Headlines

ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ

ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ

ರಿಪ್ಪನ್ ಪೇಟೆ : ಸಮೀಪದ ಅಮೃತ ಗ್ರಾಪಂ ವತಿಯಿಂದ ಆಯೋಜಿಸಿದ್ದ ವರ್ಗಾವಣೆ ಹೊಂದಿದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಉಪ ವಲಯ ಅರಣ್ಯಧಿಕಾರಿ ಅಕ್ಷಯ್ ಕುಮಾರ್ ರವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿ ಗೌರವಿಸಿದರು.

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಜನರ ಜನ ಮಾನಸದಲ್ಲಿ ಉಳಿದ ದಕ್ಷ ಅಧಿಕಾರಿ ಪ್ರವೀಣ್ ಎಸ್ ಪಿ ಯವರು ಇಂದು ಅವರ ಇಲಾಖೆ ಯ ನಿಯಮನುಸಾರ ವರ್ಗಾವಣೆ ಗೊಂಡಿದ್ದಾರೆ ಬಹಳಷ್ಟು ಜಠಿಲ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ವ್ಯಕ್ತಿತ್ವ ಹೊಂದಿದವರು ಅವರ ಸೇವೆ ಎಂದಿಗೂ ಜನ ಮಾನಸದಲ್ಲಿ ಉಳಿಯುವಂಥದ್ದು ಎಂದು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸಚಿನ್ ಗೌಡ ಹೇಳಿದರು.

ಹಾಗೆಯೇ ಇನ್ನೋರ್ವ ವರ್ಗಾವಣೆಗೊಂಡ ಅರಣ್ಯ ಇಲಾಖೆಯ ಅಧಿಕಾರಿ ಉಪವಲಯ ಅರಣ್ಯ ಅಧಿಕಾರಿ ಅಕ್ಷಯ್ ಕುಮಾರ್ ಅವರು ಸುಮಾರು ಐದು ವರ್ಷಗಳ ಕಾಲ ಈ ಭಾಗದಲ್ಲಿ ಸೇವೆ ಸಲ್ಲಿಸಿದ್ದು ಅರಣ್ಯ ರಕ್ಷಣೆಯ ಜೊತೆಗೆ ರೈತರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಮರಗಳನ್ನ ಕಡಿಯದೆ ಗ್ಯಾಸ್ ಬಳಸುವಕ್ಕೆ ಜನರನ್ನ ಪ್ರೆರೇಪಿಸಿ ಅರಣ್ಯ ರಕ್ಷಿಸಿದ್ದೂ ಅಲ್ಲದೆ ಪ್ರಾಣಿ ಪಕ್ಷಿಗಳ ಉಳಿಸುವ ನಿಟ್ಟಿನಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಜನಾನುರಾದವರು ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಅವರ ಸೇವೆಯನ್ನು ಪರಿಗಣಿಸಿ ವರ್ಗಾವಣೆ ಹೊಂದಿದ ಈ ಸಂದರ್ಭದಲ್ಲಿ ಆತ್ಮೀಯವಾಗಿ ಬೀಳ್ಕೊಡಬೇಕಾದ್ದು ನಾಗರೀಕರಾದ ನಮ್ಮ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿನೋದಮ್ಮ, ಪಿಡಿಓ ರಮೇಶ್, ಸದಸ್ಯರಾದ ಬಂಡಿ ಲಿಂಗರಾಜ್, ಮಾಜಿ ಅಧ್ಯಕ್ಷ ಬಷೀರ್‌ಸಾಬ್, ಸತ್ಯನಾರಾಯಣ , ಇನ್ನಿತರರಿದ್ದರು.

Leave a Reply

Your email address will not be published. Required fields are marked *