RIPPONPETE | ಶ್ರದ್ದಾ ಭಕ್ತಿಯಿಂದ ಜರುಗಿದ ಗೌರಮ್ಮ ದೇವಿಯ ಪೂಜೆ

ರಿಪ್ಪನ್‌ಪೇಟೆ;-ಶ್ರದ್ದಾ ಭಕ್ತಿಯಿಂದ ಗೌರಮ್ಮ ದೇವಿಯ ಪೂಜಾ ಕಾರ್ಯಕ್ರಮ ಜರುಗಿತು.ಇತಿಹಾಸ ಪ್ರಸಿದ್ದ ಶ್ರೀಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಗೌರಮ್ಮ ದೇವಿಯನ್ನು ದೇವಸ್ಥಾನದ ಪ್ರಧಾನ ಆರ್ಚಕ ಚಂದ್ರಶೇಖರಭಟ್ ಮತ್ತು ಗುರುರಾಜ್‌ಭಟ್ ಇವರ ನೇತೃತ್ವದಲ್ಲಿ ಪಕ್ಕದ ಬಾವಿಯಲ್ಲಿ ಗಂಗೆಯನ್ನು ಸುಮಂಗಳೆಯರು ತರುವುದರೊಂದಿಗೆ ಗೌರಿಯನ್ನು ಪ್ರತಿಷ್ಟಾಪಿಸಿ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಂಮಗಳಾರತಿ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಮತ್ತು ಮುತೈದೆಯರು ಸೇರಿದಂತೆ ಹಲವು ಭಕ್ತರು ಪಾಲ್ಗೊಂಡು ದೇವಿಗೆ ಹರಿಕೆ ಹಣ್ಣು ಕಾಯಿ ಸಮರ್ಪಿಸಿ ದರ್ಶನ ಪಡೆದರು.
ಬೆಳಕೋಡು ಗ್ರಾಮದಲ್ಲಿ ಗೌರಮ್ಮನವರ ಪೂಜೆ ಬಾಗಿನ ಅರ್ಪಣೆ – ಮೂಲೆಗದ್ದೆ ಶ್ರೀಗಳು ಭಾಗಿ

ರಿಪ್ಪನ್‌ಪೇಟೆ;-ಸಮೀಪದ ಬೆಳಕೋಡು ಗ್ರಾಮದ ಮನೆಯೊಂದರಲ್ಲಿ ಗೌರಮ್ಮ ದೇವಿಯ ಪ್ರತಿಷ್ಟಾಪಿಸಿ ಶ್ರದ್ದಾ ಭಕ್ತಿಯಿಂದ ಪೂಜಾ ಸಲ್ಲಿಸಿ ಮುತೈದೆಯರಿಗೆ ಬಾಗಿನ ಅರ್ಪಿಸಿದರು.
ಈ ಪೂಜಾ ಕಾರ್ಯದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಭಾಗವಹಿಸಿ ವರ್ಷದಲ್ಲಿ ಬರುವ ಗೌರಿ-ಗಣೇಶ ಹಬ್ಬವನ್ನು ಅಚರಿಸುವ ಮೂಲಕ ಸಂಬಂಧವನ್ನು ಬೆಸೆಯುವುದರೊಂದಿಗೆ ಎಲ್ಲೂರು ಕೂಡಿ ಆಚರಿಸುವಂತಾಗಬೇಕು ಎಂದರು.
ನಮ್ಮ ಪೂರ್ವಿಕರು ಅಕ್ಕ ತಂಗಿ ತಮ್ಮ ಸಹೋದರರು ಮತ್ತು ಸಂಬಂಧಿಕರನ್ನು ಕರೆದು ಆಚರಿಸಿಕೊಂಡು ಬಂದAತಹ ಸಂಪ್ರದಾಯದ ಹಬ್ಬಗಳು ಇಂದು ಕುಟುಂಬಸ್ಥರೆ ಅಚರಿಸುತ್ತಿರುವುದು ವಿಷಾದಕರವಾಗಿದೆ.ಸಂಬಂಧಿಕರು ಅಣ್ಣ ತಂಗಿ ತಮ್ಮದಿರುಗಳ ಯಾರು ಬೇಡವಾಗಿದೆ ಇದರಿಂದ ಸಂಬಂಧಗಳು ದೂರವಾಗಿ ನಮ್ಮ ಸಂಸ್ಕಾರ ಸಂಸ್ಕೃತಿ ಅಚಾರ ವಿಚಾರಗಳು ಮಾಯವಾಗುತ್ತಿದೆ ಎಂದರು.
ಬೆಳಕೋಡು ಗ್ರಾಮದ ಹಿರಿಯರಾದ ಹಾಲಸ್ವಾಮಿಗೌಡರು, ಅಲುವಳ್ಳಿ ಷಣ್ಮುಖಪ್ಪಗೌಡ, ರಮೇಶಗೌಡ ಕೊಳವಳ್ಳಿ,ಉಮೇಶಗೌಡರು, ಇನ್ನಿತರರು ಹಾಜರಿದ್ದರು.