ಮಾನವೀಯತೆ ಮೆರೆದ ಸಾಗರದ ಜೈನ್ ಶೇಖ್ :

ಸಾಗರ : ಹೊಂಡಾ ಆಕ್ಟೀವಾ ಸ್ಕಿಡ್ ಆಗಿ ಅಪಘಾತಕ್ಕೀಡಾದ ಗಾಯಾಳನ್ನು ವಾಹನ ಸವಾರರೊಬ್ಬರು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದ ಘಟನೆ ಮಂಗಳವಾರ ನಡೆದಿದೆ.

ಇಲ್ಲಿನ ಕೆಳದಿ ರಸ್ತೆಯಲ್ಲಿರುವ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಮುಂಭಾಗ ಹೊಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕ ಅರುಣ್ ಕುಮಾರ್ (30), ಅಪಘಾತವಾಗಿ ತಲೆಗೆ ತೀವ್ರತರವಾದ ಗಾಯವಾಗಿ ರಕ್ತ ಸೋರುತ್ತಿತ್ತು.ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಸಿವಿಲ್ ಕಂಟ್ರಾಕ್ಟರ್ ಜೈನ್ ಶೇಖ್ ಎಂಬುವವರು ಜನ ಸೇರಿದ್ದನ್ನು ಗಮನಿಸಿ ಕಾರು ನಿಲ್ಲಿಸಿ ನೋಡಿದಾಗ ಅರುಣ್ ಕುಮಾರ್ ನೋವಿನಿಂದ ಒದ್ದಾಡುತ್ತಿರುವುದನ್ನು ನೋಡಿ ಈ ವೇಳೆ ಕೂಡಲೇ ತನ್ನ ಕಾರಿನಲ್ಲಿ ಗಾಯಾಳನ್ನು ಸಾಗರದ ಉಪವಿಭಾಗೀಯ  ಆಸ್ಪತ್ರೆಗೆ ಸೇರಿಸಿ,ಪ್ರಥಮ ಚಿಕಿತ್ಸೆ ನೀಡಲು ನೆರವಾದರು.

ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲು ನೆರವಾದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಪ್ರಶಂಸೆಗು ಪಾತ್ರರಾಗಿದ್ದಾರೆ.ಇದೀಗ ಜಾತಿ, ಧರ್ಮ ನೋಡದೆ, ಮಾನವೀಯತೆಯೇ ನಿಜವಾದ ಧರ್ಮ ಎಂದು ಸಾರಿದ ಜೈನ್ ಶೇಖ್ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಒಳಗಾಗಿದ್ದಾರೆ.


ಮಾಹಿತಿ : ಟೈಮ್ಸ್ ಆಫ್ ಸಾಗರ್

Leave a Reply

Your email address will not be published. Required fields are marked *