Headlines

ಹಂದಿ ಅಣ್ಣಿ ಹತ್ಯೆ ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ : ಹಂದಿ ಅಣ್ಣಿ ಹಂತಕರ ಫೋಟೋಗಳು ವೈರಲ್

ಶಿವಮೊಗ್ಗ : ಹಂದಿ ಅಣ್ಣಿ ಕೊಲೆ ಪ್ರಕರದ 8 ಜನ ಆರೋಪಿಗಳನ್ನ ಇಂದು ಶಿವಮೊಗ್ಗದ ನ್ಯಾಯಾಲಯದ ಮುಂದೆ ಹಾಜರಿ ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು.

5 ನೇ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಶಿವು ಕುಮಾರ್ ಜಿ.ಎನ್ ಮುಂದೆ ಇಂದು ಮಧ್ಯಾಹ್ನ ವಿನೋಬ‌ನಗರ ಪೊಲೀಸರು ಅಣ್ಣಿ ಹತ್ಯೆಯ ಆರೋಪಿಗಳನ್ನ ಹಾಜರಿಪಡಿಸಿದರು.

ಆರೋಪಿಗಳನ್ನ ಒಂದು ವಾರ ಪೊಲೀಸ್ ಕಸ್ಟಡಿಗೆ ಮಾನ್ಯ ನ್ಯಾಯಾಧೀಶರು ನೀಡಿ ಆದೇಶಿಸಿದ್ದಾರೆ. ಜು. 27 ರಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯಕ್ಕೆ ಹಾಜರಿ ಪಡಿಸಲು ನ್ಯಾಯಧೀಶರು ಸೂಚಿಸಿದ್ದಾರೆ. ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು.

ಹಂದಿ ಅಣ್ಣಿ ಹಂತಕರ ಪೋಟೋ ವೈರಲ್ ಆಗಿದ್ದು ಸಾಮಾಜಿಕ ಜಾಲಾತಾಣದಾದ್ಯಂತ ಸದ್ದು ಮಾಡುತ್ತಿದೆ.

About The Author

Leave a Reply

Your email address will not be published. Required fields are marked *