ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು

ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು
ಕೈಗೆ ಕೋಳ ತೊಡಿಸಿರುವಂತೆ ಪ್ರಧಾನಿ ಮೋದಿಯ ಎಡಿಟೆಡ್ ಫೋಟೋ ಜಾಲತಾಣದಲ್ಲಿ ಹರಿಬಿಟ್ಟ ಕಿರಾತಕ – ದೂರು ದಾಖಲು
ಪಾಕಿಸ್ತಾನ ರಾವಲ್ಪಿಂಡಿಯಲ್ಲಿರುವ ಸೆಂಟ್ರಲ್ ಜೈಲ್ ಆಗಿರುವ ಅಡಿಯಾಲ ಜೈಲಿನ ಮುಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯ ಕೈಗೆ ಕೋಳ ತೊಡಿಸಿರುವ ಫೊಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಜಮಿಲ್ ಮುಜ್ ಎಂಬ ಯುವಕ ಆರ್ ಎಂಎಲ್ ನಗರದ ನಿವಾಸಿಯಾಗಿದ್ದು ಶಿವಮೊಗ್ಗದಲ್ಲಿದ್ದಾಗ ಫೇಸ್ ಬುಕ್ ಅಕೌಂಟ್ ಆರಂಭಿಸಿದ್ದ. ಈಗ ದುಬೈ ನಿವಾಸಿಯಾಗಿದ್ದು ಅಲ್ಲಿದ್ದಾಗ ಮಾ.8 ರಂದು ಪಾಕ್ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿರ್ಮಾಣಗೊಂಡಾಗ ಭಾರತದ ಪ್ರಧಾನಿಗೆ ರಕ್ತ ಸಿಕ್ತ ಬಟ್ಟೆಯನ್ನ ತೊಡಸಿ ಇಬ್ಬರು ಸೈನಿಕರ ಫೋಟೊವನ್ನ ಚಿತ್ರಿಸಿ ಅಡಿಯಾಲ ಜೈಲಿನ ಎದುರು ನಿಂತಿರುವಂತೆ ಹರಿಬಿಟ್ಟ ಫೊಟೊ ಆರೋಪಿ ವಿರುದ್ಧ ದೂರಾಗಿದೆ.
ರಾಷ್ಟ್ರದ ವಿರುದ್ಧ ಮತ್ತು ದೇಶದ ಸಾರ್ವಜನಿಕರ ಭಾವನೆಗೆ ಕೆರಳಿಸುವ ಪ್ರಕರಣ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.