BREAKING NEWS | ಸೂಡೂರು ಗೇಟ್ ಬಳಿ ಭೀಕರ ಅಪಘಾತ – ರಿಪ್ಪನ್‌ಪೇಟೆಯ ಮೂವರು ಯುವಕರು ಗಂಭೀರ
ರಿಪ್ಪನ್‌ಪೇಟೆ : ಇಲ್ಲಿನ ಸೂಡೂರು ಗೇಟ್ ಬಳಿಯ ದೇವಸ್ಥಾನದ ತಿರುವಿನಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಮೂವರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಮಾರುತಿ ಅಲ್ಟೋ ಕಾರು ಹಾಗೂ ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಯುವಕರು ರಸ್ತೆಯಲ್ಲಿ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ಕಂಡುಬಂದಿದೆ.
ಗಾಯಗೊಂಡಿರುವ ಯುವಕರು ರಿಪ್ಪನ್‌ಪೇಟೆ ಮೂಲದ ಯುವಕರು ಎನ್ನಲಾಗುತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಆಂಬುಲೆನ್ಸ್ ಗೆ ಕರೆ ಮಾಡಿ ಒಂದು ಗಂಟೆಯಾದರು ಆಂಬುಲೆನ್ಸ್ ಬಾರದೇ ಗಾಯಾಳುಗಳು ಒದ್ದಾಡುತ್ತಿರುವ ದೃಶ್ಯ ಮನಕಲುಕುವಂತಿದೆ.
ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ತೆರಳಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.