ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ದಾಳಿ ಹಸು ಸಾವು – ಮುಜಾಗ್ರತೆ ಕ್ರಮ ಕೈಗೊಳ್ಳಲು ಅರಣ್ಯ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹ
ಹೊಸನಗರ: ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಿಂದ ಚಿರತೆ ಓಡಾಟ ನಡೆಸುತ್ತಿದೆ ಎಂದು ಗ್ರಾಮಸ್ಥರು ಹೆದರಿ-ಹೆದರಿ ಓಡಾಟ ನಡೆಸುತ್ತಿದ್ದು ಮುಡ್ರಳ್ಳಿ ಬಳಿ ಒಂದು ಹಸು ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.ಚಿರತೆ ಓಡಾಟ ನಡೆಸುತ್ತಿರುವುದು ಈ ಘಟನೆಯಿಂದ ದೃಡಪಟ್ಟಿದೆ.
ಹೊಸನಗರ ತಾಲ್ಲೂಕು ತ್ರಿಣಿವೆ- ಜಕ್ಕನಗದ್ದೆ ಮುಡ್ರಳ್ಳಿ, ಇಟ್ಟಕ್ಕಿ ತೊಗರೆಗಳಲ್ಲಿ ಸುಮಾರು ನೂರಕಿಂತ ಹೆಚ್ಚು ಮನೆಗಳಿವೆ ಅವರು ದನ ಎಮ್ಮೆಗಳನ್ನು ಕಟ್ಟಿಕೊಂಡು ಹೊಲ ಗದ್ದೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಅವರು ಪಟ್ಟಣಕ್ಕೆ ಬರಬೇಕೆಂದರೆ ಸುಮಾರು 20ಕಿಮೀಟರ್ ಬರಬೇಕು ಹತ್ತಿರ ಹತ್ತಿರ ಮನೆಗಳಿಲ್ಲ ಈ ಚಿರತೆ ಕಾಟದಿಂದ ಮನೆಯಿಂದ ಹೊರಬರುವುದೇ ಕಷ್ಟಕರವಾಗಿದ್ದು ಅಲ್ಲಿನ ಜನರು ಮನೆಯಿಂದ ಹೊರಬರುತ್ತಿಲ್ಲ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹೆದರಿ-ಹೆದರಿ ಪರೀಕ್ಷೆಗೆ ಬರುತ್ತಿದ್ದಾರೆ ತಕ್ಷಣ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಸಂಚಾರಿಸಿ ಚಿರತೆಯನ್ನು ಹಿಡಿದರೆ ಅಲ್ಲಿನ ಗ್ರಾಮಸ್ಥರ ಮನಸ್ಸು ತಿಳಿಯಗಲಿದೆ.
ಅರಣ್ಯ ಇಲಾಖೆಯವರು ತಕ್ಷಣ ಈ ಭಾಗದಲ್ಲಿ ಸಂಚರಿಸಿ ಚಿರತೆ ಸೆರೆ ಹಿಡಿಯಿರಿ : ತ್ರಿಣಿವೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣಮೂರ್ತಿ
ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೃಷ್ಣಮೂರ್ತಿಯವರು ಮಾತನಾಡಿ ಈ ಭಾಗದಲ್ಲಿ ಚಿರತೆ ಇರುವುದು ಹಸು ಹಿಡಿದಿರುವುದರಿಂದ ದೃಡಪಟ್ಟಿದೆ ಈ ಭಾಗದ ಜನರು ಮುಗ್ದರು ದಿನನಿತ್ಯ ಕೆಲಸ ಮಾಡಿ ಜೀವನ ಸಾಗಿಸುವವರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ಬೀಡುಬಿಟ್ಟು ತಕ್ಷಣ ಚಿರತೆಯನ್ನು ಸೆರೆ ಹಿಡಿಯದಿದ್ದರೇ ಮುಂದಿನ ದಿನದಲ್ಲಿ ಬಾರೀ ಅನಾಹುತ ಸಂಭವಿಸಲಿದೆ ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಲೀ ಎಂದರು.
ವರದಿ : ಹೆಚ್.ಎಸ್.ನಾಗರಾಜ್