ಸೂಡೂರು ಗೇಟ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ಯುವಕ ಸಾವು
ರಿಪ್ಪನ್‌ಪೇಟೆ : ಇಲ್ಲಿನ ಸೂಡೂರು ಗೇಟ್ ಬಳಿಯ ದೇವಸ್ಥಾನದ ತಿರುವಿನಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಮೂವರು ಯುವಕರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾರುತಿ ಅಲ್ಟೋ ಕಾರು ಹಾಗೂ ಸ್ಪ್ಲೆಂಡರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಯುವಕರು ಗಾಯಗೊಂಡಿದ್ದರು.
ಕಳಸ ಗ್ರಾಮದ ಮನೋಜ್ (19) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ.
ಕೆಂಚನಾಲ ಗ್ರಾಮದ ಅಕ್ಷಯ್ ಎಂಬ ಯುವಕನಿಗೆ ಕಾಲು ಮುರಿತವಾಗಿದ್ದು ಸ್ಥಿತಿ ಗಂಭೀರವಾಗಿದೆ, ರಿಪ್ಪನ್‌ಪೇಟೆ ತೀರ್ಥಹಳ್ಳಿ ರಸ್ತೆ ನಿವಾಸಿ ಮನ್ವಿತ್ ಭಂಡಾರಿ ಗೆ ಕಾಲು ಮುರಿತವಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಗಾರದಲ್ಲಿಸಲಾಗಿದೆ.