ಜಿಲ್ಲಾ ಸುದ್ದಿ:
ಜ.18 ರಂದು ಕೆಂಚನಾಲದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ – ಜಾತ್ರಾ ಮಹೋತ್ಸವಕ್ಕೆ ಹರಿದು ಬರಲಿರುವ ಜನ ಸಾಗರ
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಕೆಂಚನಾಲದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಜನವರಿ ೧೮ ರಂದು ಬುಧವಾರ ಮುಂಜಾನೆ ಬ್ರಾಹ್ಮಿ ಮೂಹರ್ತದಲ್ಲಿ ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರ್ಷದಲ್ಲಿ ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರದೊಂದು ಬರುವ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿದೆ.ಜಮೀನಿನಲ್ಲಿ ಹಾಕಿರುವ ಬೆಳೆ ಸಂವೃದ್ದವಾಗಿ ಯಾವುದೇ ರೋಗ ಕಾಣಿಸಿಕೊಳ್ಳದಂತೆ ಸಂತಾನ ಭಾಗ್ಯ…
ಸಾಲದ ಒಡೆಯನಾದ ನನ್ನ ಮನೆಗೆ ಈಡಿ,ಐಟಿ ಬಂದರೆ ಅವರೆ ಕೊಟ್ಟು ಹೋಗಬೇಕು – ಕಿಮ್ಮನೆ ರತ್ನಾಕರ್|kimmane
ಶಿವಮೊಗ್ಗ : ಬುಧವಾರ ತೀರ್ಥಹಳ್ಳಿಯಲ್ಲಿ ನಡೆದ ಇಡಿ ದಾಳಿಯನ್ನೂ ಬಿಜೆಪಿ ರಾಜಕೀಯ ಪ್ರೇರಿತವಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಥಹಳ್ಳಿಯಲ್ಲಿ ನಡೆದ ಘಟನೆ ಕೆಲವು ಮಾಧ್ಯಮಗಳಲ್ಲಿ ಸ್ವಯಂ ಘೋಷಿತ ಹೇಳಿಕೆ ಆಗಿದೆ. ತೀರ್ಥಹಳ್ಳಿಗೆ ನಿನ್ನೆ ಇಡಿ ಬಂದಿದ್ದರು. ಕಚೇರಿಗೆ ಬಂದು ಕರೆಮಾಡಿದ್ದರು. 2015 ರಲ್ಲಿ 10 ಲಕ್ಷ ರೂ. ಹಣವನ್ನ ಕಟ್ಟಡದ ಅಡ್ವಾನ್ಸ್ ನೀಡಲಾಗಿದೆ. ಇದನ್ನ ರಾಜಕೀಯವಾಗಿ ಇಡಿ ದಾಳಿ ಎಂದು ಬಣ್ಣಿಸಲಾಗುತ್ತಿದೆ ಎಂದರು….
ರಾಷ್ಟ್ರೀಯ ಕ್ರೀಡಾಪಟು ಬೆಳ್ಳಿ ಭರತ್ ರಾಜ್ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ|volleyball
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿಯಲ್ಲಿ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ದಿವಂಗತ ಭರತ್ ರಾಜ್ ( ಬೆಳ್ಳಿ ) ಸ್ಮರಣಾರ್ಥ ವರಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಹಾರಂಬಳ್ಳಿ ವತಿಯಿಂದ ಪ್ರಥಮ ವರ್ಷದ ಗ್ರಾಮೀಣ ವಾಲಿಬಾಲ್ ಪಂದ್ಯಾವಳಿಯು ಭಾರಿ ಅದ್ದೂರಿಯಾಗಿ ನಡೆಯಿತು. ವಾಲಿಬಾಲ್ ಪಂದ್ಯಾವಳಿಯನ್ನು ಯುವ ಉದ್ಯಮಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ಸಂತೋಷ್ ಆಶ್ರೀತಾ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಯುವಕರು ಕ್ರೀಡಾಕೂಟದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಧ್ಬುತ…
ತೀರ್ಥಹಳ್ಳಿಯ ಶಾರೀಖ್ ಮನೆ ಈಡಿ ದಾಳಿ | ಕಿಮ್ಮನೆ ರತ್ನಾಕರ್ ಕಛೇರಿ ಮೇಲೂ ಈಡಿ ದಾಳಿ ನಡೀತಾ…..?????ಈ ಸುದ್ದಿ ನೋಡಿ
ಶಾರಿಕ್ ಮನೆ ಮೇಲೆ ಈಡಿ ತಂಡ ದಾಳಿ ತೀರ್ಥಹಳ್ಳಿ : ಪಟ್ಟಣದ ಸೊಪ್ಪುಗುಡ್ಡೆಯ ಶಾರಿಕ್ ಅಜ್ಜಿಯ ಮನೆಯ ಮೇಲೆ ಈಡಿ ಅಧಿಕಾರಿಗಳ ತಂಡ ರೈಡ್ ಮಾಡಿದೆ. ಇಂದು ಬೆಳ್ಳಂ ಬೆಳಗ್ಗೆ ದಾಳಿ ನೆಡೆಸಿದ್ದಾರೆ. ದಾಳಿಯ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಮಾಹಿತಿ ನೀಡುತ್ತಿಲ್ಲ. ನಗರದಲ್ಲಿ ಹಲವು ಕಡೆ ಕಡೆ ಶೋಧ ಮಾಡುವ ಸಾಧ್ಯತೆ ಇದ್ದು ಈಗಾಗಲೇ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕಿಮ್ಮನೆ ಕಚೇರಿ ಮೇಲೆ ದಾಳಿ ಮಾಡಿದ್ರ ಅಧಿಕಾರಿಗಳು ? ಶಾರಿಕ್ ಅಜ್ಜಿ ಮನೆಯ ಮೇಲೆ ದಾಳಿ…
ಅಮ್ಮನಘಟ್ಟ ಕಪ್ಪು ಬಾವುಟ ಪ್ರದರ್ಶನ ಪ್ರಕರಣ – ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ವಿರುದ್ದ ಪ್ರತಿಭಟನೆಯೇ ಹೊರತು ಶಾಸಕರ ವಿರುದ್ದವಲ್ಲ – ಚಿದಂಬರಂ ಸ್ಪಷ್ಟನೆ|black
ರಿಪ್ಪನ್‌ಪೇಟೆ : ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ವಿರುದ್ದವೇ ಹೊರತು ಶಾಸಕರ ವಿರುದ್ದವಲ್ಲ ಎಂದು ಮಾರುತಿಪುರ ಗ್ರಾಪಂ ಅಧ್ಯಕ್ಷ ಎಚ್ ಬಿ ಚಿದಂಬರ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ಚಿದಂಬರಂ ಬಳಿ ದೂರವಾಣಿ ಮೂಲಕ ಸ್ಪಷ್ಟನೆ ಕೇಳಿದಾಗ ಮಾತನಾಡಿದ ಅವರು ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿರುವುದು ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ…
ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ – ಹರತಾಳು ಹಾಲಪ್ಪ|halappa
ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಪೊಲೀಸರ ಬಂದೂಕು ಮತ್ತು ಲಾಟಿ ಮಾತನಾಡುತ್ತದೆ ಎಂದು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದ್ದಾರೆ. ಸಾಗರದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೀಡಿದ ಬಜರಂಗ ದಳದ ಮುಖಂಡ ಸುನೀಲ್ ಮೇಲೆ ಹಲ್ಲೆ ಯತ್ನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು 18 ಗಂಟೆಯಲ್ಲಿ ಬಂಧಿಸಿದ್ದಾರೆ. ಘಟನೆ ಖಂಡಿಸಿ ಇಂದು ಸಾಗರ ಬಂದ್ ಕೂಡ ಶಾಂತಿಯುತವಾಗಿ ಯಶಸ್ವಿಯಾಗಿದೆ. ಹಲ್ಲೆಗೆ ಕಾರಣ ಏನೇ ಆಗಿರಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಂಥವರ ವಿರುದ್ಧ…
ರಾಜ್ಯದ 224 ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ದಿಸಲಿದೆ – ಭಾಸ್ಕರ್ ರಾವ್ | ರಿಪ್ಪನ್‌ಪೇಟೆಯಲ್ಲಿ ಬೃಹತ್ ಬೈಕ್ ರ್‍ಯಾಲಿ – ಸಮಾವೇಶ|AAP
ರಿಪ್ಪನ್‌ಪೇಟೆ : ರಾಜ್ಯದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ತಿಳಿಸಿದ್ದಾರೆ. ಸೋಮವಾರ ಪಟ್ಟಣದಲ್ಲಿ ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷ ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ನಂತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು 10 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವು ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು, ದೆಹಲಿ ಹಾಗೂ ಪಂಜಾಬ್‌ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು,…
ಸಾಗರ ಬಂದ್ ಸಂಪೂರ್ಣ ಯಶಸ್ವಿ – ಅಜಾದ್ ರಸ್ತೆಯಲ್ಲಿ ಮಾತಿನ ಚಕಮಕಿ : ಕೊಲೆ ಯತ್ನ ಘಟನೆಗೆ ರೋಚಕ ಟ್ವಿಸ್ಟ್|sagara
ಸಾಗರದಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿರುವ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಸಾಗರದ ಮೀನು ಮಾರುಕಟ್ಟೆಯ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಂದ್ ಮಾಡಿಸಲು ಬಂದಾಗ ಮಾತಿನ ಚಕಮಕಿ ನಡೆದಿದೆ. ಮಾರ್ಕೆಟ್ ನಲ್ಲಿ ಹಿಂದೂ ಸಂಘಟನೆಯ ಗುಂಪು ಸಾಗರದ ಬಂದ್ ಹಿನ್ಬಲೆಯಲ್ಲಿ ಮೀನು ಮಾರ್ಕೆಟ್ ಬಂದ್ ಮಾಡಿಸಲು ಮುಂದಾದಾಗ ಸ್ಥಳೀಯರು ಬಂದ್ ಮಾಡಲು ನಿರಾಕರಿಸಿದ್ದಾರೆ. ಪರಸ್ಪರ ಘೋಷಣೆ ಕೂಗಲಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಕೂಗಿದರೆ ಸ್ಥಳೀಯರು ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಕೂಗಿದ್ದಾರೆ. ಪರಸ್ಪರ…
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿಗೆ ಶಂಕುಸ್ಥಾಪನೆ|ammanaghatt
ರಿಪ್ಪನ್ ಪೇಟೆ : ಧಾರ್ಮಿಕ ಕ್ಷೇತ್ರಗಳು ಭಕ್ತಾದಿಗಳ ಪಾಲಿಗೆ ಶ್ರದ್ಧಾ ಭಕ್ತಿಯತಾಣವಾಗಬೇಕು. ಭೇಟಿ ಇಟ್ಟಾಗ ಮನಸ್ಸಿಗೆ ನೆಮ್ಮದಿ ತರುವಂತಾಗಬೇಕು, ಜೋಗ ಜಲಪಾತ ಜಲಮಯವಾಗಿದೆ. ಅಮ್ಮನಘಟ್ಟ ಜೇನು ಕಲ್ಲಮ್ಮ ದೇವಸ್ಥಾನ ಶಿಲಾಮಯವಾಗಿದೆ ಎಂದು ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಐತಿಹಾಸಿಕ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹೊಸಕೆಸರೆ ಗ್ರಾಮದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಶಿಲಾಮಯ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ…
ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆ ಎದುರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನೆ|kimmane
ತೀರ್ಥಹಳ್ಳಿ : ಮನೆ ಮುಂದೆ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೊಲೀಸರೆ ಮರಳು ತುಂಬಿ ವಾಹವನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ‘ಹೆದ್ದೂರು ಬಳಿ ಮನೆಯೊಂದರ ಮುಂದೆ ಪಿಕಪ್ ವಾಹನಕ್ಕೆ ಪೊಲೀಸರೆ ಮರಳು ತುಂಬಿದ್ದಾರೆ. ಅದನ್ನು ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಕಪ್ ವಾಹನಕ್ಕೆ ಮರಳು ತುಂಬಿದ ಪೊಲೀಸರನ್ನು ಕೂಡಲೆ ಅಮಾನತು ಮಾಡಬೇಕು. ಬಿಜೆಪಿಯವರು…