POSTMANNEWS

ನೈಜ ಸುದ್ದಿ ನೇರ ಬಿತ್ತರ..

ಮಳೆಗೆ ಮನೆಯ ಗೋಡೆ ಕುಸಿದು ಶತಾಯುಷಿ ವೃದ್ದೆ ಸಾವು – ಹಲವರಿಗೆ ಗಾಯ

ಮಳೆಗೆ ಮನೆಯ ಗೋಡೆ ಕುಸಿದು ಶತಾಯುಷಿ ವೃದ್ದೆ ಸಾವು – ಹಲವರಿಗೆ ಗಾಯ

ಶಿವಮೊಗ್ಗ , ಜೂ. 16: ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ, ವೃದ್ದೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟು ಮನೆಯಲ್ಲಿದ್ದ ಇತರೆ ಸದಸ್ಯರಿಗೆ ಸಣ್ಣಪುಟ್ಟ ಗಾಯವಾದ ಘಟನೆ ತಡರಾತ್ರಿ ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಅಡಗಡಿ ಗ್ರಾಮದಲ್ಲಿ ನಡೆದಿದೆ.

100 ವರ್ಷದ  ಸಿದ್ದಮ್ಮ ಮೃತಪಟ್ಟವರು.ಇವರು  ಹೊನ್ನಾಳಿ ತಾಲೂಕಿನ ಕುಂಕೋವ ಗ್ರಾಮದ ನಿವಾಸಿಯಾಗಿದ್ದಾರೆ. ಇತ್ತೀಚೆಗೆ ಅಡಗಡಿ ಗ್ರಾಮದಲ್ಲಿರುವ ಸಂಬಂಧಿ ಹೇಮಾವತಿ ಎಂಬುವರ ಮನೆಗೆ ಆಗಮಿಸಿದ್ದಾಗ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ಹೇಮಾವತಿ ಎಂಬುವರಿಗೆ ಗಾಯವಾಗಿದ್ದು, ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಉಳಿದಂತೆ ಅವರ ಕುಟುಂಬ ಸದಸ್ಯರಾದ ಪಲ್ಲವಿ, ಪರಶುರಾಮ್, ಚೇತನ್ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *