ರಿಪ್ಪನ್‌ಪೇಟೆ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಸಕಲ ಸಿದ್ದತೆ
ರಿಪ್ಪನ್‌ಪೇಟೆ : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದ್ದು,ಪಟ್ಟಣದಾದ್ಯಂತ ಕೇಸರಿಮಯವಾಗಿದೆ. ಇನ್ನು,ರಾಜಬೀದಿ ಉತ್ಸವ ಸಾಗುವ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯ ಮೇರೆಗೆ ರಾಜಬೀದಿ ಉತ್ಸವ ಸಾಗುವ ರಸ್ತೆಗಳಲ್ಲಿರುವ ಹೊಂಡಗುಂಡಿಗಳನ್ನು ಮುಚ್ಚಲು ದುರಸ್ತಿ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದೆ. ತೀರ್ಥಹಳ್ಳಿ ರಸ್ತೆಯ ಬೈಪಾಸ್ ಮುಡುಬಾ ರಸ್ತೆಯ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಪಟ್ಟಣದ ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರಸೇನಾ ವತಿಯಿಂದ 57ನೇ ವರ್ಷದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಂಗಳವಾರ ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ ಮೆರವಣಿಗೆ ಹೊರಟು ನಾಲ್ಕು ಪ್ರಮುಖ ರಸ್ತೆಗಳಲ್ಲಿ ರಾಜಬೀದಿ ಉತ್ಸವ ತೆರಳಿ ಬುಧವಾರ ಬೆಳಿಗ್ಗೆ ಹೊಸನಗರ ರಸ್ತೆಯ ತಾವರೆಕೆರೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.