ಜಿಲ್ಲಾ ಸುದ್ದಿ:
ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಲೆನಾಡಿನ ಪ್ರತಿಭೆ ಅದಿತಿ ರಾಜೇಶ್ ಆಯ್ಕೆ|cricket
ಶಿವಮೊಗ್ಗ : ಜಿಲ್ಲೆಯ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿ ಅದಿತಿ ರಾಜೇಶ್ ಅವರು ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜನವರಿ 18ರಿಂದ 28ರವರೆಗೆ ಮುಂಬೈನಲ್ಲಿ ಟೂರ್ನಿ ನಡೆಯಲಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ರಾಜ್ಯ ಹಿರಿಯ ಮಹಿಳಾ ತಂಡ ಮುನ್ನಡೆಸುತ್ತಿದ್ದು, ಅದಿತಿ ರಾಜೇಶ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟ್ ಕೋಚಿಂಗ್ ಸೆಂಟರ್ನಲ್ಲಿ ಕೋಚ್ ನಾಗರಾಜ್ ಅವರಿಂದ ಅದಿತಿ ತರಬೇತಿ ಪಡೆದಿದ್ದಾರೆ. ಅದಿತಿ ರಾಜೇಶ್ ಅಂತಿಮ ವರ್ಷದ ಬಿ.ಕಾಂ…
ಸಾರ್ವಜನಿಕ ಸಭೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಗೃಹ ಸಚಿವರಿಗೆ ಐಪಿಸಿ ಸೆಕ್ಷನ್ ಗಳ ಬಗ್ಗೆ ಅರಿವಿಲ್ಲ – ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿ – ಕೆ ದಿವಾಕರ್|AAP
ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಬೂತ್ ಮಟ್ಟದಿಂದ ಸದೃಡವಾಗಿದೆ,ಯುವಕರು ನಮ್ಮ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗುವ ಮೂಲಕ ನವ ಭಾರತ ನಿರ್ಮಾಣ ಸಂಕಲ್ಪಕ್ಕೆ ಮುನ್ನುಡಿ ಹಾಕುತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹೈಕೋರ್ಟ್ ವಕೀಲ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ ದಿವಾಕರ್ ಹೇಳಿದರು. ಪಟ್ಟಣದ ಆಶ್ರೀತಾ ಸಭಾಂಗಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ದ ಹರಿಹಾಯ್ದರು.ನಮ್ಮ ಪಕ್ಷ ರಾಜ್ಯದಲ್ಲಿ ಈ ಬಾರಿ…
ಮೊರಾರ್ಜಿ ದೇಸಾಯಿ ವಸತಿ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಶಿವಮೊಗ್ಗದ ಮೇಲಿನ ಹನಸವಾಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಇವತ್ತು ಮಧ್ಯಾಹ್ನದ ನಂತರ ಒಬ್ಬರ ಬಳಿಕ ಇನ್ನೊಬ್ಬರು ಅಸ್ವಸ್ಥರಾಗಿದ್ಧಾರೆ. ಹೀಗೆ ಒಟ್ಟು 30 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಅಸ್ವಸ್ಥರಾದ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐದಕ್ಕೂ ಹೆಚ್ಚು ವೈದ್ಯರು ಹಾಗು ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ಧಾರೆ. ಸುಮಾರು 250 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ವಸತಿ ಶಾಲೆಯಲ್ಲಿ ಮಕ್ಕಳು ಊಟವಾದ ಕ್ರಮೇಣ ಅಸ್ವಸ್ಥರಾಗಿದ್ದಾರೆ. ಮಕ್ಕಳಲ್ಲಿ ವಾಂತಿ ಸಮಸ್ಯೆ…
ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಚಿಸಿರುವ “ಆರುಣ್ಯ” ಕಿರುಚಿತ್ರದ ಟ್ರೈಲರ್ ಬಿಡುಗಡೆ|gfgc
ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳೇ ನಿರ್ದೇಶಿಸಿ,ನಟಿಸಿದ ಆರುಣ್ಯ ಕಿರುಚಿತ್ರದ ಟ್ರೈಲರ್ ಮತ್ತು ಸ್ಪೀಕಿಂಗ್ ಏಂಜಲ್ಸ್ ಯೂಟ್ಯೂಬ್ ಚಾನೆಲ್ ನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ವಿಶೇಷ ಪ್ರತಿನಿಧಿ ರಶ್ಮಿ ಬೇಲೂರು ಅನಾವರಣಗೊಳಿಸಿದರು. ನಂತರ ಕಿರುಚಿತ್ರದ ಟ್ರೈಲರ್ ವೀಕ್ಷಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಬಾಳಿ ಬದುಕಿ ತೋರಿಸಬೇಕು,ವಿದ್ಯಾರ್ಥಿನಿಯರು ತಮ್ಮ ಜೀವನದ ಗುರಿಯನ್ನು ಮೊದಲೇ ನಿರ್ಧರಿಸಿಕೊಂಡು ಮನೆಯವರ ಬಳಿ ಹಂಚಿಕೊಳ್ಳುವ ಮೂಲಕ ನೀವಂದುಕೊಂಡಂತೆ ಬದುಕಿ ತೋರಿಸಬೇಕು.ಈ ಕಿರುಚಿತ್ರ ತಂಡದ ಎಲ್ಲಾ…
ನಮ್ಮೂರು ನಮಗೆ ಕಾಶಿ – ನಮ್ಮ ಮನೆಯೇ ಅಯೋಧ್ಯೆ ಆಗಬೇಕು : ಅವಧೂತ ವಿನಯ್ ಗುರೂಜಿ|avadhootha
ರಿಪ್ಪನ್‌ಪೇಟೆ: ಶಾಲೆ ಎಂಬುದು ಅರಿವಿನ ದೇಗುಲ, ಮನುಷ್ಯನಿಗೆ ನಾಗರೀಕತೆ ಬರುವುದು ಶಾಲೆಯಿಂದ. ಸಮಾಜಮುಖಿ ಜ್ಞಾನಾರ್ಜನೆ ಪಡೆದವರು ಕಾಶಿ ಯಾತ್ರೆ ಮಾಡುವ, ರಾಮ ಮಂದಿರ ನಿರ್ಮಿಸುವ ಬದಲು ನಮ್ಮೂರೇ ನಮಗೆ ಕಾಶಿಯಾಗಬೇಕು, ನಮ್ಮ ಮನೆಯನ್ನೇ ರಾಮ ಮಂದಿರ ಅಯೋಧ್ಯೆಯನ್ನಾಗಿ ಪರಿವರ್ತಿಸಬೇಕು ಎಂದು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು. ಸಮೀಪದ ಹೆದ್ದಾರಿಪುರದ ಸಾವಿತ್ರಮ್ಮ ಶ್ರೀರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಶಾಲೆಗಳ ಮುಖ್ಯ ಉದ್ದೇಶವೇ ಮಕ್ಕಳನ್ನು ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ಸಾವಿತ್ರಮ್ಮ…
ಬಿದನೂರಿನಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ – ಪೂರ್ವಭಾವಿ ಸಭೆ|nagara
ಶಾಂತವೇರಿ ಗೋಪಾಲಗೌಡರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸರ್ಕಾರದಿಂದ ಮಾರ್ಚ್ ತಿಂಗಳಲ್ಲಿ ನಡೆಸಲಿದ್ದು ಆ ಹಿನ್ನಲೆಯಲ್ಲಿ ಗೋಪಾಲಗೌಡ ಅಧ್ಯಯನ ವೇದಿಕೆ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಪ್ರಪ್ರಥಮವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ದಲ್ಲಿ ದಿವಂಗತ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ನಗರ ಭಾಗದ ಎಲ್ಲಾ ಪಕ್ಷದ ಸಮಾನ ಮನಸ್ಕ ಮುಖಂಡರ ಜೊತೆ ಚರ್ಚಿಸಲಾಯಿತು. ಜನವರಿ 30 ರಂದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಗೋಪಾಲಗೌಡ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸಭೆ ಕರೆಯಲು…
ಪಿಂಪ್ ಕೆಲಸ ಮಾಡುವವರ ಬಳಿ ಹಣ ಮಾಡಿಕೊಳ್ಳುವ ಸಂಧರ್ಭ ಬಂದರೇ ಆತ್ಮಹತ್ಯೆ ಮಾಡಿಕೊಳ್ಳುವೆ – ಗೃಹಸಚಿವ ಆರಗ ಜ್ಞಾನೇಂದ್ರ|araga
ಕುಖ್ಯಾತ ಕ್ರಿಮಿನಲ್ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಮನೆಗೆ ಸಾವಿರಾರು ಜನ ಬಂದು ಹೋಗುತ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡಲಾಗುವುದಿಲ್ಲ. ಹೀಗಿರುವಾಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ರವಿಯ ಜತೆಗೆ ನನಗೆ ಸಂಪರ್ಕ ಇದ್ದರೆ. ಅವನನ್ನು ಬಂಧಿಸದಂತೆ ತಡೆಯುವುದು ದೊಡ್ಡ ವಿಚಾರವಾಗಿರಲಿಲ್ಲ. ಅಂಥವನ ಹತ್ತಿರ ದುಡ್ಡು ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು…
ನಾಳೆ(15-01-2023) ರಿಪ್ಪನ್‌ಪೇಟೆಯಲ್ಲಿ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ|Ripponpet
ನಾಳೆ ರಿಪ್ಪನ್‌ಪೇಟೆಯಲ್ಲಿ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಪರ್ಡ್ ಚರ್ಚ್ ಆವರಣದಲ್ಲಿ ಭಾನುವಾರ(15-01-2023) ರಾಜ್ಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಯುವವೇದಿ ಅಧ್ಯಕ್ಷ ರಾಬಿನ್ ತಿಳಿಸಿದ್ದಾರೆ. ಪಟ್ಟಣದ ಗುಡ್ ಶೆಪರ್ಡ್ ಯುವವೇದಿ ವತಿಯಿಂದ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ರಾಜ್ಯದ ಹಲವಾರು ಜಿಲ್ಲೆಗಳಿಂದ ಅನೇಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.ಗುಡ್ ಶೆಪರ್ಡ್ ಆವರಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಪ್ರಥಮ ಬಹುಮಾನ 25000/-,ದ್ವಿತೀಯ…
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪೈಪೋಟಿ ಎದುರಿಸಲು ಸಿದ್ದರಾಗಬೇಕು – ಹರತಾಳು ಹಾಲಪ್ಪ|GJC
ರಿಪ್ಪನ್‌ಪೇಟೆ : ಶ್ರೀಮಂತರ ಮತ್ತು ಸರ್ಕಾರಿ ನೌಕರರ ಅಧಿಕಾರಿಗಳ ಮಕ್ಕಳ ಮುಂದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸ್ಪರ್ಧಾತ್ಮಕ ಪೈಪೋಟಿ ನಡೆಸಬೇಕಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರೊಂದಿಗೆ ಬೌದ್ಧಿಕ ಬೆಳವಣಿಗಗೆ ಸಹಕಾರಿಯಾಗಬೇಕು ಎಂದು ಶಾಸಕ ಹರತಾಳು ಹಾಲಪ್ಪ ಕರೆ ನೀಡಿದರು. ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗುರುಗಳ, ತಂದೆ-ತಾಯಿಯರ ಪೋಷಕರ ಮಾರ್ಗದರ್ಶನದೊಂದಿಗೆ ಶಿಸ್ತುಬದ್ದ ಬದುಕಿಗೆ ಸರಿಯಾದ ಮಾರ್ಗದರ್ಶನ ಕೊಡಿಸಬೇಕು. ಇಲ್ಲದಿದ್ದರೆ ಭಾರಿ ಸಂಕಷ್ಟ…
ಹೊಸನಗರ ಬ್ಲಾಕ್ ಕಾಂಗ್ರೆಸ್ (ಅ) ಘಟಕದ ನೂತನ ಅಧ್ಯಕ್ಷರಾಗಿ ಆಸೀಫ಼್ ಭಾಷಾ ನೇಮಕ|congress
ಹೊಸನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರನ್ನಾಗಿ ರಿಪ್ಪನ್‌ಪೇಟೆಯ ಆಸೀಫ಼್ ಭಾಷಾ ರವರನ್ನು ನೇಮಕ ಮಾಡಲಾಗಿದೆ. ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಸದಸ್ಯರೂ ಹಾಗೂ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಆಸೀಫ಼್ ಭಾಷಾ ರವರನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಂದರೇಶ್ ಆದೇಶದಂತೆ ನೇಮಕ ಮಾಡಲಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಲ್ಪಸಂಖ್ಯಾತ ವಿಭಾಗದ…