Headlines

ಹೊಸನಗರದ ಯುವಕ ಪ್ರಸನ್ನ ರಾಮನಗರದಲ್ಲಿ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|prasanna

ಹೊಸನಗರ ಮೂಲದ ಯುವಕನೊಬ್ಬ ರಾಮನಗರ ಜಿಲ್ಲೆಯ ಕನಕಗಿರಿ ಬಳಿಯ ಕೆರೆಯಲ್ಲಿ ನೀರುಪಾಲಾಗಿರುವ ಘಟನೆ ನಡೆದಿದೆ. ಹೊಸನಗರ ಟೌನ್ ನಿವಾಸಿ ಪ್ರಸನ್ನ ಭಟ್ ನೀರುಪಾಲಾಗಿರುವ ವ್ಯಕ್ತಿಯಾಗಿದ್ದಾರೆ. ಇಂದು ರಾಮಗನಗರದ ಜಿಲ್ಲೆಯ ಕನಕಗಿರಿಯ ಕೆರೆಗೆ ಸಹೋದರ ಕೌಶಿಕ್ ಜೊತೆ ಈಜಲು ತೆರಳಿದ್ದರು.ಈ ಸಂಧರ್ಭದಲ್ಲಿ ಈ ಅವಘಡ ನಡೆದಿದೆ. ಅಗ್ನಿಶಾಮಕ ದಳದಿಂದ ತೀವ್ರ ಶೋಧಕಾರ್ಯ ಮುಂದುವರೆದಿದೆ. ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ ವೈ ರಾಘವೇಂದ್ರ ರವರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಸಂಸದರು ಸಂಸತ್ ಇರುವ ಕಾರಣ ಕ್ಷೇತ್ರದಲ್ಲಿ ಇಲ್ಲದೇ ಇರುವುದರಿಂದ…

Read More

RIPPONPETE | ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ

ರಿಪ್ಪನ್ ಪೇಟೆಯಲ್ಲಿ ಋಗ್ ಉಪಾಕರ್ಮ – ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ ರಿಪ್ಪನ್ ಪೇಟೆ : ಪಟ್ಟಣದ ವಿಶ್ವಕರ್ಮ ಸಮಾಜದವರಿಂದ, ವಿರಾಟ್ ವಿಶ್ವಕರ್ಮ ಸಂಘದ ಸಹಭಾಗಿತ್ವದಲ್ಲಿ ಋಗ್ ಉಪಾಕರ್ಮದ ಪ್ರಯುಕ್ತ ಭವ್ಯವಾದ ಜನಿವಾರ ಧಾರಣೆ ಹಾಗೂ ವಿಶ್ವಕರ್ಮ ದೇವರ ಯಜ್ಞ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮವು ಸಮಾಜ ಬಾಂಧವರ ಸಕ್ರಿಯ ಸಹಭಾಗಿತ್ವದಲ್ಲಿ, ಕುಲಾಪುರೋಹಿತರಾದ ಚೇತನ್ ಪುರೋಹಿತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಮಂಜುನಾಥ್ ಆಚಾರ್ಯ (ಗ್ಯಾರೇಜ್),…

Read More

ನಿರಂತರ ಕಾಡಾನೆ ಹಾವಳಿಗೆ ಸ್ಪಂದಿಸದ ಅರಣ್ಯಾಧಿಕಾರಿಗಳ ವಿರುದ್ದ ನಾಳೆ ಮೂಗೂಡ್ತಿ ಕಛೇರಿ ಎದುರು ರೈತರ ಪ್ರತಿಭಟನೆ : ಕಿಮ್ಮನೆ,ಬೇಳೂರು,ಆರ್ ಎಂಎಂ ಸೇರಿದಂತೆ ಅನೇಕರು ಭಾಗಿ

ರಿಪ್ಪನ್‌ಪೇಟೆ: ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆ ರೈತರ ಹೊಲಗದ್ದೆಗಳಿಗೆ ನಿರಂತರ ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಂತಿದೆ.ಇದರಿಂದ ಆಕ್ರೋಶಗೊಂಡಿರುವ ರೈತರು ನಾಳೆ ಬೆಳಿಗ್ಗೆ 10 ಗಂಟೆಗೆ ಮೂಗೂಡ್ತಿ ಅರಣ್ಯ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನಾ ಸಭೆಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಆರ್ ಎಂ ಮಂಜುನಾಥ್ ಗೌಡ ಸೇರಿದಂತೆ ಅನೇಕ ಮುಖಂಡರು ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಭಟನೆಯ ಆಯೋಜಕರಾದ ಗ್ರಾಪಂ ಸದಸ್ಯ…

Read More

RIPPONPETE | ಶ್ರದ್ದಾ ಭಕ್ತಿಯಿಂದ ಜರುಗಿದ ಗೌರಮ್ಮ ದೇವಿಯ ಪೂಜೆ

RIPPONPETE | ಶ್ರದ್ದಾ ಭಕ್ತಿಯಿಂದ ಜರುಗಿದ ಗೌರಮ್ಮ ದೇವಿಯ ಪೂಜೆ ರಿಪ್ಪನ್‌ಪೇಟೆ;-ಶ್ರದ್ದಾ ಭಕ್ತಿಯಿಂದ ಗೌರಮ್ಮ ದೇವಿಯ ಪೂಜಾ ಕಾರ್ಯಕ್ರಮ ಜರುಗಿತು.ಇತಿಹಾಸ ಪ್ರಸಿದ್ದ ಶ್ರೀಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗೌರಮ್ಮ ದೇವಿಯನ್ನು ದೇವಸ್ಥಾನದ ಪ್ರಧಾನ ಆರ್ಚಕ ಚಂದ್ರಶೇಖರಭಟ್ ಮತ್ತು ಗುರುರಾಜ್‌ಭಟ್ ಇವರ ನೇತೃತ್ವದಲ್ಲಿ ಪಕ್ಕದ ಬಾವಿಯಲ್ಲಿ ಗಂಗೆಯನ್ನು ಸುಮಂಗಳೆಯರು ತರುವುದರೊಂದಿಗೆ ಗೌರಿಯನ್ನು ಪ್ರತಿಷ್ಟಾಪಿಸಿ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಂಮಗಳಾರತಿ ನೆರವೇರಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಮತ್ತು ಮುತೈದೆಯರು ಸೇರಿದಂತೆ ಹಲವು ಭಕ್ತರು ಪಾಲ್ಗೊಂಡು ದೇವಿಗೆ ಹರಿಕೆ ಹಣ್ಣು ಕಾಯಿ…

Read More

BREAKING NEWS | ಸೂಡೂರು ಗೇಟ್ ಬಳಿ ಭೀಕರ ಅಪಘಾತ – ರಿಪ್ಪನ್‌ಪೇಟೆಯ ಮೂವರು ಯುವಕರು ಗಂಭೀರ

BREAKING NEWS | ಸೂಡೂರು ಗೇಟ್ ಬಳಿ ಭೀಕರ ಅಪಘಾತ – ರಿಪ್ಪನ್‌ಪೇಟೆಯ ಮೂವರು ಯುವಕರು ಗಂಭೀರ ರಿಪ್ಪನ್‌ಪೇಟೆ : ಇಲ್ಲಿನ ಸೂಡೂರು ಗೇಟ್ ಬಳಿಯ ದೇವಸ್ಥಾನದ ತಿರುವಿನಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ‌ ಮೂವರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮಾರುತಿ ಅಲ್ಟೋ ಕಾರು ಹಾಗೂ ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಯುವಕರು ರಸ್ತೆಯಲ್ಲಿ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದೆ. ಗಾಯಗೊಂಡಿರುವ ಯುವಕರು ರಿಪ್ಪನ್‌ಪೇಟೆ ಮೂಲದ ಯುವಕರು ಎನ್ನಲಾಗುತಿದ್ದು ಹೆಚ್ಚಿನ ಮಾಹಿತಿ…

Read More

ಯುವ ಸಾಹಿತಿ ರಫ಼ಿ ರಿಪ್ಪನ್ ಪೇಟೆ ರವರಿಗೆ ಒಲಿದ ರಾಜ್ಯ ಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ :

ರಿಪ್ಪನ್ ಪೇಟೆ : ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ಕಲಾ ಕೀರ್ತಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು ವಹಿಸಿದ್ದರು..  ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ ಹಾಗೂ ಗುರುಕುಲ ಶಿರೋಮಣಿ…

Read More

ಶಿವಮೊಗ್ಗಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ : ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು, ಸ್ವಾಗತಕ್ಕೆ ಸಜ್ಜಾದ ಹೊಳಲೂರು ಗ್ರಾಮ

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 24 ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಭೇಟಿ ನೀಡಲಿರುವ ಕಾರ್ಯಕ್ರಮದ ಅಂಗವಾಗಿ ಇಂದು ಹಿರಿಯ ಅಧಿಕಾರಿಗಳು ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ನವದೆಹಲಿ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯದ ಅಪರ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕುಮಾರ್, ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಆಯುಕ್ತರಾದ ಶಿಲ್ಪಾ ಶರ್ಮಾ ಇಂದು ಹೊಳಲೂರು ಗ್ರಾಮದ ಸ್ಪಚ್ಚ…

Read More

ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದ ಆಧಾರ ಸ್ತಂಭಗಳು: ಶಾಸಕ ಗೋಪಾಲಕೃಷ್ಣ ಬೇಳೂರು|gkb

ಹೊಸನಗರ : ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದ ಆಧಾರ ಸ್ತಂಭಗಳು ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಆರ್ಯ ಈಡಿಗರ ಸಭಾ ಭವನದಲ್ಲಿ ಆಯೋಜಿಸಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಹೊಸನಗರ ತಾಲೂಕಿನಲ್ಲಿ 41 ಪ್ರೌಢಶಾಲೆಗಳಲ್ಲಿ 17 ಶಾಲೆ 100% ಫಲಿತಾಂಶ ಜತೆ…

Read More

ರಿಪ್ಪನ್‌ಪೇಟೆ : ಅನಾಥ ನಾಯಿ ಮರಿಗಳ ಆರೈಕೆ – ಮಾನವೀಯತೆ ಮೆರೆದ ಪಶು ಪರಿವೀಕ್ಷಕ|rpet

ಮಾನವೀಯತೆ ಮೆರೆದ  ಪಶು ಪರಿವೀಕ್ಷಕ ವಿ ರಂಗಪ್ಪ ರಿಪ್ಪನ್ ಪೇಟೆ : ಪೊದೆಯೊಂದರಲ್ಲಿ ಐದು ಮರಿಗಳಿಗೆ ಜನ್ಮವಿತ್ತ ಬೀದಿ ನಾಯಿ  ಮೂರು ದಿನಗಳ ಒಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು.ಇನ್ನೂ ಕಣ್ಣು ಬಿಡದ ಆ ಮರಿಗಳಿಗೆ ಹಾಲುಣಿಸುವ ತಾಯಿ ಬಾರದಿದ್ದಾಗ ಹಸಿವಿನಿಂದ ಕಂಗೆಟ್ಟು ತೀರಾ ಹಠ ಮಾಡುವುದನ್ನು ಕಂಡು ದಾರಿ ಹೋಕರು ಗಮನಿಸಿ ಪಟ್ಟಣದ ಪಶು ವೈದ್ಯಕೀಯ ಪರಿವೀಕ್ಷಕ ವಿ ರಂಗಪ್ಪ ಅವರ ಗಮನಕ್ಕೆ ತಂದರು. ದಿಕ್ಕಿಲ್ಲದ ಆ ಐದು ಮರಿಗಳನ್ನು ಆಸ್ಪತ್ರೆಗೆ ತಂದು ರಟ್ಟಿನ ಬಾಕ್ಸ್ ನಲ್ಲಿ …

Read More

ರಿಪ್ಪನ್ ಪೇಟೆ ಪಿಯು ಕಾಲೇಜಿನಲ್ಲಿ ಶಾಂತಿ ಸಭೆ : ಸರ್ಕಾರದ ಆದೇಶ ಪಾಲನೆಗೆ ಮನವಿ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ಸಮುದಾಯದ ಪೋಷಕರ ಸಭೆ ಇಂದು ಕಾಲೇಜಿನಲ್ಲಿನಡೆಯಿತು. ಈ ಸಂಧರ್ಭದಲ್ಲಿ ಪಿ.ಎಸ್.ಐ ಶಿವಾನಂದಕೋಳಿ ಅವರು ಮಾತನಾಡಿ ಸರ್ಕಾರ ಹಾಗೂ ನ್ಯಾಯಾಲಯದ ಆದೇಶ ಪರಿಪಾಲನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.  ಆ ನಿಟ್ಟಿನಲ್ಲಿ ಈಚೆಗೆ ವಿವಾದಕ್ಕೆ ಒಳಗಾಗಿರುವ ವಸ್ತ್ರಸಂಹಿತೆಯನ್ನು ಹೊರತುಪಡಿಸಿ ಶಾಲಾ-ಕಾಲೇಜಿನ ನಿಗದಿತ ಸಮವಸ್ತ್ರವನ್ನು ಧರಿಸಿ ಬರುವಂತೆ ಸೂಚಿಸಿದರು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದೇ ತಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಪೋಷಕರೂ ಸಹ…

Read More