ಅಪ್ರಾಪ್ತನಿಂದ ಬೈಕ್ ಚಾಲನೆ – 25 ಸಾವಿ ರೂ. ದಂಡ
ತೀರ್ಥಹಳ್ಳಿ : ಅಪ್ರಾಪ್ತ ಹುಡುಗನೊಬ್ಬ ಬೈಕ್ ಚಲಾಯಿಸಿದ ಹಿನ್ನಲೆಯಲ್ಲಿ ಜೆ ಎಂ ಎಫ್ ಸಿ ಕೋರ್ಟ್ ಹುಡುಗನ ಪೋಷಕರಿಗೆ ಭಾರಿ ದಂಡ ವಿಧಿಸಿದೆ.
ತೀರ್ಥಹಳ್ಳಿ ಪಟ್ಟಣದ ಇಂದಿರಾನಗರದ ಶಾಲೆಯೊಂದರ ಸಮೀಪದಲ್ಲಿ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿದ್ದು ಪೊಲೀಸರು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅವರ ಪೋಷಕರಿಗೆ ನ್ಯಾಯಾಧೀಶರು 25000 ರೂ ದಂಡ ವಿಧಿಸಿದ್ದಾರೆ.

