Headlines

ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಹಾಗೂ SDPI,PFI,CFI ಎಂಬ ಸಮಾಜಘಾತುಕ ಸಂಘಟನೆಗಳನ್ನು ನಿಷೇದಿಸುವಂತೆ ರಿಪ್ಪನ್ ಪೇಟೆ ಬಜರಂಗದಳ ಆಗ್ರಹ :

ರಿಪ್ಪನ್ ಪೇಟೆ : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಸಮಾಜ ಘಾತುಕ  ಸಂಘಟನೆಗಳಾದ sdpi,pfi ಹಾಗೂ cfi ಸಂಘಟನೆಗಳನ್ನು ರಾಜ್ಯಾದ್ಯಂತ ನಿಷೇಧಿಸುವಂತೆ ಒತ್ತಾಯಿಸಿ ರಿಪ್ಪನ್ ಪೇಟೆ ವಿಶ್ವ ಹಿಂದೂ ಪರಿಷತ್,ಬಜರಂಗದಳ ಸಂಘಟನೆಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಇಂದು ರಿಪ್ಪನ್ ಪೇಟೆ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆ ಮೂಲಕ ನಾಡಕಛೇರಿಗೆ ತೆರಳಿ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು…

Read Full News

ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಹೊಸನಗರದಲ್ಲಿ ಪ್ರತಿಭಟನೆ : ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹ

ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ರವರ ಹೇಳಿಕೆಯನ್ನು ಖಂಡಿಸಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುವುದರ ಮೂಲಕ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸುತ್ತಾ ಮಾತನಾಡಿದ ಎರಗಿ ಉಮೇಶ್, ರಾಷ್ಟ್ರ ಭಕ್ತರು ಎಂದು ಪ್ರಚಾರಕ್ಕೆ ಸೀಮಿತವಾಗಿರುವ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿದ ಕೆ ಎಸ್ ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ನೀಡಿದ್ದಾರೆ….

Read Full News

ಭದ್ರಾವತಿ ನಗರದಲ್ಲಿ ಇಂದಿನಿಂದ ನಿಷೇಧಾಜ್ಞೆ ಜಾರಿ : ಶಾಲೆಗಳಿಗೆ ರಜೆ ಘೋಷಣೆ

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರ ಪ್ರಕ್ಷುಬ್ದಗೊಂಡಿದೆ. ಮುಂಜಾಗ್ರತ ಕ್ರಮವಾಗಿ ಭದ್ರಾವತಿ ಪಟ್ಟಣದಲ್ಲಿಯು  ಜಾರಿಗೊಳಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಪ್ರದೀಪ್ ರವರು ಆದೇಶ ಹೊರಡಿಸಿದ್ದಾರೆ. ಫೆ.21ರ ಬೆಳಗ್ಗೆ 8 ಗಂಟೆಯಿಂದ ಫೆ.22ರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿಜನರು ಗುಂಪುಗೂಡುವಂತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಭದ್ರಾವತಿ ನಗರದಲ್ಲಿಯು ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ದ್ವಿಚಕ್ರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಾತ್ರಿ 9 ಗಂಟೆ ನಂತರ ಅಂಗಡಿ ಮುಂಗಟ್ಟು…

Read Full News

ಭಜರಂಗದಳದ ಕಾರ್ಯಕರ್ತನ ಭೀಕರ ಹತ್ಯೆ : ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ !!! ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗದ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತೀ ಕಾಲೋನಿಯಲ್ಲಿ ಭಾನುವಾರ ತಡರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ (26)ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.  ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹರ್ಷನನ್ನು ಭಾರತಿ ನಗರದ ರವಿವರ್ಮ ಬೀದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ದೊಡ್ಡಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಮೃತ ಹರ್ಷ ಭಜರಂಗದಳ ಸೇರಿದಂತೆ ಹಾಗೂ ಹಿಂದೂ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು,ಕೊಲೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ದ್ವೇಷದ ಮೇಲೆ ಕೊಲೆ…

Read Full News

ಡಿ ಕೆ ಶಿವಕುಮಾರ್ ಶಿವಮೊಗ್ಗ ಎಸ್ಪಿ ಲಕ್ಷ್ಮಿ ಪ್ರಸಾದ್​ಗೆ ವಿಧಾನಸೌಧದಿಂದ ಕರೆ ಮಾಡಿದ ಹೇಳಿದ್ದೇನು ಗೊತ್ತಾ ?? ಈ ಸುದ್ದಿ ನೋಡಿ

ಸಚಿವ ಈಶ್ವರಪ್ಪರವರನ್ನು ಬೈಕ್ ರೃಾಲಿ ಮೂಲಕ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಏಕಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮಾಡಿ ಕೇಳಿದ್ದಾರೆ. ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತಾಗಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸುಮಾರು 15 ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಅನ್ವಯ ಜಾರಿಯಲ್ಲಿದ್ದ ನಿಷೇಧಾಜ್ಞೆ ಉಲ್ಲಂಘನೆ…

Read Full News

ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೇ ಮುಖಂಡರುಗಳು ಪಕ್ಷದ ಇಚ್ಛಾನುಸಾರ ಸಂಘಟನೆ ಮಾಡಿ : ಕಾಗೋಡು ತಿಮ್ಮಪ್ಪ

ರಿಪ್ಪನ್‍ಪೇಟೆ: ಹಳೆಯ ಕಾಲ ಹೋಗಿದೆ, ಮೊದಲಿನ ಸ್ಥಿತಿ ಈಗಿಲ್ಲ ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮುಖಂಡರುಗಳು ಪಕ್ಷದ ಇಚ್ಛಾನುಸಾರ ಸಂಘಟನೆ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೇಸ್ ಕಾರ್ಯಕರ್ತರಿಗೆ ತಾಕೀತು ಮಾಡಿದರು. ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಮುಖಂಡರುಗಳು ಕನಿಷ್ಟ ಒಂದು ತಿಂಗಳುಗಳ ಕಾಲ ಪ್ರತಿ ಬೂತ್‍ಗೆ ಹೋಗಿ ಕ್ರಿಯಾಶೀಲ ಕನಿಷ್ಟ 5 ಜನ ಕಾರ್ಯಕರ್ತರನ್ನು ಗುರುತಿಸಿ ಅವರ ಮುಖಾಂತರ ಸದಸ್ಯತ್ವ…

Read Full News

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಎನ್ಎಸ್ ಯುಐ ಒತ್ತಾಯ

ದೆಹಲಿಯ ಕೆಂಪು ಕೋಟೆ ಮೇಲೆ ಕೇಸರಿ ಬಾವುಟವನ್ನ ಹಾರಿಸುವುದಾಗಿ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪನವರ ಹೇಳಿಕೆಯನ್ನ ಖಂಡಿಸಿ ಎನ್ ಎಸ್ ಯುಐ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು ಮನವಿಯಲ್ಲಿ ರಾಜ್ಯದಲ್ಲಿ ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.‌ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.8 ರಂದು ರಾಷ್ಟ್ರಧ್ವಜದ ಕಂಬದಲ್ಲಿ ಕೇಸರಿ ಬಾವುಟ ಹಾರಿಸಲಾಗಿತ್ತು. ಈ ರೀತಿಯ ಬಾವುಟವನ್ನು ಹಾರಿಸಬಾರದು ಎಂದು ಹೇಳಿಕೆ ನೀಡುವ ಬದಲು ಸಚಿವ ಈಶ್ವರಪ್ಪ ದೆಹಲಿಯ ಕೆಂಪು ಕೋಟೆಯ ಮೇಲೂ ಧ್ವಜ ಹಾರಿಸಲಾಗುವುದು ಎಂದು ಹೇಳುವ…

Read Full News

ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ…

ಶಿವಮೊಗ್ಗ: ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಐಎನ್ಎ)ದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಫೆಬ್ರವರಿ 5 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ, ಇದೊಂದು ಜಿಹಾದಿನ ಷಡ್ಯಂತ್ರ. ಮುಸಲ್ಮಾನ ವಿಧ್ಯಾರ್ಥಿಗಳ ಮೂಲಕ ಶಾಲಾ -ಕಾಲೇಜುಗಳನ್ನು ಉಪಯೋಗಿಸಿ…

Read Full News

ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ :

ಶಿವಮೊಗ್ಗ : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಹಿನ್ನೆಲೆ ಬಿಜೆಪಿ ಕಚೇರಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಂಡಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಬಳಿ ತೆರಳುವುದನ್ನು ತಡೆದ ಪೊಲೀಸರು, ಕಾರ್ಯಕರ್ತರನ್ನು ಬಂಧಿಸಿದರು.   ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಈಶ್ವರಪ್ಪ ಅವರನ್ನು…

Read Full News

ವಿಷ ಕುಡಿಯುತ್ತೇವೆ ಹೊರತು ಹಿಜಬ್ ತೆಗೆಯುವುದಿಲ್ಲ : ಕಾಲೇಜನ್ನು ಬಹಿಷ್ಕರಿಸಿ ಹೊರನಡೆದ 25 ಪಿಯು ವಿದ್ಯಾರ್ಥಿನಿಯರು

ಇಂದಿನಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜು  ಆರಂಭವಾದ ಬೆನ್ನಲ್ಲೇ ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿ ಕಾಲೇಜ್ ನ್ನು ಬಹಿಷ್ಕರಿಸಿ ವಾಪಾಸಾಗಿದ್ದಾರೆ. ಇಂದು ಬೆಳಿಗ್ಗೆ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ಹಿಜಬ್ ಧರಿಸಿ ಅನೇಕ ವಿದ್ಯಾರ್ಥಿನಿಯರು ಗೇಟ್ ಒಳಗೆ ಪ್ರವೇಶಿಸಿದ್ದಾರೆ. ಆದರೆ ಕಾಲೇಜ್ ಒಳಗೆ ಹೋದವರಿಗೆ ಡಿವಿಎಸ್ ಆಡಳಿತ ಮಂಡಳಿ ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ಸೂಚಿಸಿದ್ದಾರೆ.ಹಿಜಬ್ ಕಳಚಿ ತರಗತಿಯಲ್ಲಿ ಕೂರಲು ವಿದ್ಯಾರ್ಥಿನಿಯರು ನಿರಾಕರಿಸಿದ ಕಾರಣ 25 ಜನ ವಿದ್ಯಾರ್ಥಿನಿಯರು ವಾಪಾಸಾಗಿದ್ದಾರೆ. ಹಿಜಬ್…

Read Full News

ಹೊಸನಗರದಲ್ಲಿ ಯಶಸ್ವಿಯಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹೊಸನಗರ ಪಟ್ಟಣದ ಮಾವಿನಕೊಪ್ಪ ಬಳಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯುತ್ತಿದ್ದು, ಈ ಶಿಬಿರದಲ್ಲಿ ಹಲವಾರು ಜನರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಾಲ ಗಣಪತಿ ಸೇವಾ ಸಮಿತಿ ಹೊಸನಗರ, ಜೆಸಿಐ ಡೈಮೆಂಡ್ ಸಂಸ್ಥೆ ಹೊಸನಗರ  ಸ್ಪಂದನ ಹೆಲ್ತ್ ಫೌಂಡೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದಾರೆ ಎನ್ನಲಾಗಿದೆ. ಮೊಬೈಲ್ ಬ್ಲಡ್ ಡೊನೇಷನ್ ವ್ಯಾನ್ ಮೂಲಕ…

Read Full News

ಮಾನವೀಯತೆ ಮೆರೆದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಬೈಕ್ ಸವಾರನೊಬ್ಬ ಆನಂದಪುರ ಸಮೀಪದ ಹೊಸೂರು ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು, ಅದೇ ದಾರಿಯಲ್ಲಿ ಸಾಗುತ್ತಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಅವರು ಅಪಘಾತಕ್ಕೀಡಾದ ವ್ಯಕ್ತಿಯನ್ನು ಉಪಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂದು ಮಾಜಿ ಶಾಸಕರು ಸಾಗರದಿಂದ ಆನಂದಪುರ ಬರುವಾಗ ಹೊಸೂರು ಬಳಿ ರಸ್ತೆಯಲ್ಲಿ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದನು.ತಕ್ಷಣ ಕಾರಿನಿಂದ ಇಳಿದು ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕರು ಸಹಾಯಕರ ಸಹಾಯಕ್ಕೂ ಕಾಯದೇ ತಾವೇ ಬೈಕ್ ಎತ್ತಿ ನಿಲ್ಲಿಸಿ,…

Read Full News

ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀನಿವಾಸಚಾರಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಹೊರಗುತ್ತಿಗೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ

ಹೊಸನಗರ : ಸರ್ಕಾರವೇ ರಚಿಸಿದ ಶ್ರೀನಿವಾಸಾಚಾರಿ ಸಮಿತಿ ವರದಿ ಅನುಷ್ಠಾನ ಹಾಗೂ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಹೊಸನಗರ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವುದರ ಮೂಲಕ ಹೊರಗುತ್ತಿಗೆದಾರರು ಸಾಂಕೇತಿಕವಾಗಿ ಮುಷ್ಕರಕ್ಕೆ ಕರೆ ನೀಡಿದ ಘಟನೆ ಇಂದಿನಿಂದ ನಡೆಯುತ್ತಿದೆ. 2019 -20, 2020-21ರ ಸಮಯದಲ್ಲಿ ಕೋವೀಡ್-19 ವಿರುದ್ಧ ಹೋರಾಟಕ್ಕಾಗಿ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ನಿಯೋಜನೆ ಮಾಡಿಸಿಕೊಂಡ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ…

Read Full News

ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದಕ್ಕೆ ಪರೀಕ್ಷೆಯನ್ನೆ ಬಹಿಷ್ಕರಿಸಿದ ವಿದ್ಯಾರ್ಥಿಗಳು :

ಶಿವಮೊಗ್ಗದಲ್ಲಿ ತಾರಕಕ್ಕರೇರಿದ ಹಿಜಾಬ್ ವಿವಾದ.ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಹೊರನಡೆದಿದ್ದಾರೆ. ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ  ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು  ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿ ನಿಯರಿಂದ ಪರೀಕ್ಷೆ ಬಹಿಷ್ಕಾರಿಸಿದ್ದಾರೆ. ಅದರಂತೆ ತುಂಗನಗರ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಬ್ ತೆಗೆದು ತರಗತಿಯಲ್ಲಿ ಕೂರಲು ಸಾಧ್ಯವಿಲ್ಲವೆಂದು ತರಗತಿ ಬಹಿಷ್ಕರಿಸಿ ಹೊರನಡೆದಿದ್ದಾಳೆ, ಶಿಕಾರಿಪುರ ಮತ್ತು ಸಾಗರದಲ್ಲಿಯೂ ಇದೇ…

Read Full News

ಪ್ರತಾಪ್ ಸಿಂಹ ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ : ಕಿಮ್ಮನೆ ರತ್ನಾಕರ್ ವಾಗ್ದಾಳಿ

ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ನೀವೇ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು. ಅವರು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ಹಿನ್ನಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ವಿರುದ್ಧ ಕಿಡಿಕಾರಿದರು. ಹಿಜಬ್ ಮತ್ತು ಕೇಸರಿ ಶಾಲಿನ ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ವಿಚಾರ ಈಗ ಅಂತರಾಷ್ಟ್ರದ ಮಟ್ಟಕ್ಕೆ ಹೋಗಿ ತಲುಪಿದೆ. ಜನರಿಗೆ ಕಾರ್ಯಕ್ರಮ ಕೊಟ್ಟು ಆ ಆಧಾರದ ಮೇಲೆ…

Read Full News

ಮರಳು ಲಾರಿ ಮಾಲೀಕರಿಂದ ಶಾಸಕ ಹಾಲಪ್ಪ ಹಣ ಪಡೆದಿದ್ದಾರೆ ಎಂದು ಧರ್ಮಸ್ಥಳದ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ !!!

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಾಸಕ ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಅಕ್ರಮವಾಗಿ ಹಣ ಪಡೆದಿರುವುದು ಖಂಡಿತವಾಗಿಯೂ ನಿಜ ಎಂದು ಆಣೆ ಪ್ರಮಾಣ ಮಾಡಿದರು. ಲಾರಿಯವರು ನನಗೆ ಕರೆ ಮಾಡಿ ಹಣವನ್ನು ನೀಡಿದ್ದೇವೆಂದು ಹೇಳಿದ್ದಾರೆ.ಇವರು 300  ಮರಳು ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಮರಳು ನೀತಿಯನ್ನು ಸಡಿಲೀಕರಣ ಮಾಡುವುದಕ್ಕೆ ನಿಮಗೆ ಏನು ರೋಗ ಎಂದು ಹರಿಹಾಯ್ದರು. ಕೋರೆ ಮಾಲೀಕರ ಹತ್ತಿರವೂ ಕೂಡ ಮಾಮೂಲಿ ಪಡೆಯುತ್ತಿದ್ದು ನನಗೆ ವರ್ಷಕ್ಕೆ ಇಂತಿಷ್ಟು ಹಣವನ್ನು…

Read Full News

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಮಾಡಿದ ಶಾಸಕ ಹರತಾಳು ಹಾಲಪ್ಪ !!!

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಶಾಸಕ ಹರತಾಳು ಹಾಲಪ್ಪ ಸಾಗರ ಹಾಗೂ ಹೊಸನಗರ  ಕ್ಷೇತ್ರದ ಮರಳು ಲಾರಿ ಮಾಲೀಕರಿಂದ ಅಕ್ರಮವಾಗಿ ಕಮಿಶನ್ ಪಡೆದಿದ್ದಾರೆಂದು ಆರೋಪ ಮಾಡಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾವು ಆಣೆ ಮಾಡಬೇಕು ಹಣವನ್ನು ಪಡೆದಿಲ್ಲವೆಂದು ಎಂದು ಸವಾಲು ಎಸೆದಿದ್ದರು. ಇದರ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ನಾವು ಯಾವುದೇ  ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ. ಬೇಳೂರು ಮಾಡಿರುವ ಆರೋಪಗಳು…

Read Full News

ಶಾಸಕ ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಕೆಂಡಾಮಂಡಲ : ನಾಳೆಯೇ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಿದ್ದ

ಕಳೆದ ಹದಿನೈದು ದಿನಗಳಿಂದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಆಣೆ ಪ್ರಮಾಣದ ಜಟಾಪಟಿ ಕೊನೆಯ ಹಂತ ತಲುಪಿದ್ದು ನಾಳೆ ಧರ್ಮಸ್ಥಳದಲ್ಲಿ ಅಂತಿಮವಾಗಬಹುದೇ ? ಇಂದು ಸಾಗರದಲ್ಲಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಪತ್ರೀಕಾ ಹೇಳಿಕೆ ನೀಡಿದ್ದಾರೆ. ಹರತಾಳು ಹಾಲಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಹೇಳಿದ್ದಾದರು ಏನು?? ಶಾಸಕ ಹಾಲಪ್ಪನವರೆ ಏನ್ ಹೇಳಿದ್ರಿ ನಾನು ಪಲಾಯನವಾದಿ ಅಂತಾನ??  ಹೇಳೋಕೆ ಮೊದಲು ಯೋಚನೆ ಮಾಡಿ ಧರ್ಮಸ್ಥಳದ ಆಣೆಪ್ರಮಾಣಕ್ಕೆ ನೀವು ಮೋದಲು…

Read Full News

ಸಾಗರದಲ್ಲಿ ಪ್ರತಿಭಟನಾ ನಿರತ “ಬ್ಯಾಂಕ್ ಮಿತ್ರ” ಉದ್ಯೋಗಿ ಆತ್ಮಹತ್ಯೆಗೆ ಯತ್ನ : ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬ್ಯಾಂಕ್ ಮಿತ್ರ ಉದ್ಯೋಗಿಗಳ ಪ್ರತಿಭಟನೆ

ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಬ್ಯಾಂಕ್ ಮಿತ್ರರ ಸಂಘ ಮತ್ತು ಮಾನವ ಹಕ್ಕುಗಳ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಸಹಯೋಗದೊಂದಿಗೆ ಕೆಳದಿ ಕೆನರಾ ಬ್ಯಾಂಕ್ ನಿಂದ ಬ್ಯಾಂಕ್ ಮಿತ್ರರನ್ನು ವಜಾಗೊಳಿಸಿರುವ ನೀತಿ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಪ್ರತಿಭಟನಾ ನಿರತ ಬ್ಯಾಂಕ್ ಮಿತ್ರ ಉದ್ಯೋಗಿ ಶಕುಂತಲಾ ಎಂಬುವವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕೂಡಲೇ ಸಹೋದ್ಯೋಗಿಗಳು ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿಲಾಗಿತ್ತು,ಈಗ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ…

Read Full News

ಹೊಂಬುಜ ಶ್ರೀಗಳಿಂದ ಮುಖ್ಯಮಂತ್ರಿ ಭೇಟಿ :

ಜೈನ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ರವರು ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಿದರು. ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಿನ ವ್ಯಾಪ್ತಿಯಲ್ಲಿ ಜೈನ ಬಾಂಧವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೊಂಬುಜ ಅತಿಶಯ ಮಹಾಕ್ಷೇತ್ರ ಜಗನ್ಮಾತೆಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಭಕ್ತರಿಗೆ ಮೂಲಭೂತ ಸಮಸ್ಯೆಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಮತ್ತು ಸಮುದಾಯದ ಏಳಿಗೆಗೆ ಸ್ಪಂದಿಸುವಂತೆ…

Read Full News

ಅಕ್ರಮ ಮರಳು ಮಾಫ಼ಿಯಾದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ಕೈವಾಡವಿರುವುದು ನೂರಕ್ಕೆ ನೂರರಷ್ಟು ಸತ್ಯ : ಬಿ ಜಿ ನಾಗರಾಜ್

ಹೊಸನಗರ : ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಮಾಫೀಯ ನಡೆಯುತ್ತಿದೆ ಅದಕ್ಕೆ ಸಾಗರ – ಹೊಸನಗರ ತಾಲ್ಲೂಕಿನ ಹಾಲಿ ಶಾಸಕರಾಗಿರುವ ಹರತಾಳು ಹಾಲಪ್ಪರವರ ಕೈವಾಡವಿದೆ ಎಂದು ಹೇಳಿರುವುದು ಸತ್ಯ ಸಂಗತಿಯಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್ ಹೇಳಿದರು. ಇಂದು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಮರಳು ಗಣಿಗಾರಿಕೆ ಮಾಡುವ ಗುತ್ತಿಗೆದಾರರು ಅಥವಾ ಮರಳು…

Read Full News

ಶಿವಮೊಗ್ಗ ವಿಮಾನ ನಿಲ್ದಾಣ ಶೀಘ್ರದಲ್ಲೇ ಲೋಕಾರ್ಪಣೆ : ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣವು ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ 2ನೇ ಅತಿ ಉದ್ದದ ರನ್ ವೇ ಹೊಂದಿರುವಂತ ವಿಮಾನ ನಿಲ್ದಾಣ ಇದಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸಂಸದ ಬಿ.ವೈ.ರಾಘವೇಂದ್ರ, ಇಂದು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿ ಮಾಡಿದ್ದೇನೆ. ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ…

Read Full News

ಸಮಯಕ್ಕೆ ಸರಿಯಾಗಿ ಸಿಗದ ಆಂಬುಲೆನ್ಸ್ : 45 ದಿನದ ಮಗು ಸಾವು

  ತುಮರಿ ಗ್ರಾಮ ಎಂಬ ಮಾನವ ನಿರ್ಮಿತ ದ್ವೀಪದಲ್ಲಿ 108 ಅವ್ಯವಸ್ಥೆ, ಹೊಸ ಆಂಬುಲೆನ್ಸ್ ಬಂದರೂ ಸಕಾಲಕ್ಕೆ ತುರ್ತು ಆರೋಗ್ಯ ವಾಹನ ಸಿಗದೆ 45 ದಿನಗಳ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬ್ಯಾಕೋಡು ಸಮೀಪದ ಸಸಿಗೊಳ್ಳಿಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನದಿಂದ ದ್ವೀಪದ ಹೊಸ ಆಂಬುಲೆನ್ಸ್ ಸೇವೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಸಿಗೊಳ್ಳಿ ಸಮೀಪದ ಎಲ್ದಮಕ್ಕಿ ಹಳ್ಳಿಯ ಗೀತಾ ಮತ್ತು ಉಮೇಶ್ ದಂಪತಿಗಳ 45 ದಿನಗಳ ಹಸುಗೂಸಿಗೆ ಉಸಿರಾಟ ತೊಂದರೆಯಾಗಿ 108 ಅಲಭ್ಯತೆಯಿಂದ ತಡವಾಗಿ…

Read Full News

ಹರತಾಳು ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷೆ ಸೇರಿದಂತೆ 7 ಜನ ಸದಸ್ಯರು ಕೆಡಿಪಿ ಸಭೆಗೆ ಗೈರು :

ಹರತಾಳು ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಉಪಾಧ್ಯಕ್ಷರು ಮತ್ತು 6 ಜನ ಸದಸ್ಯರು ಗೈರಾಗಿದ್ದರು. 8 ಸದಸ್ಯ ಬಲದ ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಹಮ್ಮಿಕೊಳ್ಳಲಾಗಿತ್ತು  ಅಧ್ಯಕ್ಷರಾದ ಕಲ್ಲಿ ಯೋಗೇಂದ್ರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ವಸತಿ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡುವ ಮೂಲಕ ಸದಸ್ಯ ಸ್ಥಾನಕ್ಕೆ ಹಕ್ಕು ಚ್ಯುತಿ ತರುವ ಪ್ರಯತ್ನ ಮಾಡಿದ್ದಾರೆ .ನರೇಗಾ ಯೋಜನೆ ಮತ್ತು…

Read Full News

ಶಿವಮೊಗ್ಗದ ಬಾಪೂಜಿ ಕಾಲೇಜಿನಲ್ಲಿ ನಿನ್ನೆ ಕೇಸರಿ ಧ್ವಜ ಹಾರಿಸಿದ್ದ ಧ್ವಜಸ್ತಂಭದಲ್ಲಿ ಇವತ್ತು ರಾಷ್ಟ್ರಧ್ವಜ ಹಾರಿಸಿದ NSUI

ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎನ್​​ಎಸ್‍ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣ ಮಾಡಿದರು. ನಿನ್ನೆ ಹಿಜಾಬ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಇಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು.  ನಿನ್ನೆ(ಮಂಗಳವಾರ) ಕೇಸರಿ ಧ್ವಜ ಹಾರಿಸಿದ್ದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಮುಂಜಾನೆ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟದ (ಎನ್​​ಎಸ್‍ಯುಐ) ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿದರು. ನಿನ್ನೆ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಕಲ್ಲು ತೂರಾಟವೂ ನಡೆದಿತ್ತು. ಈ…

Read Full News

ಸ್ಮಶಾನದ ಅವಶ್ಯವಿರುವ ಗ್ರಾಮಗಳಿಂದ ಅರ್ಜಿ ಆಹ್ವಾನ :

ಶಿವಮೊಗ್ಗ, ಫೆಬ್ರವರಿ 08: ಜಿಲ್ಲೆಯ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಜಮೀನು ಲಭ್ಯವಿರುವ ಕಡೆ 2 ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿದ್ದು, ಸ್ಮಶಾನದ ಅವಶ್ಯಕತೆವಿರುವ ಗ್ರಾಮದ ಸಾರ್ವಜನಿಕರು ಸಂಬಂಧಪಟ್ಟ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಕಂದಾಯ ಇಲಾಖೆಯು ತಿಳಿಸಿದೆ.  ಹಾಗೂ ಸರ್ಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ/ ಜಲಮೂಲಗಳೆಂದು ವರ್ಗೀಕೃತವಾದ ಜಮೀನುಗಳು, ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ…

Read Full News

ಶಾಸಕ ಹಾಲಪ್ಪರವರ ಎದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ವೀಡಿಯೋ ವೈರಲ್ : ತಾರಕಕ್ಕೇರಿದ ಸಾಗರದ ಜ್ಯೂನಿಯರ್ ಕಾಲೇಜಿನ ಹಿಜಾಬ್ – ಕೇಸರಿ ಘರ್ಷಣೆ !!!!!!

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಜ್ಯೂನಿಯರ್ ಕಾಲೇಜ್ ವಿದ್ಯಾರ್ಥಿಗಳು ಹಿಜಾಬ್ ಹಾಗೂ  ಕೇಸರಿ ಶಾಲಿನ ವಿಚಾರವಾಗಿ ಇಂದು ಬೆಳಿಗ್ಗೆ ಕಾಲೇಜಿನ ಆವರಣದ ಬಳಿ ಮಾತಿನ ಚಕಮಕಿ ನಡೆಯುತ್ತಿತ್ತು.ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ  ಆಗಮಿಸಿದ್ದರು ಇದರ ನಡುವೆ ಸಣ್ಣಪುಟ್ಟ ಗಲಾಟೆ ನಡೆದಿದ್ದು  ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಇದನ್ನು ಮನಗಂಡ ಶಾಸಕ ಹರತಾಳು ಹಾಲಪ್ಪನವರು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳ ಸಮೂಹ ಶಾಸಕ ಹರತಾಳು ಹಾಲಪ್ಪ ನವರ ಆಸ್ಪತ್ರೆಯ ಭೇಟಿಯಲ್ಲೂ ಹಾಜರಿದ್ದರು.ಇದರ ನಡುವೆ ವಿದ್ಯಾರ್ಥಿಗಳು…

Read Full News

ಶಿವಮೊಗ್ಗದಲ್ಲಿ ಇಂದು ಮತ್ತು ನಾಳೆ 144 ಸೆಕ್ಷನ್ ಜಾರಿ : ಲಷ್ಕರ್ ಮೊಹಲ್ಲಾದಲ್ಲಿ ಮಾರಕಾಸ್ತ್ರಗಳ ವಶ !!!!!!!

ಶಿವಮೊಗ್ಗದಲ್ಲಿ ಭುಗಿಲೆದ್ದಿರುವ ಹಿಜಬ್ ಮತ್ತು ಕೇಸರಿ ಶಾಲಿನ ವಿಚಾರದಲ್ಲಿ ಇಂದು ಮತ್ತು ನಾಳೆನೂ ಸೆಕ್ಷನ್ 144 ಜಾರಿಯಾಗಿದ್ದು ಲಷ್ಕರ್ ಮೊಹಲ್ಲಾದಲ್ಲಿ ಅನ್ಯಕೋಮಿನ ಯುವಕರ ರಸ್ತೆಗಿಳಿದು ದಿಡೀರನೇ ಪ್ರತಿಭಟನೆ ನಡೆಸಿದ್ದು ಕೆಲ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದರು. ಲಷ್ಕರ್ ಮೊಹಲ್ಲಾದಲ್ಲಿ ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ನಂತರ ಬಾಪೂಜಿ ನಗರ ಕಾಲೇಜಿನಲ್ಲಿ ಹಿಜಬ್ ಬೆಂಬಲಿಸಿದ ಯುವಕರನ್ನ ಕೊಠಡಿಯಲ್ಲಿ ಕೂರಿಸಲಾಗಿದ್ದು ನಂತರ ಬಿಡುಗಡೆ ಮಾಡಲಾಯಿತು. ಈ ವೇಳೆ ನಾರೇ ತಕಬ್ಈರ್ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಲಾಯಿತು. ನಂತರ…

Read Full News

“ಸಾಗರದ ಜ್ಯೂನಿಯರ್ ಕಾಲೇಜಿನಲ್ಲೂ ಪ್ರಾರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ .!!!”

ಸಾಗರ :ಕರ್ನಾಟಕದಲ್ಲಿ ಇದೀಗ ಕೇಸರಿ ಶಾಲು ಹಾಗೂ ಹಿಜಾಬ್ ನ ವಿಚಾರವಾಗಿ  ಸಂಘರ್ಷ ನಡೆಯುತ್ತಿದೆ.ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಸಂಘರ್ಷ ಇದೀಗ ರಾಜ್ಯಾದ್ಯಂತ ಪ್ರಾರಂಭವಾಗಿದೆ. ಇದೀಗ ಇದರ ಸಂಘರ್ಷ  ಮಲೆನಾಡಿಗೂ ಕಾಲಿಟ್ಟಿದ್ದು ಶಿವಮೊಗ್ಗ ಜಿಲ್ಲೆ ಸಾಗರದ ಸರ್ಕಾರಿ ಜ್ಯೂನಿಯರ್  ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು.ಇವರನ್ನು ತಡೆಯಲು ಪ್ರಿನ್ಸಿಪಾಲ್ ಪ್ರಯತ್ನಪಟ್ಟರು ಯಶಸ್ವಿ ಕಾಣಲಾಗುತ್ತಿಲ್ಲ. ಸಾಗರದ ಜ್ಯೂನಿಯರ್ ಕಾಲೇಜಿನ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರಿಂದ  ಹಿಜಾಬ್ ಹಾಗೂ ಬುರ್ಖಾವನ್ನು ನೀವು ತೆಗೆಸಿದರೆ…

Read Full News

ಶಿವಮೊಗ್ಗ ಬಾಪೂಜಿ ಕಾಲೇಜು ಆವರಣದಲ್ಲಿ ಕಲ್ಲು ತೂರಾಟ :

ಶಿವಮೊಗ್ಗ :  ರಾಜ್ಯದಾದ್ಯಂತ ಹಿಜಾಬ್-ಕೇಸರಿ ವಿವಾದ ತಾರಕಕ್ಕೆ ಏರಿರುವಂತೆಯೇ ನಗರದ ಬಾಪೂಜಿ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.  ಇಂದು ಬಾಪೂಜಿ ನಗರ ಸರ್ಕಾರಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮವಾಗಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ವಿದ್ಯಾರ್ಥಿಗಳು ಕೇಸರಿ ಧ್ವಜವನ್ನು ಧ್ವಜಸ್ತಂಭಕ್ಕೆ ಕಟ್ಟಲು.ಮುಂದಾಗಿದ್ದಾರೆ. ಇದಕ್ಕೂ ಮುನ್ನವೇ ಕಾಲೇಜು ಕಟ್ಟಡ ಏರಿದ್ದ ಕೆಲವು ವಿದ್ಯಾರ್ಥಿಗಳು ಕಿಡಿಗೇಡಿಗಳ ಕುಮ್ಮಕ್ಕಿನಿಂದ ಮೇಲಿನಿಂದ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ….

Read Full News