ರಿಪ್ಪನ್ ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಭರತ್ ರಾಜ್ (ಬೆಳ್ಳಿ) ಎಂಬ ಬಾಲಕ 21-10-2021 ರಂದು ಹಾರಂಬಳ್ಳಿ ಮನೆಯ ಸಮೀಪ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟಿದ್ದನು.
ಇಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರು ಮೃತ ಭರತ್ ರಾಜ್ ರವರ ತಾಯಿ ಶ್ರೀಮತಿ ಲಕ್ಷ್ಮಿ ವಾಸುದೇವ ರವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಮಂಜೂರಾದ 5 ಲಕ್ಷ ರೂ ಗಳ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಿ, ಸಾಂತ್ವನ ಹೇಳಿದರು.
ಇಂದು ಪುರಪ್ಪೆಮನೆಯಲ್ಲಿ ನಡೆದ ಕಂದಾಯ ಇಲಾಖೆಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಕ್ರಮದಲ್ಲಿ ಭರತ್ ರಾಜ್ ಅವರ ಪೋಷಕರಿಗೆ 5ಲಕ್ಷ ರೂ ಗಳ ಪರಿಹಾರದ ಆದೇಶ ಪ್ರತಿಯನ್ನು ವಿತರಿಸಲಾಯಿತು.
ಸಾಗರ ಉಪವಿಭಾಗಧಿಕಾರಿಗಳು, ತಹಶೀಲ್ದಾರರು, ಚುನಾಯಿತ ಪ್ರತಿನಿಧಿಗಳು,ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಿಂಚಿ ಮರೆಯಾದ ಅದ್ಭುತ ಪ್ರತಿಭೆ ಬೆಳ್ಳಿ( ಭರತ್ ರಾಜ್)
ರಿಪ್ಪನ್ ಪೇಟೆ ಪಟ್ಟಣದ ಮೇರಿ ಮಾತಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿ ಹಾರಂಬಳ್ಳಿ ಗ್ರಾಮದ ನಿವಾಸಿ ವಾಸುದೇವ್ ಎಂಬವರ ಪುತ್ರ ಭರತ್ ರಾಜ್ ಅಲಿಯಾಸ್ ಬೆಳ್ಳಿ ಎಂಬಾತ ತನ್ನ ಅದ್ಭುತ ಪ್ರತಿಭೆಯಿಂದ ರಿಪ್ಪನ್ ಪೇಟೆಯ ಮನೆಮಾತಾಗಿದ್ದ.
ಇತ್ತೀಚೆಗೆ ಆಕಸ್ಮಿಕವಾಗಿ ತಮ್ಮ ಮನೆಯ ಹತ್ತಿರ ಇರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾರದ ಲೋಕಕ್ಕೆ ಹೋಗಿದ್ದಾನೆ.ಇಡೀ ಶಾಲೆಯಲ್ಲಿ ಈತ ಅತ್ಯಂತ ಚಟುವಟಿಕೆಯಿಂದ ಇದ್ದ ವಿದ್ಯಾರ್ಥಿಯಾಗಿದ್ದ, ಎಲ್ಲಾ ಸ್ನೇಹಿತರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.
ಈತ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಿಪ್ಪನ್ ಪೇಟೆಯ ಗುಡ್ ಶಫರ್ಡ್ ಶಾಲೆಯಲ್ಲಿ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮೇರಿ ಮಾತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.ವಿಧಿಯ ಆಟಕ್ಕೆ ಬಲಿಯಾಗಿ ಅದ್ಭುತ ಪ್ರತಿಭೆ ಬಾಳಿ ಬೆಳಕಾಗ ಬೇಕಿದ್ದ ಈತನ ಜೀವನದಲ್ಲಿ ವಿಧಿರಾಯ ಕರೆದುಕೊಂಡು ಹೋದ.
ಈತನ ಪ್ರತಿಭೆಗೆ ಬೆರಗಾದವರು ಅಷ್ಟಿಷ್ಟಲ್ಲ. ಈತ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ,ಜಿಲ್ಲೆ, ವಿಭಾಗಿಯ ಮಟ್ಟ ,ಹಾಗೂ ರಾಜ್ಯ ಮಟ್ಟದಲ್ಲಿ ಕಬ್ಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಪ್ರತಿಮ ಸಾಧನೆ ತೋರಿಸಿ ಶಾಲೆಗೆ, ಊರಿಗೆ ,ಶಿಕ್ಷಕರಿಗೆ ಕೀರ್ತಿ ತಂದ ಹೆಸರು ಈತನಿಗೆ ಸಲ್ಲುತ್ತದೆ.
ವೈಯಕ್ತಿಕವಾಗಿ ಈತ ಅತ್ಯಂತ ನಯ ,ವಿನಯ ಸೌಮ್ಯ ಗುಣ ರಕ್ತಗತವಾಗಿ ಬಂದಿದೆ. ಈತನ ಮೃದು ಸ್ವಭಾವ ಎಲ್ಲರನ್ನು ಪ್ರೀತಿ ಕೊಡಿಸುವಂತೆ ಮಾಡಿದೆ. ಈತನ ಮರಣ ಇಡೀ ಶಾಲೆಗೆ, ಶಿಕ್ಷಕರಿಗೆ, ಕ್ರೀಡಾ ರಂಗಕ್ಕೆ, ತುಂಬಲಾರದ ನಷ್ಟವಾಗಿದೆ.ಚಿಗುರುವ ಕುಡಿ ಅರಳುವ ಮುನ್ನವೇ ಬಾಡಿ ಹೋಗಿದ್ದು ಇಡೀ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.
ಈತನ ಪ್ರೀತಿಗೆ ,ಇವನ ನಯ, ವಿನಯ ಗುಣಗಳಿಗೆ , ಶಿಕ್ಷಕರು ಸಾರ್ವಜನಿಕರು, ಅಕ್ಕಪಕ್ಕದವರು, ಇವನನ್ನು, ಪ್ರೀತಿಯಿಂದ” ಬೆಳ್ಳಿ ”ಎಂದು ಕರೆಯುತ್ತಿದ್ದರು.
ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇