POSTMANNEWS

ನೈಜ ಸುದ್ದಿ ನೇರ ಬಿತ್ತರ..

SHIVAMOGGA | ಪತ್ನಿ ಮತ್ತು ಅತ್ತೆಯ ಕೊಲೆಗೆ ಯತ್ನಿಸಿದವನಿಗೆ ಶಿಕ್ಷೆ ಪ್ರಕಟ

SHIVAMOGGA | ಪತ್ನಿ ಮತ್ತು ಅತ್ತೆಯ ಕೊಲೆಗೆ ಯತ್ನಿಸಿದವನಿಗೆ ಶಿಕ್ಷೆ ಪ್ರಕಟ

ಶಿವಮೊಗ್ಗ: ವಿಚ್ಛೇದಿತ  ಪತ್ನಿಯ ಮನೆಗೆ ತೆರಳಿ ಆಕೆ ಮತ್ತು ಆಕೆಯ ತಾಯಿಯನ್ನು ಕೊಲೆ ಮಾಡುವ ಉದ್ದೇಶದಿಂದ  ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಪತಿಗೆ ಜಿಲ್ಲಾ ನ್ಯಾಯಾಲಯ  ೨ ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆ ಮತ್ತು ರೂ ೨೦ ಸಾವಿರ  ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ವಿದ್ಯಾನಗರದ ವಾಸಿ ರಾಘವೇಂದ್ರ (೩೮) ಶಿಕ್ಷಗೊಳಗಾದವನು.  ಈತನು, ತನ್ನ ಹೆಂಡತಿಯೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಆದರೆ ರಾಘವೇಂದ್ರನು ತನ್ನ ಹೆಂಡತಿಯ  ಮನೆಗೆ ಹೋಗಿ ಹೆಂಡತಿ ಮಕ್ಕಳು ಮತ್ತು ಆಕೆಯ ತಾಯಿಯ ಜೊತೆಗೆ ಆಗ್ಗಾಗ್ಗೆ ಗಲಾಟೆ ಮಾಡುತ್ತಿದ್ದನು. ಹಳೆ ದ್ವೇಷದ ಹಿನ್ನೆಲೆಯಲ್ಲಿ ೨೦೧೭ರ ಜೂನ್  ೨ ರಂದು  ಕೊಲೆ ಮಾಡಲು ಯತ್ನಿಸಿದ್ದನು. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖಾಧಿಕಾರಿಯಾಗಿದ್ದ ಜಯನಗರದ ಅಂದಿನ ಎಸ್ ಐ  ಇಮ್ರಾನ್ ಬೇಗ್ ಪ್ರಕರಣದ  ತನಿಖೆ ಪೂರೈಸಿ ಆರೋಪಿತನ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ  ಶಾಂತರಾಜ್  ವಾದ ಮಂಡಿಸಿದರು.

೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು,  ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಯಶವಂತ್‌ಕುಮಾರ್ ಮಂಗಳವಾರ ತೀರ್ಪು ನೀಡಿದ್ದಾರೆ.

About The Author

Leave a Reply

Your email address will not be published. Required fields are marked *