ಮುದ್ದಾದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ!
ಗಂಡ ರಘುನಿಂದ ವಿಚ್ಛೇದನಕ್ಕೆ ಮುಂದಾಗಿದ್ದಳು ಎನ್ನಲಾಗಿದೆ. ಕಳೆದ ವರ್ಷ ಗ್ರಾಮದ ಹಿರಿಯರು ಸೇರಿ ಪಂಚಾಯಿತಿ, ರಾಜಿ ಸಂಧಾನದ ಮೂಲಕ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು ಎನ್ನಲಾಗಿದೆ.
ನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಾಯಿಯೊಬ್ಬಳು ಹೆತ್ತ ಮಗಳನ್ನೇ ನೀರಿನ ತೊರೆಯಲ್ಲಿ ಮುಳುಗಿಸಿ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ಶಿವಮೊಗ್ಗದ ರಘು ಹಾಗು ಶ್ವೇತಾ ಎಂಬುವರ ಪುತ್ರಿ ಸಾನ್ವಿ (6) ಮೃತ ದುರ್ದೈವಿ.
ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನಲಾಗಿರುವ ಶ್ವೇತಾ ಅವರ ತವರು ಮನೆಯಾದ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮಕ್ಕೆ ಆಗಾಗ ಬಂದು ಇರುವ ಜಮೀನನ್ನು ಅನುಭವಿಸುತ್ತಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು. ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ ಹೀಗೆ ನಾನಾ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಶ್ವೇತಾ ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ಬೆಂಗಳೂರು ಹಾಗೂ ಅಲ್ಲಿ ಇಲ್ಲಿ ಇದ್ದಳು.
ಗಂಡ ರಘುನಿಂದ ವಿಚ್ಛೇದನಕ್ಕೆ ಮುಂದಾಗಿದ್ದಳು ಎನ್ನಲಾಗಿದೆ. ಕಳೆದ ವರ್ಷ ಗ್ರಾಮದ ಹಿರಿಯರು ಸೇರಿ ಪಂಚಾಯಿತಿ, ರಾಜಿ ಸಂಧಾನದ ಮೂಲಕ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು ಎನ್ನಲಾಗಿದೆ.
ಶನಿವಾರ ಶಿವಮೊಗ್ಗದಿಂದ ಬಂದಿದ್ದ ಶ್ವೇತಾಗೆ ತಮ್ಮ ಮನೆ ಕೀ ಸಿಗದ ಹಿನ್ನಲೆಯಲ್ಲಿ ಪಕ್ಕದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು. ಭಾನುವಾರ ಬೆಳಿಗ್ಗೆ 9 ಗಂಟೆಗೆ ಜಮೀನು ಕಡೆಗೆ ಹೋಗುತ್ತೇನೆಂದು ಪುತ್ರಿ ಸ್ವಾನಿಯನ್ನು ಕರೆದುಕೊಂಡು ಹೋಗಿದ್ದಳು. ತಮ್ಮ ಜಮೀನಿನ ಪಕ್ಕದ ಕಟ್ಟೆ ಹತ್ತಿರ ಹರಿಯುತ್ತಿದ್ದ ನೀರಿನ ಗುಂಡಿ (ತೊರೆಗೆ) ಮಗಳನ್ನು ನೂಕಿ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾಳೆ.
ಮಗು ಜೋರಾಗಿ ಅತ್ತು ಸುಸ್ತಾದ ಹಿನ್ನೆಲೆ ಊರಿಗೆ ದೌಡಾಯಿಸಿ, ತನ್ನ ವರಸೆ ಬದಲಿಸಿದ ಶ್ವೇತಾ, ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು. ನನಗೆ ಈ ಜೀವನ ಸಾಕು. ಮಗಳು ನಾನು ಸಾಯಬೇಕು ನಮನ್ನು ಸಾಯಲು ಬಿಡಿ ಎಂದು ರಂಪಾಟ ಮಾಡಿದ್ದಾಳೆ. ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೊಟ್ಟೆಯಲ್ಲಿ ಇದ್ದ ನೀರನ್ನು ಹೊರ ತೆಗೆದ ಜನತೆ ಬಾಲಕಿಯನ್ನು ಎತ್ತಿಕೊಂಡು ಪ್ರಾಣ ಉಳಿಸಲು ಪ್ರಯತ್ನಿಸಿದರಾದರೂ ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಪ್ರಾಣ ಬಿಟ್ಟಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಿರೀಸಾವೆ ಠಾಣೆ ಪೊಲೀಸರು ಶ್ವೇತಾಳನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.