Headlines

ಭಾರಿ ಗಾಳಿ ಮಳೆಗೆ ನೆಲಸಮಗೊಂಡ ದನದ ಕೊಟ್ಟಿಗೆ : ಜಾನುವಾರುಗಳಿಗೆ ಗಂಭೀರ ಗಾಯ

ರಿಪ್ಪನ್ ಪೇಟೆ : ಇಲ್ಲಿನ  ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಭಾರಿ ಮಳೆಗೆ ಕೊಟ್ಟಿಗೆ ಕುಸಿದು ಬಿದ್ದು ಜಾನುವಾರುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.


ಗುಬ್ಬಿಗಾ ಗ್ರಾಮದ ಚೆಲುವಣ್ಣ ಎಂಬವರ ಮನೆಯ ಹಿಂಬದಿಯ ದನದ ಕೊಟ್ಟಿಗೆ ಇಂದು ಕುಸಿದು ಬಿದ್ದ ಪರಿಣಾಮ 1 ಜರ್ಸಿ ಹಸು, 2 ನಾಟಿ ಹಸುಗಳಿಗೆ ಗಾಯಗಳಾಗಿವೆ.1 ನಾಟಿ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.


ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಳ್ಳೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.


ಕೊಟ್ಟಿಗೆ ಮೇಲ್ಛಾವಣಿ ಸಹಿತ ನೆಲಸಮವಾಗಿದ್ದು ಅಂದಾಜು 1ಲಕ್ಷ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *