WhatsApp Channel Join Now
Telegram Channel Join Now

ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಬಹುದಾದ ಯಂತ್ರ’: ಏನಿದು ? ಇದರ ಕೆಲಸ ಹೇಗೆ?

ಮನುಷ್ಯ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಜೀವನವೇ ಬೇಡ ಎಂದು ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸುದ್ದಿಗಳನ್ನು ಪ್ರತಿನಿತ್ಯ ಮಾದ್ಯಮಗಳಲ್ಲಿ ನೋಡುತ್ತಿರುತ್ತೇವೆ. ಅದರಲ್ಲೂ ಭಾರತದಂತಹ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಮಹಾ ಅಪರಾಧ.

ಈ ಮಧ್ಯೆ ಸ್ವಿಟ್ಜರ್ಲೆಂಡ್ ದೇಶದಲ್ಲಿ ‘ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಬಹುದಾದ ಯಂತ್ರ’ವನ್ನು ಕಂಡುಹಿಡಿದಿದೆ. ಅದುವೇ ʼಸೂಸೈಡ್‌ ಪಾಡ್‌ʼ (ಆತ್ಮಹತ್ಯಾ ಪಾಡ್).‌

ಏನಿದು ಯಂತ್ರ? ಇದರ ಕೆಲಸ ಹೇಗೆ? ಇಲ್ಲಿದೆ ವಿವರ…

46 ವರ್ಷಗಳ ಕಾಲ ಬಾಳಿ ಬದುಕಿದ ಬ್ರಿಟಿಷ್‌ ದಂಪತಿ ಇದೀಗ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಪೀಟರ್ ಸ್ಕಾಟ್ (86) ಮತ್ತು ಕ್ರಿಸ್ಟಿನ್ ಸ್ಕಾಟ್ (80) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವ ದಂಪತಿ. ಕ್ರಿಸ್ಟಿನ್ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಪತ್ನಿ ಇಲ್ಲದೇ ತನ್ನ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಸ್ವಿಟ್ಜರ್ಲೆಂಡ್‌ನ ಸಾರ್ಕೊ ಸೂಸೈಡ್ ಪಾಡ್‌ನಲ್ಲಿ (Sarco Suicide Pod) ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಈ ದಂಪತಿ ಸಾರ್ಕೋ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸ್ವಿಟ್ಜರ್ಲೆಂಡ್ ಸರ್ಕಾರ ‘ಆತ್ಮಹತ್ಯೆ ಯಂತ್ರ’ ಬಳಕೆಗೆ ಕಾನೂನು ಅನುಮೋದನೆ ನೀಡಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು. ಶೀಘ್ರದಲ್ಲೇ ಇದು ಬಳಕೆಗೆ ಬರುವ ಸಾಧ್ಯತೆ ಇದೆ.

ಏನಿದು ಸೂಸೈಡ್‌ ಪಾಡ್?

ಸಾರ್ಕೋ ಎಂಬ ಸಂಸ್ಥೆ ಈ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, 2019ರಲ್ಲೇ ಈ ಆತ್ಮಹತ್ಯಾ ಸಾಧನವನ್ನು ಸಂಸ್ಥೆ ರಿವೀಲ್ ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಅಪ್ಡೇಟ್ ನೊಂದಿಗೆ ಈ ಯಂತ್ರ ಬಳಕೆಗೆ ಸಿದ್ಧವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಪಾಡ್ ಅನ್ನು ಆಸ್ಟ್ರೇಲಿಯನ್ ಮೂಲದ ವೈದ್ಯ ಫಿಲಿಪ್ ನಿಟ್ಷ್ಕೆ ಕಂಡುಹಿಡಿದಿದ್ದಾರೆ. ಮೊದಲಿಗೆ ಈ ಆತ್ಮಹತ್ಯೆ ಪಾಡ್ ಅನ್ನು 2019ರಲ್ಲಿ ವೆನಿಸ್ ಡಿಸೈನ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಯಿತು.

ಈ ಯಂತ್ರದ ಪ್ರಮುಖ ವಿಷಯವೆಂದರೆ, ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.

ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಜರ್ಲೆಂಡ್ ನ ‘ದಿ ಲಾಸ್ಟ್ ರೆಸಾರ್ಟ್’ ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಈ ವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.

ಸ್ವಿಟ್ಜರ್ಲೆಂಡ್ ನಲ್ಲಿ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಕಾರಣ ನೀಡಿದರೆ ಅಥವಾ ಆತನ ಸಾವಿಗೆ ಪೂರಕವಾದ ಅಂಶವನ್ನು ಸಾಬೀತುಪಡಿಸಿದರೆ ಆತನ ಆತ್ಮಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ. ಕಾನೂನು ಆತನ ಆತ್ಮಹತ್ಯೆಗೆ ಅನುಮತಿಸುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಆತ್ಮಹತ್ಯಾ ಪಾಡ್ ಯಂತ್ರದ ತಯಾರಕಾ ಸಂಸ್ಥೆ ‘ದಿ ಲಾಸ್ಟ್ ರೆಸಾರ್ಟ್’ ಮುಖ್ಯ ಕಾರ್ಯನಿರ್ವಾಹಕ ಫ್ಲೋರಿಯನ್ ವಿಲೆಟ್, ‘ನಮ್ಮಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದಾರೆ. ನಮ್ಮ ಸಾರ್ಕೋ ಯಂತ್ರದ ಬಳಕೆಗಾಗಿ ಕಾಯುತ್ತಿದ್ದಾರೆ. ಇಲ್ಲಿ ಸಾವು ಬಹಳ ಬೇಗ ನಡೆದುಹೋಗುತ್ತದೆ. ನಿಮ್ಮ ಸಾವು ನೋವು ರಹಿತವಾಗಿರುತ್ತದೆ ಎಂದು ನಾನು ಹೇಳಬಲ್ಲೆ. ಶಾಶ್ವತ ನಿದ್ರೆಗೆ ಜಾರುವವರಿಗೆ ಸಾಯಲು ಹೆಚ್ಚು ಸುಂದರವಾದ ಮಾರ್ಗ ಇದಾಗಿದೆ ಎಂದು ಹೇಳಿದ್ದಾರೆ.

ಆದಷ್ಟು ಬೇಗ ಈ ಯಂತ್ರ ಬಳಕೆಗೆ ಸಿದ್ಧವಾಗಲಿದೆ. ಮೊದಲ ಸಾವು ಮತ್ತು ಅದರ ದಿನ, ತಿಂಗಳು ಮತ್ತು ವರ್ಷವನ್ನು ಬಹಿರಂಗಪಡಿಸಲಾಗಿಲ್ಲ. ಇದು ಖಾಸಗಿ ಮಾಹಿತಿಯಾಗಿದ್ದು ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದಿಲ್ಲ.,

ಕೆಲಸ ಹೇಗೆ?

3D-ಮುದ್ರಿತ ಶವಪೆಟ್ಟಿಗೆಯಂತಹ ಕ್ಯಾಪ್ಸುಲ್ ಅದರ ಕೋಣೆಯನ್ನು ಸಾರಜನಕದಿಂದ ತುಂಬುವ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಒಳಗಿನಿಂದ ಬಟನ್ ಅನ್ನು ಸಕ್ರಿಯಗೊಳಿಸಿದ ನಂತರ ಆಮ್ಲಜನಕದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು 10 ನಿಮಿಷಗಳಲ್ಲಿ ಆ ವ್ಯಕ್ತಿ ಸಾಯುತ್ತಾನೆ.

Leave a Reply

Your email address will not be published. Required fields are marked *