ಜಿಲ್ಲಾ ಸುದ್ದಿ:
ನಾಳೆಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ : ಜಾತ್ರಾಮಹೋತ್ಸವಕ್ಕೆ ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿದೆ : ಬಿ ಸ್ವಾಮಿರಾವ್
ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದ್ದು ಸೆ.೧೩ ರಿಂದ ೨೩ ರವರೆಗೆ ಎರಡು ಮಂಗಳವಾರ ಎರಡು ಶುಕ್ರವಾರದೊಂದು ಜಾತ್ರೆ ಅಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಜೇನುಕಲ್ಲಮ್ಮ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್ ತಿಳಿಸಿದರು. ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿತೃಪಕ್ಷದಲ್ಲಿ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಸೆಪ್ಟಂಬರ್ ೧೩ ಮತ್ತು ೧೬ ಹಾಗೂ ೨೦ ಮತ್ತು ೨೩ ಮಂಗಳವಾರ ಹಾಗೂ ಶುಕ್ರವಾರದೊಂದು ಈ ಜಾತ್ರಾಮಹೋತ್ಸವ ಜರುಗಲಿದೆ ಸಕಲ ಭಕ್ತಾಧಿಗಳು ಹೆಚ್ಚಿನ…
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಪಣ – ಸಂಸದ ಬಿ ವೈ ರಾಘವೇಂದ್ರ
ರಿಪ್ಪನ್ ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಉನ್ನತಿಗಾಗಿ ಸಮುದಾಯ ಭವನಗಳ ನಿರ್ಮಾಣವಾಗಿದೆ ಕೆಲವು ಮಾತ್ರ ನಿರ್ಮಾಣ ಹಂತದಲ್ಲಿದ್ದು ಶೀಘ್ರ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶಿವ ಮಂದಿರ ಹಾಗೂ ಶ್ರೀ ರಾಮಭವನದ ಕಾಮಗಾರಿಯನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.ನೂತನ ರೈಲ್ವೇ ಕಾಮಗಾರಿ, ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ, ವಿಶ್ವ ವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ಹಾಗೂ ಹೊಸನಗರ ತಾಲೂಕಿನ ಕೊಡಚಾದ್ರಿ…
ರಿಪ್ಪನ್‌ಪೇಟೆ ಸ್ನೇಹ ಬಳಗದ ವತಿಯಿಂದ ಮಾನವೀಯ ಕಾರ್ಯ
ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಇಂದು ಪಟ್ಟಣದ ಹಲವು ಕಡೆ ಮಾನವೀಯ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ 1995 96ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇಂದು ಹೊರ ದೇಶಗಳಲ್ಲಿ & ಹೊರ ರಾಜ್ಯಗಳಲ್ಲಿ ಮತ್ತು ರಿಪ್ಪನ್ ಪೇಟೆಯ ಸುತ್ತಮುತ್ತಲೂ ಇರುವ ಸ್ನೇಹಿತರನ್ನು ಒಳಗೊಂಡು ಪಟ್ಟಣದ ಸುತ್ತಮುತ್ತಲಿನ ನೊಂದ ಕುಟುಂಬಕ್ಕೆ ಆಸರೆಯಾಗುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಹಾಲುಗುಡ್ಡೆಯ…
ಹೃದಯಾಘಾತದಿಂದ ರೈತ ಸಾವು : ಅರಣ್ಯಾಧಿಕಾರಿಗಳ ಕಿರುಕುಳವೇ ರೈತನ ಸಾವಿಗೆ ಕಾರಣ : ಆರ್ ಎಂಎಂ ಮತ್ತು ಬೇಳೂರು ಆರೋಪ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ನೆಣೆಬಸ್ತಿ ಗ್ರಾಮದ ರೈತ ಶಬ್ಬೀರ್ ಅಹಮದ್ (71) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು ಈ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಕಾರಣ ಎಂದು ಜಂಟಿ ಪತ್ರೀಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಹಾಗೂ ಮಾಜಿ ಶಾಸಕ,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ. ಹಲವಾರು ದಶಕಗಳಿಂದ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಅರಣ್ಯ ಒತ್ತುವರಿ ಜಾಗ ತೆರವಿಗೆ…
ಭರ್ಜರಿ 20 ಗಂಟೆಗಳ ಭಾರಿ ಜನಸ್ತೋಮದ ಮೆರವಣಿಗೆ ಬಳಿಕ ರಿಪ್ಪನ್‌ಪೇಟೆ ಗಣಪತಿ ವಿಸರ್ಜನೆ :
ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 55 ನೇ ವರ್ಷದ ಗಣೇಶೋತ್ಸವದ ಗಣಪತಿ ವಿಸರ್ಜನೆ 20 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶಾಂತಿಯುತವಾಗಿ ನೆರವೇರಿದೆ. ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 20 ಗಂಟೆಗಳ ಕಾಲ ರಾಜಬೀದಿ ಉತ್ಸವ ನಡೆಯಿತು.ನಿನ್ನೆ ಸಂಜೆ 4.30 ಕ್ಕೆ ಆರಂಭವಾಗಿದ್ದ ಮೆರವಣಿಗೆ ಇಂದು ಮಧ್ಯಾಹ್ನ12.30 ಕ್ಕೆ ಕೊನೆಗೊಂಡು ವಿಸರ್ಜನೆ ನೆರವೇರಿತು. ರಾಜ್ಯ ಗೃಹ…
ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ವೈಭವದ ರಾಜಬೀದಿ ಉತ್ಸವ ಪ್ರಾರಂಭ : ಭಾರಿ ಜನಸ್ತೋಮ
ರಿಪ್ಪನ್‌ಪೇಟೆ;-ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟç ಸೇನಾ ಸೇವಾ ಸಮಿತಿಯ ೫೫ ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಇಂದು ಸಂಜೆ ೬ ಗಂಟೆಗೆ ಅರಂಭಗೊಂಡಿತು. ಕರೋನಾ ಕಾರಣ ಕಳೆದೆರಡು ವರ್ಷ ಅದ್ದೂರಿ ಮೆರವಣಿಗೆ ನಡೆದಿರಲಿಲ್ಲ ಯುವಕರ ಮಹಿಳೆಯರು ಪುಟಾಣಿ ಮಕ್ಕಳ ವಾದ್ಯಕ್ಕೆ ತಕ್ಕ ಕುಣಿತದೊಂದಿಗೆ ಚಾಲನೆ ರಾಜಬೀದಿ ಉತ್ಸವದಲ್ಲಿ ವಿವಿಧ ಹೆಸರಾಂತ ಜಾನಪದ ಕಲಾತಂಡಗಳಾದ ಡೊಳ್ಳೂ ಕುಣಿತ ತಮಟೆಬಡಿತ.ಕೀಲುಕುದುರೆ ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರಿಂದ…
ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಪ್ರವೇಶ ಪಡೆಯಲು ಹೆಲ್ಮೆಟ್ ಕಡ್ಡಾಯಗೊಳಿಸಲಿ : ಬೇಳೂರು ಆರೋಪ
ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ಸೇರಿದಂತೆ ಪ್ರತಿಯೊಬ್ಬರು ಶಿರ ಕವಚ (ಹೆಲ್ಮೇಟ್) ಧರಿಸುವುದು ಕಡ್ಡಾಯಗೊಳಿಸಲಿ ಎಂದು ಗೋಪಾಲಕೃಷ್ಣ ಬೇಳೂರು ಹೇಳಿದರು. ಅವರು ಇಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ ಈ ನಿಯಮ ಇನ್ನು ಮುಂದೆ ಈ ಸರ್ಕಾರಿ ಆಸ್ಪತ್ರೆಗೆ ಪ್ರವೇಶ ಪಡೆಯಲು ಕಡ್ಡಾಯ ಮಾಡಬೇಕಾಗಿದೆ ಎಂದರು. ಸರ್ಕಾರಿ ಆಸ್ಪತ್ರೆ ಕಟ್ಟಡವು ಶಿಥಿಲಗೊಂಡಿದ್ದು ಮೇಲ್ಚಾವಣಿಯ ಸಿಮೆಂಟಿನ ಗಾರೆ ಸೀಲಿಂಗ್ ಗಳು ಅತಿಯಾದ…
ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …??
ರಿಪ್ಪನ್‌ಪೇಟೆ : ಪಟ್ಟಣದ ತಿಲಕ್ ಮಂಟಪದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 55 ನೇ ವರ್ಷದ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ ನಾಳೆ(10-09-2022) ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದೆ.ಈ ಬಾರಿ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಅದ್ದೂರಿ ಮೆರವಣಿಗೆ ನಡೆದಿರಲಿಲ್ಲ ನಾಳೆ ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ ಕಲಾ ತಂಡಗಳು,ಮಂಗಳವಾದ್ಯ,ಚಂಡೇಮೇಳ ,ಡೊಳ್ಳು ಕುಣಿತ ,ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾ…
ಶಿವಮೊಗ್ಗ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ
ಶಿವಮೊಗ್ಗ ನಗರದಲ್ಲಿ ಹಿಂದೂ ಮಹಾಸಭಾದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು. ನಗರದಲ್ಲಿ ಮೆರವಣಿಗೆ ಸಾಗುವ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲಿದ್ದು,. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ರ್‍ಯಾಪಿಡ್ ಆಕ್ಷನ್ ಫೋರ್ಸ್ ಸಹ ಬೀಡುಬಿಟ್ಟಿದೆ. ಗಾಂಧಿ ಬಜಾರ್, ಸೇರಿದಂತೆ ಹಲವು ಕಡೆಗಳಲ್ಲಿ ಪ್ರಸಾದ ವಿನಿಯೋಗ,…
ಕೆರೆಹಳ್ಳಿ ಹೋಬಳಿಯ ಭಾರಿ ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ :
ರಿಪ್ಪನ್ ಪೇಟೆ ; ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಅವರು ಅಧಿಕಾರಿಗಳ ಜತೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ತೊಗರೆ ಹಳ್ಳದ ಸಂಪರ್ಕ ರಸ್ತೆ, ಗಾಮನಗದ್ದೆ – ಚಿಲುಮೆ ಜಡ್ಡು ರಸ್ತೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಮಚಲಿ ಜಡ್ಡು ಸಂಪರ್ಕ ರಸ್ತೆಯ ದುಸ್ಥಿತಿ ಕಣ್ಣಾರೆ ಕಂಡರು. ಮಳೆ…