ಚುನಾವಣೆಯ ಚಟುವಟಿಕೆಗಳ ನಡುವೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸ್ ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ದಂಧೆಗೆ ಕಡಿವಾಣ ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಕ್ರಿಕೆಟ್ ಬೆಟ್ಟಿಂಗ್(ipl betting) ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಸ್ಟೇಷನ್ ಪಿಐ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಟೀಂವೊಂದನ್ನ ರಚಿಸಲಾಗಿತ್ತು. ಸದ್ಯ ಈ ಟೀಂ ಕಳೆದ 15-04-2023 ರಂದು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತಿದ್ದವರ ಮೇಲೆ ದಾಳಿ ನಡೆಸಿದೆ.
ಇನ್ನೂ ಈ ಪ್ರಕರಣದ ಆರೋಪಿ ಸತೀಶ್ ವಿರುದ್ಧ ಪೊಲೀಸರಿಗೆ ಕಳೆದ 16 ನೇ ತಾರೀಖು ಮತ್ತೊಂದು ದೂರು ದಾಖಲಾಗಿತ್ತು. ಕಾರ್ತಿಕ್ ಎಂಬುವವರು ತನ್ನ ಸ್ನೇಹಿತನಾದ ಸತೀಶ್ ಆನ್ ಲೈನ್ ವೆಬ್ ಸೈಟ್ / ಆಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತಿದ್ದು, ಆತನಿಗೂ ಇದರಿಂದ ಹಣ ಮಾಡಿಕೊಡುವ ಐಡಿಯಾ ಕೊಟ್ಟಿದ್ದ ಎಂದು ದೂರಿದ್ದಾರೆ. ಅಲ್ಲದೆ, ಆತ ಹೇಳಿದ ಕಾರಣಕ್ಕೆ 3 ರಿಂದ 4 ವರ್ಷಗಳಿಂದ ಸತೀಶನಿಗೆ ಕಾರ್ತಿಕ್ ನಿರಂತರವಾಗಿ ಹಣ ಕೊಡುತ್ತಾ ಬಂದಿದ್ದರಂತೆ. ಕೊನೆಗೆ ಕೊಟ್ಟ ಹಣ ಕೇಳಿದ್ದಕ್ಕೆ , ಬೆಟ್ಟಿಂಗ್‌ನಲ್ಲಿ ನಿಮ್ಮ ಹಣ ಹೋಯಿತು ಅಂತ ಹೇಳಿ ಸುಮಾರು ರೂ. 3,00,000 ಹಣವನ್ನು ಹಿಂದಿರುಗಿಸದೇ ನಂಬಿಸಿ ಮೋಸ ಮಾಡಿದ್ದ ಎಂದು ಪೊಲೀಸರಿಗೆ ಕಾರ್ತಿಕ್ ದೂರು ನೀಡಿದ್ದ.
ಈ ಸಂಬಂಧ ಐಪಿಸಿ 78(1) (ಎ)(6) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 420 ಐಪಿಸಿ ಕಾಯ್ದೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲಿಸರು ಆರೋಪಿ ಸತೀಶ್ ನಿಂದ ಒಟ್ಟು 18,26,336 ರೂ ಹಣವನ್ನು ಜಪ್ತಿ ಮಾಡಿ, 02 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 25,46,336/- ರೂ. ಗಳನ್ನು ಜಪ್ತಿ ಮಾಡಿರುವ ಪೊಲೀಸರು 15 ಮೊಬೈಲ್ ಫೋನ್ ಗಳು ಮತ್ತು 1 ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.