ಭಾರಿ ಬಹುಮತದಿಂದ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಲಿದ್ದಾರೆ – ಆರ್ ಎಂ ಮಂಜುನಾಥ್ ಗೌಡ|RMM
ಭಾರಿ ಬಹುಮತದಿಂದ ಕಿಮ್ಮನೆ ಗೆಲುವು ಸಾಧಿಸಲಿದ್ದಾರೆ – ಆರ್ ಎಂ ಮಂಜುನಾಥ್ ಗೌಡ ರಿಪ್ಪನ್‌ಪೇಟೆ : ತೀರ್ಥಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಹಕಾರಿ ವಿಭಾಗದ ಡಾ.ಆರ್.ಎಂ.ಮಂಜುನಾಥ್ ಗೌಡ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತೀರ್ಥಹಳ್ಳಿ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಗೊಂದಲ,ಭಿನ್ನಾಭಿಪ್ರಾಯ ಇಲ್ಲ,ಸಣ್ಣ,ಪುಟ್ಟ ಭಿನ್ನಾಭಿಪ್ರಾಯ ಗಳಿರಬಹುದು ಅದನ್ನು ಬಗೆಹರಿಸಿಕೊಂಡು ಪ್ರೀತಿ,ವಿಶ್ವಾಸದೊಂದಿಗೆ ಒಂದಾಗಿ ನಮ್ಮ ಪಕ್ಷವನ್ನು ಗೆಲ್ಲಿಸಲಿದ್ದೇವೆ.ಟಿಕೆಟ್ ಘೋಷಣೆ ಮುನ್ನ ಇದ್ದ ಭಿನ್ನಾಭಿಪ್ರಾಯ ಸಹಜ…