ಕಿಮ್ಮನೆ ರತ್ನಾಕರ್ 74 ನೇ ಹುಟ್ಟುಹಬ್ಬ – ಕೇಕ್ ಕತ್ತರಿಸಿ  ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

ಕಿಮ್ಮನೆ ರತ್ನಾಕರ್ 74 ನೇ ಹುಟ್ಟುಹಬ್ಬ – ಕೇಕ್ ಕತ್ತರಿಸಿ  ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ: ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್  ಗುರುವಾರ  ೭೪ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸಿ ಕಿಮ್ಮನೆ ರತ್ನಾಕರ್ ಅವರಿಗೆ ಆತ್ಮೀಯವಾಗಿ ಶುಭಾಶಯ ಕೋರಿದರು. ಈ ಕುರಿತು ಕೇಕ್ ಕತ್ತರಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಚಿವ ಮಧು ಬಂಗಾರಪ್ಪ,…

Read More

ಚಂದ್ರಗುತ್ತಿ: ರೇಣುಕಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ಅರ್ಚಕ್ ದತ್ತಾತ್ರೇಯ ಭಟ್ ನಿಧನ:

ಚಂದ್ರಗುತ್ತಿ: ಇಲ್ಲಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅರ್ಚಕ್ ದತ್ತಾತ್ರೇಯ ಭಟ್ (80) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಶನಿವಾರ ತೀವ್ರವಾದ ಎದೆನೋವು ಕಾಣಿಕೊಂಡಿತ್ತು, ತಕ್ಷಣವೇ ಶಿರಸಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ಅರ್ಚಕ ಅರವಿಂದ್ ಭಟ್, ಅರ್ಚಕ ನಿರಂಜನ್ ಭಟ್ ಸೇರಿದಂತೆ ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಂತಾಪ:  ಶ್ರೀ…

Read More

ಗೃಹ ಸಚಿವರ ಸ್ವಕ್ಷೇತ್ರದ ಅರಳಸುರಳಿ ಗ್ರಾಮದಲ್ಲಿ ವೀಕೆಂಡ್ ಲಾಕ್ ಡೌನ್ ನಲ್ಲಿ ಅದ್ದೂರಿ ಜಾತ್ರ ಮಹೋತ್ಸವ :

ತೀರ್ಥಹಳ್ಳಿ : ತಾಲೂಕಿನ ಅರಳಸುರುಳಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷ್ರಷ್ಟಿ ಪ್ರಯುಕ್ತ ಜಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಗೃಹಸಚಿವರ ಸ್ವಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೋವಿಡ್ ನಿಯಮವನ್ನು ಉಲ್ಲಂಘಿಸಿ ಜಾತ್ರಾ ಮಹೋತ್ಸವಕ್ಕೆ ಸಹಕರಿಸಿದ್ದಾರೆ. ರಾಜ್ಯ ಸರ್ಕಾರದ ಕೊರೋನಾ ನಿಯಮಗಳನ್ನು ಗೃಹ ಸಚಿವರ ಕ್ಷೇತ್ರದ ಅಧಿಕಾರಿಗಳು ಗಾಳಿಗೆ ತೂರಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.  ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಕೋವಿಡ್ ಮುಂಜಾಗೃತ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡದೇ ಮಾಸ್ಕ್ ಧರಿಸದೆ ಜಾತ್ರೆಯ ಖರೀದಿಯ ಭರಾಟೆಯಲ್ಲಿ…

Read More

ರಿಪ್ಪನ್ ಪೇಟೆ : ಟ್ಯಾಂಕರ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವು..!!!

ರಿಪ್ಪನ್ ಪೇಟೆ : ಪಟ್ಟಣದ ವಿಶ್ವ ಮಾನವ ಸಭಾಭವನದ ಸಮೀಪ ಲಾರಿ  ಚಾಲಕನೊಬ್ಬ ವಿಶ್ರಾಂತಿ ಪಡೆಯುವ ಸಂಧರ್ಭದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಯಲ್ಲಾಪುರ ನಿವಾಸಿ ಮಧು (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಯಲ್ಲಾಪುರದಿಂದ ತೀರ್ಥಹಳ್ಳಿಗೆ  ಡಾಂಬರ್ ತುಂಬಿದ ಟ್ಯಾಂಕರ್ (KA-20-D-7055) ಚಲಾಯಿಸುತ್ತಿದ್ದ ಚಾಲಕನು  ಮಾರ್ಗ ಮದ್ಯೆ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ವಿಶ್ರಾಂತಿ ಪಡೆಯಲು ರಿಪ್ಪನ್ ಪೇಟೆಯ ವಿಶ್ವ ಮಾನವ ಸಭಾ ಭವನದ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆದಿದ್ದಾನೆ. ನೆನ್ನೆ ರಾತ್ರಿಯಿಂದ  ಚಾಲಕನು ಪೋನ್ ಸಂಪರ್ಕಕ್ಕೆ ಸಿಗದಿದ್ದಕ್ಕೆ…

Read More

ಚಿಕ್ಕಜೇನಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ:

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಉಮೇಶ್ ಗೌಡ ಚಿಕ್ಕಜೇನಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೌಢಶಾಲಾ ಆವರಣದಲ್ಲಿ ನಡೆದ ಪೋಷಕರಿಂದ ಆಯ್ಕೆಯಾದ ಸದಸ್ಯರು ಉಮೇಶ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.  ಸಮಿತಿಯ ಸದಸ್ಯರಾಗಿ ಶ್ರೀಮತಿ ಆಶಾ ನರಸಿಂಹ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಯಶೋಧ, ಧನಂಜಯ ಹಿರೇಜೇನಿ, ನಾಗರಾಜ್ ಬಿಳಿಕಿ, ಹರೀಶ್ ಕುಮಾರ್ ಕಾರೆಮಟ್ಟಿ, ಜಿಎಲ್ ಲಿಂಗರಾಜ್ ಹಿರೇಮೈತೆ, ಶಿವಕುಮಾರ್ ಶೆಟ್ಟಿಬೀಡು ಇವರುಗಳು ಆಯ್ಕೆಯಾದರು.  ಸಭೆಯ ಅಧ್ಯಕ್ಷತೆಯನ್ನು ಶಾಲಾ…

Read More

ತೋಟದ ಕೆಲಸಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಸಾವು : ತಡರಾತ್ರಿ ಮೃತದೇಹ ಪತ್ತೆ

ತೋಟದ ಕೆಲಸಕ್ಕೆ ಹೋದ ರೈತ ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿಹೋಗಿರುವ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಮೃತ ದುರ್ಧೈವಿಯನ್ನು ಭವಾನಿ ಶಂಕರ್ ನಾರಾಯಣ(52) ಎಂದು ಗುರುತಿಸಲಾಗಿದೆ. ಸುಳುಗೋಡು ಗ್ರಾಮದ ಬಾಳೆಹಿತ್ತಲು ಹಳ್ಳದಲ್ಲಿ ಭವಾನಿ ರವರು ಎಂದಿನಂತೆ ಬೆಳಿಗ್ಗೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ ಆದರೆ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಕುಟುಂಬದವರು ಇವರನ್ನು ಹುಡುಕಲು ಪ್ರಾರಂಭಿಸಿದ್ದು  ಎಷ್ಟೇ ಹುಡುಕಿದರೂ ಇವರ ಸುಳಿವು ಸಿಗಲಿಲ್ಲ.ತಡರಾತ್ರಿಯವರೆಗೂ ಹುಡುಕಿದಾಗ ರಾತ್ರಿ ಹನ್ನೊಂದರ ಸಮಯಕ್ಕೆ ಹಳ್ಳದಲ್ಲಿ ಇವರ ಮೃತದೇಹ…

Read More

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಶಾಸಕ ಬೇಳೂರು ಗೋಪಾಲಕೃಷ್ಣ. ರಿಪ್ಪನ್ ಪೇಟೆ : ಸರಳ ಸಜ್ಜನಿಕೆಯ ಮೂಲಕ ಜನಸಾಮಾನ್ಯರ ಶಾಸಕರಾಗಿ ಆಯ್ಕೆಯಾದ  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಘಟನೆ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ.  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅತಿವೃಷ್ಟಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವುದರ ಸಲುವಾಗಿ ಸಚಿವರು ಬರುವುದಕ್ಕಿಂತ ಮುಂಚಿತವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು.ಈ…

Read More

ತೋಟದಲ್ಲಿ ಕೆಲಸ ಮಾಡುತಿದ್ದ ರೈತನ ಮೇಲೆ ಕರಡಿ ದಾಳಿ – ಗಂಭೀರ ಗಾಯ|Bear attack

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಬಳಿಯ ಹೆನ್ನಿ ಗ್ರಾಮದಲ್ಲಿ ಕರಡಿ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ದಾಳಿಯಲ್ಲಿ ತಿಮ್ಮನಾಯ್ಕ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.  ಸೌದೆ ಒಟ್ಟು ಮಾಡಲು ಅಂತಾ ತೋಟಕ್ಕೆ ತೆರಳಿದ್ದ ಅವರ ಮೇಲೆ ಅಲ್ಲಿದ್ದ ಕರಡಿಯು ದಾಳಿ ನಡೆಸಿದೆ. ಏಕಾಯೇಕಿ ನಡೆದ ದಾಳಿಯಲ್ಲಿ ತಿಮ್ಮನಾಯ್ಕ್​ರಿಗೆ ತಪ್ಪಿಸಿಕೊಳ್ಳಲು ಸಹ ಆಗಲಿಲ್ಲ. ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೇ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.  ಇವರ ಚೀರಾಟ ಕೇಳಿಸ್ತಿದ್ದಂತೆ, ಸ್ಥಳೀಯರು ಓಡಿ ಬಂದಿದ್ದಾರೆ. ತೀವ್ರವಾದ ಗಾಯಗಳಾಗಿದ್ದ ತಿಮ್ಮನಾಯ್ಕ್​ರನ್ನ ತಕ್ಷಣವೆ…

Read More

ರಿಪ್ಪನ್ ಪೇಟೆಯ ನೇತ್ರಾ ಟೈಲರ್ ಗುರುಪಾದಪ್ಪ ನಿಧನ :

ರಿಪ್ಪನ್ ಪೇಟೆ: ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ನಿವಾಸಿ, ಟೈಲರ್ ಗುರುಪಾದಪ್ಪ (ನೇತ್ರಾ ಟೈಲರ್) (65) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ರಿಪ್ಪನ್ ಪೇಟೆಯಲ್ಲಿ ನೇತ್ರಾ ಟೈಲರ್ ಎಂದೇ ಪ್ರಸಿದ್ದರಾಗಿದ್ದ ಇವರು ಕೆಲವು ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ. ಭಾನುವಾರ ಬೆಳಿಗ್ಗೆ 10ಕ್ಕೆ ಬೈರಾಪುರ ಗ್ರಾಮದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೇರವೆರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ನಂದನ್ ಇನ್ನಿಲ್ಲ..!

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶಿವಮೊಗ್ಗ ನಂದನ್ ಇನ್ನಿಲ್ಲ..! ಖ್ಯಾತ ಫೋಟೋ ಜರ್ನಲಿಸ್ಟ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಶಿವಮೊಗ್ಗ ನಂದನ್ (57ವರ್ಷ ) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಡರಾತ್ರಿ 1:30ರ ಸುಮಾರಿಗೆ ನಂದನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಂದನ್ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇಂದು ರೈಲ್ವೆ ನಿಲ್ದಾಣ ಬಳಿ ಇರುವ ಎ.ಎ.ಕಾಲೋನಿಯಲ್ಲಿರುವ ನಿವಾಸದಲ್ಲಿ…

Read More