ಕ್ರೈಂ ಸುದ್ದಿ:
ರಿಪ್ಪನ್‌ಪೇಟೆ , ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತಿದ್ದ ಮನೆಗಳ್ಳ ಅರೆಸ್ಟ್ – 32 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ
ರಿಪ್ಪನ್‌ಪೇಟೆ , ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತಿದ್ದ ಮನೆಗಳ್ಳ ಅರೆಸ್ಟ್ – 32 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ ರಿಪ್ಪನ್‌ಪೇಟೆ ಹಾಗೂ ಆನಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ರಿಪ್ಪನ್‌ಪೇಟೆ ಠಾಣೆ ವ್ಯಾಪ್ತಿಯ ಕೋಡೂರು , ದೂನ , ನೆವಟೂರು ಸೇರಿದಂತೆ ಐದು ಮನೆ ಕಳ್ಳತನ ಹಾಗೂ ಆನಂದಪುರ ಠಾಣೆ ವ್ಯಾಪ್ತಿಯ ನಾಲ್ಕು ಪ್ರಕರಣದ ಹಾಗೂ ವಿವಿಧ…
ತುಂಗಾ ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನಾಪತ್ತೆ
ತುಂಗಾ ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನಾಪತ್ತೆ ಶಿವಮೊಗ್ಗ : ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾಗಿರುವ ಮಹಿಳೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದ ಬಳಿ ತುಂಗಾ ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ರೇಷ್ಮಾಬಾನು (33) ನಾಪತ್ತೆಯಾಗಿದ್ದಾರೆ. ಕಾಲು ಜಾರಿ ಚಾನಲ್‌ಗೆ ಬಿದ್ದಿರುವ ಶಂಕೆ ಇರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
RIPPONPETE | ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ – ಪ್ರಕರಣ ದಾಖಲು
RIPPONPETE | ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ – ಪ್ರಕರಣ ದಾಖಲು ಒಂದು ವರ್ಷದ ಹೆಣ್ಣು ಮಗುವನ್ನು ನೆಲಕ್ಕೆ ಅಪ್ಪಳಿಸಿ ಸಾಯಿಸಲು ಮುಂದಾದನಾ ಪಾಪಿ ತಂದೆ..!!?? ರಿಪ್ಪನ್‌ಪೇಟೆ : ಗಂಡು ಮಗು ಆಗಿಲ್ಲ ಎನ್ನುವ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪಟ್ಟಣದ ಸಮೀಪದ ಅರಸಾಳು ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅರಸಾಳು ಗ್ರಾಮದ ಕಿರಣ್ ಡಿಸೋಜಾ , ಅತ್ತೆ ಸೂರಿನ್ ಡಿಸೋಜಾ , ನಾದಿನಿ ನಿರ್ಮಲ ಮತ್ತು…
ಮೈಕ್ರೋ ಫೈನಾನ್ಸ್ ನವರು ಮನೆ ಬಾಗಿಲಿಗೆ ಬಂದು ಕಿರಿಕಿರಿ ಮಾಡಿದರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ
ಮೈಕ್ರೋ ಫೈನಾನ್ಸ್ ನವರು ಮನೆ ಬಾಗಿಲಿಗೆ ಬಂದು ಕಿರಿಕಿರಿ ಮಾಡಿದರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವು ಸಲುವಾಗಿಯೇ ಕಾನೂನು ಜಾರಿ ಮಾಡಿದೆ. ಆದಾಗ್ಯು ಕೊಟ್ಟ ದುಡ್ಡು ವಾಪಸ್ ಕೊಡುವಾಗ, ಇಸ್ಕೊಂಡಾಗ ಇದ್ದ ನಿಯತ್ತು ಇರಬೇಕಲ್ವಾ ಎನ್ನುತ್ತಲೇ ಸಾಲಗಾರರು ಮತ್ತಷ್ಟು ಕಿರುಕುಳ ನೀಡುತ್ತಿರುವ ಬಗ್ಗೆ ವರದಿಗಳು ಕೇಳಿಬಂದಿದೆ. ಶಿವಮೊಗ್ಗದಲ್ಲಿಯು ಇಂತಹ ಸಾಲದ ಕಿರುಕುಳ ಸಾಮಾನ್ಯವಾಗಿದೆ. ಹಣ ಪಡೆದವರು ಸ್ವಲ್ಪ ವೀಕ್ ಎಂದು ಗೊತ್ತಾಗುತ್ತಲೇ ಬಾಯಿಗೆ ಬಂದ ಹಾಗೆ…
ಕರಾವಳಿಯಲ್ಲಿ 20 ಬೈಕ್ ಕದ್ದಿದ್ದ ಸೊರಬದ ಮಣಿಕಂಠ ಬಂಧನ
ಕರಾವಳಿಯಲ್ಲಿ 20 ಬೈಕ್ ಕದ್ದಿದ್ದ ಸೊರಬದ ಮಣಿಕಂಠ ಬಂಧನ ಶಿವಮೊಗ್ಗ: ದಕ್ಷಿಣ ಕನ್ನಡದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಿವಾಸಿಯೊಬ್ಬ ಬೈಕ್ ಕಳ್ಳತನ ಪ್ರಕರಣಗಳ ಮಾಸ್ಟರ್ ಮೈಂಡ್ ಆಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ನಡೆಯುವ ಕಂಬಳ, ಜಾತ್ರೆ ಸೇರಿದಂತೆ, ಬಸ್ಸು, ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಒಟ್ಟು ಸೊರಬದ ವ್ಯಕ್ತಿ ಸೇರಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದೆ. ಶಿವಮೊಗ್ಗ…
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ ಸಾಗರ : ಸಂಜೆ ವೇಳೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ವೃದ್ದೆಯ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಫಲರಾಗಿದ್ದಾರೆ. ಸಾಗರ ತಾಲೂಕು ಶೆಡ್ತಿಕೆರೆ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರವಿಕುಮಾರ್ ಸಿ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಆರೋಪಿಯಿಂದ ಕಳವು…
8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ!
8 ತಿಂಗಳ ಗರ್ಭಿಣಿ ಪತ್ನಿಯನ್ನು ಮಗನ ಕಣ್ಣೆದುರೇ ಹತ್ಯೆಗೈದು ಠಾಣೆಗೆ ಶರಣಾದ ಪಾಪಿ ಪತಿ! ತುಮಕೂರು : ಎಂಟು ತಿಂಗಳ ಗರ್ಭಿಣಿ ಹೆಣ್ಣು 8 ವರ್ಷದ ಮಗನ ಕಣ್ಣೆದುರುಗಡೆನೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತುಮಕೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಿನ್ನೆ ನಡೆದಿದೆ. ಕೊಲೆಯಾದ ಗರ್ಭಿಣಿಯ ಹೆಸರು ನಗ್ಮಾ ಎಂದು ತಿಳಿದು ಬಂದಿದ್ದು ಇನ್ನೂ ಪಾಪಿ ಪತಿಯ ಹೆಸರು ಸೈಯದ್ ಎಂದು ತಿಳಿದುಬಂದಿದೆ. ಹೌದು ತುಮಕೂರು ನಗರದ…
ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು
ತೋಟದಲ್ಲಿ ಮೇಕೆ ಮೇಯಿಸುತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ – ಕ್ಷುಲ್ಲಕ ಕಾರಣಕ್ಕೆ ವಿಕೃತಿ ಮೆರೆದ ಪಾಪಿಗಳು ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ 50 ವರ್ಷದ ದಲಿತ ಮಹಿಳೆ ಮೇಲೆ ತೋಟದ ಮಾಲೀಕ ಹಲ್ಲೆ ನಡೆಸಿದ್ದಾನೆ.ಅವರನ್ನು ಸ್ಥಳೀಯರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೋಟದಲ್ಲಿ ಮಹಿಳೆ ಮೇಕೆಗಳನ್ನ ಮೇಯಿಸುತ್ತಿದ್ದಾಳೆಂದು ಆಕ್ರೋಶಗೊಂಡ…
ಜಾನುವಾರು ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು – ಶಿಕಾರಿಪುರದ ಇಬ್ಬರ ಬಂಧನ
ಜಾನುವಾರು ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು – ಶಿಕಾರಿಪುರದ ಇಬ್ಬರ ಬಂಧನ ಬಂಕಾಪುರ : ಜಾನುವಾರುಗಳನ್ನು ಕಳ್ಳತನಗೈಯುತಿದ್ದ ನಟೋರಿಯಸ್ ಗ್ಯಾಂಗ್ ನ್ನು ಬಂಕಾಪುರ ಠಾಣೆ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕವಾಸಪೂರ ಗ್ರಾಮದ ದಾದಾಫೀರ್ (35) ಅಬ್ದುಲ್ ಸತ್ತಾರ (38) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬುಲೆರೋ ಪಿಕ್ ಅಪ್ ವಾಹನ ಮತ್ತು ಕಳ್ಳತನ ಮಾಡಿದ್ದ ಮೂರು ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ….
ಹೆಣ್ಣು ಕೊಟ್ಟ ಮಾವನನ್ನೆ ಹತ್ಯೆಗೈದ ಅಳಿಯ
ಅಳಿಯನಿಂದ ಮಾವನ ಹತ್ಯೆ ಹೊಳೆಹೊನ್ನೂರು : ಇಲ್ಲಿನ ಸಮೀಪದ ಹನುಮಂತಾಪುರ ಗ್ರಾಮದಲ್ಲಿ ವಯಕ್ತಿಕ ಕಾರಣಕ್ಕಾಗಿ ರಾಜಪ್ಪ(55) ಎಂಬ ವ್ಯಕ್ತಿಯನ್ನು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ. ಅರೋಪಿ ಮಂಜುನಾಥ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ರಾಜಪ್ಪನ ಮಗಳು ಮನೆಗೆ ಹೋಗಿ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಶಂಕೆಯಿದೆ. ಮಂಜುನಾಥನು ಮೃತ ರಾಜಪ್ಪ ಅವರ ಅಳಿಯ ಅಂದರೆ ಮಗಳ ಪತಿ ಆಗಿದ್ದಾನೆ. ಆರೋಪಿ ಮಂಜುನಾಥನು ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಜೈಲಿನಲ್ಲಿದ್ದು…