ರಿಪ್ಪನ್ ಪೇಟೆ : ಆಲುವಳ್ಳಿ,ಕೆಂಚನಾಲ ಸುತ್ತಮುತ್ತ ಆಕಾಶದಲ್ಲಿ ವಿಚಿತ್ರ ಕೌತುಕ : ಬೆಚ್ಚಿಬಿದ್ದ ಜನರು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಆಲುವಳ್ಳಿ ಹಾಗೂ ಕೆಂಚನಾಲ ಗ್ರಾಮದಲ್ಲಿ ಇಂದು ಸರಿಯಾಗಿ ಆಕಾಶದಲ್ಲಿ ಸಾಲು ಸಾಲಾಗಿ ಸಣ್ಣ ಸಣ್ಣ ದೀಪಗಳು ಹಾದು ಹೋಗಿ ಅಚ್ಚರಿ ಮೂಡಿಸಿವೆ. ಬಾಹ್ಯಾಕಾಶದಲ್ಲಿ ನಡೆಯುವ‌ ಕೌತುಕಗಳಿಗೆ ಕೊನೆಯೇ ಇಲ್ಲ. ಆಕಾಶದಲ್ಲಿ ಅದೇ ನಕ್ಷತ್ರ, ಅದೇ ಚಂದ್ರ, ಅದೇ ಸೂರ್ಯ ಇದ್ದಿದ್ದರೆ ಯಾವ ಕುತೂಹಲವೂ ಅನುಸುತ್ತಿರಲಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಏಕಾಏಕಿ ಲೈಟ್ ಗಳ ಸರಣಿ ಹಾದು ಹೋದರೆ ನಿಮ್ಮನ್ನ ಅಚ್ಚರಿ ಪಡಿಸದೆ ಇರದು. ಇಂತಹ ಒಂದು ಕೌತುಕಕ್ಕೆ ಹೊಸನಗರ ತಾಲೂಕಿನ ಕೆಂಚನಾಲ,ಆಲುವಳ್ಳಿ…

Read More

ಕ್ಷುಲ್ಲಕ ಕಾರಣಕ್ಕೆ ಪದವಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಕೊಪ್ಪ: ಇಲ್ಲಿನ ಪ್ರಥಮ ಧರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಮಾ (20)  ಸೋಮವಾರ ಬೆಳಿಗ್ಗೆ ಕುದುರೆಗುಂಡಿಯಲ್ಲಿರುವ ಮನೆಯಲ್ಲಿ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮನೆಯಲ್ಲಿ ಮೃತ ಸುಮಾ ಅವರು ನೀರನ್ನು ಬಿಸಿ ಮಾಡಿ ತಂದಿಟ್ಟಿದ್ದರು. ಈ ವೇಳೆ ಅಕ್ಕನ ಏಳು ತಿಂಗಳ ಮಗುವು ಬಿಸಿ ನೀರನ್ನು ಮುಟ್ಟಿದ ಪರಿಣಾಮ ಮಗುವಿನ ಮೈಯಲ್ಲಿ ಗುಳ್ಳೆಗಳು ಬಂದಿದ್ದವು.  ತಕ್ಷಣ ಮಗುವಿನ ಪೋಷಕರು ಕೊಪ್ಪ ಸರ್ಕಾರ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು.  ಮಗುವಿಗೆ…

Read More

ಜಾತಿ ಪದ್ದತಿಯನ್ನು ವಿನಾಶಗೊಳಿಸಬೇಕು : ಡಾ.ಸತೀಶಕುಮಾರ ಹೊಸಮನಿ

ಶಿವಮೊಗ್ಗ : ವರ್ಣಾಶ್ರಮವನ್ನು ತಿದ್ದುವುದಲ್ಲ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ನುಡಿದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ, ಕವಿಶೈಲದ ಹೆಮಾಂಗಣ ಸಭಾಂಗಣದಲ್ಲಿ  ಡಿ. 19 ರ ಭಾನುವಾರ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಇವರು ಹಮ್ಮಿಕೊಂಡಿದ್ದ ಕುವೆಂಪುರವರ ಕನ್ನಡ ಡಿಂಡಿಮವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಓಮಿಕ್ರಾನ್ ಸೋಂಕು ಪತ್ತೆ : ಮಲೆನಾಡಿಗೂ ಕಾಲಿಟ್ಟ ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ

ಶಿವಮೊಗ್ಗ : ಹಲವು ದೇಶದಲ್ಲಿ ಆರ್ಭಟ ನೆಡೆಸುತ್ತಿರುವ ಕೊರೋನಾ ವೈರಸ್ ನ ಹೊಸ ತಳಿ ಒಮಿಕ್ರಾನ್ ಶಿವಮೊಗ್ಗ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ.  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 20 ವರ್ಷದ ಯುವತಿಯೊಬ್ಬರಿಗೆ ಒಮಿಕ್ರಾನ್ ಸೊಂಕು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.  ಡಿಸೆಂಬರ್ 7ರಂದು ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಗಂಟಲ ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್…

Read More

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಹರಿಹಾಯ್ದ ಶಾಸಕ ಹರತಾಳು ಹಾಲಪ್ಪ :

ಸಾಗರ : ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ನನ್ನನ್ನು ವಲಸಿಗ ಎಂದು ಟೀಕೆ ಮಾಡಿದ್ದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ರಾಜಕಾರಣದಲ್ಲಿ ವಲಸೆ ಸಹಜ. ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಕೇರಳಕ್ಕೆ ಬಂದಿದ್ದು, ಡಿ.ಕೆ.ಶಿವಕುಮಾರ್ ಸಾತನೂರಿನಲ್ಲಿ ಸ್ಪರ್ಧೆ ಮಾಡಿದ್ದು, ಸಿದ್ದರಾಮಯ್ಯ ಬಾದಮಿಯಿಂದ ಸ್ಪರ್ಧೆ ಮಾಡಿದ್ದು ವಲಸೆ ರಾಜಕಾರಣವಲ್ಲವೇ ಎಂದು ಬೇಳೂರಿಗೆ ಟಾಂಗ್ ನೀಡಿದ ಹಾಲಪ್ಪ, ನಮ್ಮ ಪಕ್ಷದಲ್ಲೂ ಸಹ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಹೋಗಿ ಸ್ಪರ್ಧೆ ಮಾಡಿದ ಉದಾಹರಣೆ ಇದೆ. ಮಾಜಿ…

Read More

ವಲಸೆ ಬಂದು ಹೋಗುವ ಶಾಸಕರಿಗೆ ಸಾಗರ ತಾಲೂಕಿನ ಬಗ್ಗೆ ಏನು ಗೊತ್ತು : ಬೇಳೂರು ಗೋಪಾಲಕೃಷ್ಣ

ಸಾಗರ. ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ  ಸಾಗರದ ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು  ಶಾಸಕ ಹಾಲಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ ಶಾಸಕ ಹಾಲಪ್ಪ ತುಮರಿ ಭಾಗದ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡುವಲ್ಲಿ ವಿಫಲವಾಗಿದ್ದಾರೆ. ಕ್ರಿಕೇಟ್ ನೋಡುತ್ತ ಕುಳಿತ ಶಾಸಕ ಹಾಲಪ್ಪ ಸರಿಯಾದ ಸಮಯಕ್ಕೆ ತುಮರಿ ಗ್ರಾಮಕ್ಕೆ ಹೋಗಿದ್ದರೆ ಎರಡು ಜೀವ ಉಳಿಯುತ್ತಿತ್ತು ಇವರಿಗೆ ಎರಡು ಜೀವಕ್ಕಿಂತ ಕ್ರಿಕೆಟ್ ನೋಡುವುದೆ ಮುಖ್ಯವಾಗಿದೆ. ಆಕ್ಸಿಜನ್ ವ್ಯವಸ್ಥೆ ಇಲ್ಲದ ಸೆಕೆಂಡ್ ಹ್ಯಾಂಡ್ ಆಂಬುಲೆನ್ಸ್ ನೀಡಿ ಪ್ರಚಾರಕ್ಕಾಗಿ ನಗರಸಭೆಯಲ್ಲಿ ಸಮಾರಂಭ…

Read More

ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾಗಿ ಆದರ್ಶ್ ಹುಂಚದ ಕಟ್ಟೆ ನೇಮಕ :

ರಾಷ್ಟ್ರೀಯ ಯುವ ಕಾಂಗ್ರೆಸ್ ನ ವಕ್ತಾರನ್ನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆದರ್ಶ್ ಹುಂಚದಕಟ್ಟೆ ರವರನ್ನು ಆಯ್ಕೆ ಮಾಡಲಾಗಿದೆ. 27 ಜನರನ್ನ ಯುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆದರ್ಶ ಹುಂಚದ ಕಟ್ಟೆ ಮತ್ತು ಮಂಗಳೂರಿನ ಸುರಯ್ಯ ಅಂಜುಂ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ವಕ್ತಾರರ ಪಟ್ಟಿ ಬಿಡುಗಡೆ ಮಾಡಿರುವ‌ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ‌ ಬಿ.ವಿ.ಶ್ರೀನಿವಾಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್…

Read More

ಶಿವಮೊಗ್ಗದ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ : ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

ಶಿವಮೊಗ್ಗ : ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಖಾಸಗಿ ಲಾಡ್ಜ್ ನಲ್ಲಿ ಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಇಂದು ಬಜರಂಗರಂಗ ದಳ ಸಂಘಟನೆಯ ಕಾರ್ಯಕರ್ತರು ಖಾಸಗಿ ಹೋಟೆಲ್ ಎದುರು ಪ್ರತಿಭಟನೆ ನಡೆಸಿತು ನಿನ್ನೆಯ ದಿನ ಹೊನ್ನಾಳಿ ರಸ್ತೆ ಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನು ಹಿಂದೂ ಯುವತಿಯನ್ನ ಕರೆದುಕೊಂಡು ಬಂದು ಉಳಿದಿರುವುದು ಬಜರಂಗದಳದ ಸಂಘಟನೆಯ ಕಾರ್ಯಕರ್ತರ ಕಣ್ಣು ಕೆಂಪಾಗುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಯುವಕ ಮತ್ತು ಯುವತಿಯರು ಹಳೆಯ ಪರಿಚಯದ ಮೇಲೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದ್ದು….

Read More

ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದೇ ಸಾಗರದಲ್ಲಿ ನವಜಾತ ಶಿಶು ಸಾವು !

ಸಾಗರ :  ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದೇ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತುಮರಿಯಲ್ಲಿ ನಡೆದಿದೆ. ತುಮರಿ ಸಮೀಪದ ಚದರವಳ್ಳಿ ಗ್ರಾಮದ ಚೈತ್ರಾ ಎನ್ನುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಅ್ಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಗರ್ಭಿಣಿಯನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಈ ವೇಳೆ ಮಹಿಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಡವಾಗಿ ಬಂದಿದ್ದರಿಂದ ತಾಯಿ- ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚಿನ ಚಿಕಿತ್ಸೆಗೆ ಸಾಗರ ತಾಲೂಕು…

Read More

ಒಕ್ಕಲಿಗರ ಸಂಘದ ಚುನಾವಣೆ ಸಿರಿಬೈಲ್ ಧರ್ಮೇಶ್ ಮುನ್ನಡೆ : ಗೆಲುವು ಬಹುತೇಕ ಖಚಿತ

ರಾಜ್ಯ ಒಕ್ಕಲಿಗರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಮೂರನೇ ಸುತ್ತಿನಲ್ಲಿ ಧರ್ಮೇಶ್ ಸಿರಿ ಬೈಲ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಎಸ್ ಕುಮಾರ್ ಮುನ್ನಡೆ ಪಡೆದಿದ್ದ ಎಸ್ ಕುಮಾರ್ ಮೂರನೇ ಸುತ್ತಿನಲ್ಲಿ ಹಿನ್ನಡೆ ಆಗಿದೆ. ಎರಡನೇ ಸುತ್ತಿನಲ್ಲಿ 2436 ಮತ ಪಡೆದಿದ್ದ ಕುಮಾರ್ ಮೂರನೇ ಸುತ್ತಿನಲ್ಲಿ 2912 ಮತ ಪಡೆದುಕೊಂಡಿದ್ದಾರೆ. ಅದರಂತೆ ಧರ್ಮೇಶ್ ಸಿರಿಬೈಲ್ 3265 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಧರ್ಮೇಶ್ ಅವರು ನಾಲ್ಕನೇ ಸುತ್ತಿನಲ್ಲಿಯೂ ಹೆಚ್ಚು…

Read More