ರಿಪ್ಪನ್‌ಪೇಟೆ: ಆರ್ಥಿಕ, ಸಾಮಾಜಿಕ, ಧಾರ್ಮಿಕ ಭಷ್ಟಾಚಾರ ನಿರ್ಮೂಲನೆ ಮಾಡುವುದರೊಂದಿಗೆ ಸರ್ವಸಮತೆಯ ರಾಷ್ಟ್ರ ನಿರ್ಮಾಣ ಮಾಡುವುದು ಅಮ್ಆದ್ಮಿ ಪಕ್ಷದ ಉದ್ದೇಶವಾಗಿದೆ ಎಂದು ಎಎಪಿ ಮುಖಂಡ ಹನೀಫ್ ಹೇಳಿದರು.
ಸಮೀಪದ ಚಿಕ್ಕಜೇನಿ ಪದ್ಮಶ್ರೀ ಅನಾಥಾಶ್ರಮದಲ್ಲಿ ಶುಕ್ರವಾರ ಪಂಜಾಬ್ ರಾಜ್ಯದಲ್ಲಿ ಆಮ್ಆದ್ಮಿ ಪಕ್ಷ ಅಭೂತಪೂರ್ವ ಜಯಗಳಿಸಿರುವ ಹಿನ್ನೆಲೆಯಲ್ಲಿ ಅನಾಥರಿಗೆ ಸಿಹಿ ಹಾಗೂ ಅಗತ್ಯ ದಿನಸಿ ಸಾಮಾನು ವಿತರಿಸಿ ಮಾತನಾಡಿ ನಮ್ಮ ವಿಜಯೋತ್ಸವ ಅರ್ಥಪೂರ್ಣವಾದದು ಈಗಾಗಲೆ ಪಕ್ಷದ ವರಿಷ್ಠ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ದೆಹಲಿ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣದಲ್ಲಿ ಕ್ರಾಂತಿಕಾರಿಕ ಬದಲಾವಣೆ ತಂದಿದ್ದಾರೆ. ಅಲ್ಲಿನ ಸರ್ವನಾಗರೀಕರಿಗೂ ಅಗತ್ಯ ಮೂಲಭೂತ ಸೌಲಭ್ಯ ಕಲಿಸಿ ಮನೆಮಾತಾಗಿದ್ದಾರೆ. ಜಾತಿ ರಹಿತ ಭ್ರಷ್ಟಾಚಾರ ಮುಕ್ತ ಮಾದರಿ ಆಡಳಿತದಿಂದ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದು, ಪ್ರಬುದ್ಧ ಮತದಾರರಿಂದ ಪಂಜಾಬ್‌ನಲ್ಲಿ ಸರಕಾರ ರಚನೆಯೊಂದಿಗೆ ಗೋವಾದಲ್ಲಿಯೂ ಅಸ್ಥಿತ್ವಕಂಡುಕೊಂಡಿದೆ. ದೇಶದ ಸಮಗ್ರ ಅಭಿವೃದ್ಧಿಯನ್ನು ಬಯಸಿರುವ ಪಕ್ಷ ಸಂಘಟನೆಗಾಗಿ ಕರ್ನಾಟಕ ಸಹಿತ ಎಲ್ಲಾ ರಾಜ್ಯಗಳಲ್ಲಿಯೂ ಮುಂದಿನ ದಿನಗಳಲ್ಲಿ ಎಎಪಿ ಬಲಿಷ್ಠಗೊಳಿಸಲು ಮನವಿಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರಪ್ಪ ಕುಕ್ಕಳಿ.ಹಸನಬ್ಬ.ನಾರಾಯಣ ಸಿಂಗ್, ರಾಜಾರಾಮರ್ ಬಾಳಿಗ, ಪದ್ಮಶ್ರೀ ಅನಾಥಾಶ್ರಮದ ಪ್ರಭಾಕರ ಬೆಳಿಸರ ಇನ್ನಿತರರಿದ್ದರು.