲ್ಲಿದ್ದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ – ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ ಸೋಗಾನೆಯ ಕೇಂದ್ರ ಕಾರಾಗೃಹ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್‌ ಫೋನ್‌ ಹೊರಗೆ ತೆಗೆಯಲಾಗಿದೆ. ಖೈದಿ ದೌಲತ್‌ ಅಲಿಯಾಸ್‌ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ ದೌಲತ್‌ ಅಲಿಯಾಸ್‌ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಜೂನ್‌ 24ರಂದು…

Read More