w
Headlines
Home » ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್; ಸ್ಥಳದಲ್ಲೇ ದುರ್ಮರಣ

ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್; ಸ್ಥಳದಲ್ಲೇ ದುರ್ಮರಣ

JPEG 20260626 194550

ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್; ಸ್ಥಳದಲ್ಲೇ ದುರ್ಮರಣ

A young man from Indiranagar, Tirthahalli, died after being electrocuted while climbing a tree to pluck leaves for patrode near Lakkunda. Agumbe Police have registered a case.

ತೀರ್ಥಹಳ್ಳಿ, ಜೂನ್ 26: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಸಮೀಪ ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು ತಾಲೂಕಿನ ಇಂದಿರಾನಗರ ನಿವಾಸಿ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಅಭಿಷೇಕ್ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ ಪತ್ರೋಡೆ ಮಾಡಲು ಮರಕೆಸುವಿನ ಎಲೆಗಳನ್ನು ಕೊಯ್ಯುವ ಉದ್ದೇಶದಿಂದ ಮರ ಹತ್ತಿದ್ದರು. ಈ ವೇಳೆ ಮರದ ಮೇಲ್ಭಾಗದಿಂದ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಆಕಸ್ಮಿಕವಾಗಿ ತಗುಲಿದ್ದು, ತೀವ್ರ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.