ಪುನೀತ್ ರಾಜಕುಮಾರ್ ನಾಮಫಲಕಕ್ಕೆ ಬಣ್ಣಹಚ್ಚಿದ ಪ್ರಕರಣ: ಕರವೇ ಹಾಗೂ ಕಸ್ತೂರಿ ಕನ್ನಡ ಸಂಘದಿಂದ ಭಾರಿ ಪ್ರತಿಭಟನೆ

ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಕುಕ್ಕಳಲೆ ಸಂಪರ್ಕ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿತ್ತು.ಗುರುವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಪುನೀತ್ ರಾಜಕುಮಾರ್ ರವರ ನಾಮಫಲಕಕ್ಕೆ ಬಣ್ಣಹಚ್ಚಿ ವಿಕೃತಿ ಮೆರೆದಿದ್ದರು. ಈ ಘಟನೆಯನ್ನು ಖಂಡಿಸಿ ರಿಪ್ಪನ್ ಪೇಟೆಯ ಕಸ್ತೂರಿ ಕನ್ನಡ ಸಂಘ,ಕಲಾ ಕೌಸ್ತುಭ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿಗಳು ರಿಪ್ಪನ್’ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ…

Read More

ಪುನೀತ್ ರಾಜಕುಮಾರ್ ನಾಮಫಲಕವನ್ನು ಅಳಿಸಿದ ಕಿಡಿಗೇಡಿಗಳು:: ಕಿಡಿಗೇಡಿಗಳ ಬಂಧನಕ್ಕೆ ಕಸ್ತೂರಿ ಕನ್ನಡ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಒತ್ತಾಯ :

ರಿಪ್ಪನ್ ಪೇಟೆ :ಕನ್ನಡ ಚಲನಚಿತ್ರ ರಂಗದ ಮೇರುನಟ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಪಟ್ಟಣದ ಸಾಗರದ ರಸ್ತೆಯಲ್ಲಿ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆ ಯವರು ಪುನೀತ್ ರಾಜ್ ಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಗುರುವಾರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿ ಅವಮಾನ ಎಸಗಿದ್ದಾರೆ.  ಕನ್ನಡ ಪರ ಸಂಘಟನೆಗಳು ಮತ್ತು ಗ್ರಾಮಸ್ಥರಿಂದ ಆಕ್ರೋಶ :  ಕನ್ನಡ ಸಿನಿಮಾ ರಂಗದ ಮೇರು ನಟ ಪುನೀತ್ ರಾಜಕುಮಾರ್…

Read More

ಅತಿಥಿ ಉಪನ್ಯಾಸಕರು ಶೂ ಪಾಲಿಶ್, ಬಾರ್ ಗಳಲ್ಲಿ ವೇಟರ್ ಗಳಾಗಿ ಕೆಲಸ ಮಾಡುವ ದುಸ್ಥಿತಿ ಬಂದಿದ್ದರೂ ಸರ್ಕಾರ ಜಾಣಕುರುಡು ತೋರುತ್ತಿದೆ : ತೀರ್ಥಹಳ್ಳಿ ಅತಿಥಿ ಉಪನ್ಯಾಸಕರ ಆರೋಪ , ಪ್ರತಿಭಟನೆ

ತೀರ್ಥಹಳ್ಳಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀಹರ್ಷ ಶಾನುಬೋಗ್ ರವರ ಭಾವಚಿತ್ರ ಹಿಡಿದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ವ್ಯವಸ್ಥೆಯಲ್ಲಿ 11 ಸಾವಿರದಿಂದ 13 ಸಾವಿರೂ ವೇತನ ಪಡೆದು ಇಂದಿನ ಬೆಲೆ ಏರಿಕೆ ಯುಗದಲ್ಲಿ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ ಇಂಥ ಶೋಚನೀಯ ಪರಿಸ್ಥಿತಿಯನ್ನು ಎದುರಿಸಲಾಗದೆ  ಹಲವಾರು…

Read More

ಅಡುಗೆ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪ ವನ್ನು ರಕ್ಷಿಸಿದ ಮಳೆ ಕಾಡಿನ ಉರಗ ತಜ್ಞ ಅಜಯಗಿರಿ :

ಮುಂಜಾನೆ ಎದ್ದು ಅಡಿಗೆ ಮನೆಗೆ ಹೋದಾಗ ಬೃಹತ್ ಕಾಳಿಂಗ ಸರ್ಪವು ಮೂಲೆಯಲ್ಲಿ ಮಲಗಿರುವುದನ್ನು ಕಂಡು ಮನೆಯವರು ಹೌಹಾರಿದ್ದಾರೆ. ಹೊಸನಗರ ತಾಲೂಕಿನ ನಗರ ಹೋಬಳಿ ಕೆಸರೆ ಸಮೀಪದ ಕೂಡ್ಲುಕೊಪ್ಪ ಮಂಜಪ್ಪ ಎಂಬುವವರ ಮನೆಯ ಅಡುಗೆ ಮನೆಯಲ್ಲಿ ಸೇರಿಕೊಂಡಿದ್ದ ಬೃಹತ್ ಕಾಳಿಂಗ ಸರ್ಪ. ಈ ಬಗ್ಗೆ ಮನೆಯವರು ಆಗುಂಬೆ ಮಳೆಕಾಡಿನ ಉರಗ ತಜ್ಞ ಅಜಯಗಿರಿ ಯವರಿಗೆ ವಿಷಯ ಮುಟ್ಟಿಸಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅಜಯಗಿರಿ ಮಂಜಪ್ಪ ರವರ ಅಡುಗೆ ಮನೆ ಸೇರಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆಯ ಸಹಕಾರದೊಂದಿಗೆ…

Read More

ಶಿವಮೊಗ್ಗದ ಹಲವು ಲಾಡ್ಜ್ ಗಳ ಮೇಲೆ ದಿಡೀರ್ ದಾಳಿ – ತಪಾಸಣೆ

ಶಿವಮೊಗ್ಗ : ನಗರದ ಸುಮಾರು 28ಕ್ಕೂ ಅಧಿಕ ವಿವಿಧ ಲಾಡ್ಜ್ ಗಳಲ್ಲಿ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿ, ತಪಾಸಣೆ ಮಾಡಿದ್ದಾರೆ. ನಗರದ ಕೆಲವು ಲಾಡ್ಜ್ ಗಳಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಪೊಲೀಸರು ಈ ರೀತಿ ದಾಳಿ ಮಾಡಿ ತಪಾಸಣೆ ನಡೆಸಿದ್ದು, ಉಳಿದ ಲಾಡ್ಜ್ ತಪಾಸಣೆಯನ್ನು ನಾಳೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ಕೆಲವು…

Read More

ತೀರ್ಥಹಳ್ಳಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಆತ್ಮಹತ್ಯೆ : ಅತಿಥಿ ಉಪನ್ಯಾಸಕರ ಮೇಲಿನ ಸರ್ಕಾರದ ನಿರ್ಲಕ್ಷ್ಯವೇ ಆತ್ಮಹತ್ಯೆಗೆ ಕಾರಣವಾಯಿತಾ ?????

ತೀರ್ಥಹಳ್ಳಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ  ಗಣಕ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರಾಗಿದ್ದ  ಶ್ರೀಹರ್ಷ ಶಾನ್ ಬೋಗ್(38) ಇವರು ತಮ್ಮ ಹೆಬ್ರಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಶ್ರೀಹರ್ಷ ಸುಮಾರು 13 ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಉತ್ತಮ ಉಪನ್ಯಾಸಕ ಎಂದು ಹೆಸರು ಪಡೆದವರು, ಕೊರೊನ ಸಂಕಷ್ಟ ಪರಿಸ್ಥಿತಿ ಜೀವನ ನಿರ್ವಹಣೆಯ ಕಷ್ಟ ಸಾಧ್ಯ, ಅತಿಥಿ ಉಪನ್ಯಾಸರಿಗೆ ಸರ್ಕಾರದ ಸೇವಾ ಭದ್ರತೆ ಆರ್ಥಿಕ ನೆರವು…

Read More

ಪ್ರವೇಶ ಪತ್ರ ಹರಿದು ಹಾಕಿ ಪರೀಕ್ಷೆ ಬಹಿಷ್ಕರಿಸಿದ ಕಾನೂನು ವಿದ್ಯಾರ್ಥಿಗಳು :

ಶಿವಮೊಗ್ಗ : ಕಾನೂನು ವಿದ್ಯಾರ್ಥಿಗಳು ಇಂದು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದರ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಂದು 20 ವಿದ್ಯಾರ್ಥಿಗಳು ಪರೀಕ್ಷೆ ವಿರೋಧಿಸಿ ಪ್ರತಿಭಟಿಸಿದರು. ಎಟಿಎನ್ ಸಿಸಿ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷೆಗೆ ಅವಕಾಶವಿದೆ. ಆದರೆ ಈ ಆನ್ ಲೈನ್ ನ್ನ ವಿಶ್ವವಿದ್ಯಾಲಯ ರದ್ದುಪಡಿಸಿ ಆಫ್ ಲೈನ್ ನಲ್ಲಿ ಮಾತ್ರ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ. ಪಿಯುಸಿ ನಂತರದ ಕಾನೂನು…

Read More

ಕನ್ನಡ ಭಾಷೆಗೆ ಧಕ್ಕೆಯನ್ನುಂಟುಮಾಡುವ ಯಾವುದೇ ಸಂಘಟನೆಯನ್ನು ರಾಜ್ಯದಲ್ಲಿ ಸಕ್ರೀಯವಾಗಿರಲು ಬಿಡಬಾರದು : ವೀರೇಶ್ ಆಲುವಳ್ಳಿ

ರಿಪ್ಪನ್ ಪೇಟೆ : ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಂಘಟನೆಯನ್ನು ನಿಷೇಧಿಸಬೇಕು, ಕನ್ನಡ ಬಾವುಟವನ್ನು ಸುಟ್ಟುಹಾಕುವ, ಕನ್ನಡ ಭಾಷೆಗೆ ಧಕ್ಕೆಯನ್ನುಂಟುಮಾಡುವ ಸಂಘಟನೆಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಕ್ರಿಯವಾಗಿರಲು ಬಿಡಬಾರದು ಎಂದು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಹೇಳಿದರು. ಪೋಸ್ಟ್ ಮ್ಯಾನ್ ನ್ಯೂಸ್ ತಂಡದೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಕೆಲವು ಸಮಾಜಘಾತುಕ ಪುಂಡರು ಕನ್ನಡಿಗರ ಮೇಲೆ ದಾಳಿ ಮಾಡುತ್ತಿದ್ದಾರೆ ಕನ್ನಡಿಗರ ವಾಹನಗಳನ್ನು ಅಡ್ಡಗಟ್ಟಿ ತೊಂದರೆ ನೀಡುತ್ತಿದ್ದಾರೆ, ಅಪಾರ ಪ್ರಮಾಣದ ಸರ್ಕಾರಿ ವಾಹನ ಹಾಗೂ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡುತ್ತಿದ್ದಾರೆ …

Read More

ಶಿವಮೊಗ್ಗದ ಕವಯತ್ರಿ ಕುಮಾರಿ ನಿತ್ಯಶ್ರೀ ಗೆ ರಾಜ್ಯೋತ್ಸವ ಪ್ರಶಸ್ತಿ : ಸತತ ಮೂರು ಪ್ರಶಸ್ತಿ ಮುಡಿಗೇರಿಸಿಕೊಂಡ ಯುವ ಬರಹಗಾರ್ತಿ

ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು ನಿತ್ಯಶ್ರೀ ಆರ್ ಇವರಿಗೆ ಡಿಸೆಂಬರ್ 18ರಂದು ಮಂಡ್ಯದ ಗಾಂಧಿ ಭವನದಲ್ಲಿ  ಕಸ್ತೂರಿ ಸಿರಿಗನ್ನಡ ವೇದಿಕೆಯ  ಕವಿಗೋಷ್ಠಿಯಲ್ಲಿ ಭಾಗಿಯಾಗಿ ನಂತರ ಈ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರು ಪೋತೆರಾ ಮಹಾದೇವು ಮತ್ತು ಮುಖ್ಯ ಅತಿಥಿಗಳಾದ ಹುಲಿಯೂರು ದುರ್ಗ ಲಕ್ಷ್ಮಿನಾರಾಯಣರವರು  ಡಾ. ಶಿವಕುಮಾರ್ ಮತ್ತು ಗುರುಪ್ರಸಾದ್ ವಕೀಲರು ಹಾಗೂ ಇನ್ನಿತರ ಅತಿಥಿ ಗಣ್ಯರ ಸಮ್ಮುಖದಲ್ಲಿ ಉದಯೋನ್ಮುಖ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವರ್ಷದಲ್ಲಿ ಸತತ ಮೂರು…

Read More

ತೀರ್ಥಹಳ್ಳಿಯಲ್ಲಿ ಈ ಬಾರಿ ಸಂಭ್ರಮದ ಅದ್ದೂರಿ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ

ತೀರ್ಥಹಳ್ಳಿ: ಮಲೆನಾಡಿನ ಸುಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಜನವರಿ 2,3,4 ರಂದು ನಡೆಯಲಿದ್ದು  ಈ ಬಾರಿ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆಜಾತ್ರೆಯನ್ನು ಸಂಭ್ರಮ ಹಾಗೂ ವೈಭವಯುತವಾಗಿ ಆಚರಿಸುವುದಾಗಿ ಸಮಿತಿ ಸಂಚಾಲಕರಾಗಿರುವ ಸೊಪ್ಪುಗುಡ್ಡೆ ರಾಘವೇಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂದಾಜು 12 ಲಕ್ಷ ರೂ ಮೊತ್ತದ ಬಜೆಟ್ ನೊಂದಿಗೆ  3 ದಿನಗಳ ಕಾಲ ನೆಡೆಯಲಿರುವ ಅದ್ದೂರಿ ಜಾತ್ರೆಗೆ ಸಮಿತಿ ಸಂಚಾಲಕರಾಗಿರುವ ಸೊಪ್ಪುಗುಡ್ಡೆ ರಾಘವೇಂದ್ರ ಸರ್ವರನ್ನು ಸ್ವಾಗತಿಸಿದ್ದಾರೆ.

Read More