Headlines

ಬಾಲಕ-ಬಾಲಕಿಯರ ವಾಲಿಬಾಲ್ – ಪ್ರಥಮ ಸ್ಥಾನ ಪಡೆದು ತಾಲ್ಲೂಕ್ ಮಟ್ಟಕ್ಕೆ ಆಯ್ಕೆ

ಬಾಲಕ-ಬಾಲಕಿಯರ ವಾಲಿಬಾಲ್ – ಪ್ರಥಮ ಸ್ಥಾನ ಪಡೆದು ತಾಲ್ಲೂಕ್ ಮಟ್ಟಕ್ಕೆ ಆಯ್ಕೆ

ರಿಪ್ಪನ್‌ಪೇಟೆ;-ಪಠ್ಯದೊಂದಿಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಕ್ರೀಡೆಯಿಂದ ದೈಹಿಕವಾಗಿ ಬಲಿಷ್ಟವಾಗಿರಲು ಸಾಧ್ಯವೆಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹೇಳಿದರು.

ರಿಪ್ಪನ್‌ಪೇಟೆಯ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಅಯೋಜಿಸಲಾದ ೧೪ ವರ್ಷದೊಳಗಿನ ಶಾಲಾ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ  “ವಾಲಿಬಾಲ್ ‘’ಪ್ರಥಮ ಸ್ಥಾನ ಪಡೆದ ಶ್ರೀ ಬಸವೇಶ್ವರ ಕನ್ನಡ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಆಟೋಟದಲ್ಲಿ ಭಾಗವಹಿಸುವುದು ಮುಖ್ಯ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಮುಂದೆ ಒಂದು ದಿನ ಗುರಿ ತಲುಪಲು ಸಾಧ್ಯವೆಂದರು.

ವಾಲಿಬಾಲ್  ಪಂದ್ಯಾವಳಿಯಲ್ಲಿ  ಬಾಲಕ ಬಾಲಕಿಯರು ಪ್ರಥಮ ಸ್ಥಾನಗಳಿಸುವ ಮೂಲಕ ತಾಲ್ಲೂಕ್ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಉದ್ದಜಿಗಿತದಲ್ಲಿ ಸಹ ಪ್ರಥಮ ಸ್ಥಾನ ಪಡೆದಿದ್ದಾರೆ ವಿದ್ಯಾರ್ಥಿಗಳಿ ಈ ಸಾಧನೆಗೆ ಶ್ರೀಬಸವೇಶ್ವರ ಕನ್ನಡ ಆಂಗ್ಲ ಮಾದ್ಯಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಅಡಳಿತ ಮಂಡಳಿ ಶಿಕ್ಷಕ ವೃಂದ ಪೋಷಕವರ್ಗ ಆಭಿನಂದಿಸಿದ್ದಾರೆ.

ಜೈನಾಚಾರದ ಅನುಷ್ಠಾನಗಳ ಪ್ರತಿಪಾದಕ
‘ಚಾರಿತ್ರ್ಯಂ ಚಕ್ರವರ್ತಿಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀ’- ಹೊಂಬುಜ ಶ್ರೀಗಳು


ಹೊಂಬುಜ(ರಿಪ್ಪನ್‌ಪೇಟೆ):-‘ಜೈನಧರ್ಮದ ಮೂಲ, ಸಿದ್ದಾಂತಗಳ ಅನುಷ್ಠಾನಗಳ ಪ್ರತಿಪಾದಕರಾಗಿ ಚಾರಿತ್ರö್ಯಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರ ಮುನಿಶ್ರೀಯವರಾಗಿದ್ದರು. ಧರ್ಮ ಪ್ರಸಾರದ ಅಗ್ರಪಂಕ್ತಿಯಲ್ಲಿನ ದಿಗಂಬರ ಮುನಿಚರ್ಯೆಯ ಐತಿಹ್ಯದ ಕುರಿತ ಅವರ ಪ್ರತಿಪಾದನೆಯು ಅನುಕರಣೀಯವಾದುದು’ ಎಂದು ಹೊಂಬುಜಜೈನ ಮಠದ   ಪರಮ ಪೂಜ್ಯಜಗದ್ಗುರು   ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿದರು.

ಸಮೀಪದ ಹೊಂಬುಜ ಶ್ರೀಕ್ಷೇತ್ರದಲ್ಲಿ ಆ. 25ರ ಸೋಮವಾರದಂದು ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಪದಾರೋಹಣದ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದಲ್ಲಿ  ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿ  ‘ಜೈನಾಚಾರವು ವಿಶ್ವದ ಸರ್ವ ಸಂಕಷ್ಟಗಳಿಗೆ ಪರಿಹಾರ ನೀಡುವ ಸೂತ್ರವನ್ನು ಪ್ರತಿಪಾದಿಸುತ್ತದೆ’ಎಂದು ಶ್ರೀಗಳವರು ವಿವರಿಸಿ, ಸ್ಮರಿಸಿ, ವಿನಯಾಂಜಲಿ ಅರ್ಪಿಸಿದರು.

ಆಚಾರ್ಯ ಮುನಿಶ್ರೀ ಶಾಂತಿಸಾಗರ ಮಹಾರಾಜರ ಭಾವಚಿತ್ರಕ್ಕೆ ಶ್ರೀಗಳವರು, ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.