Headlines

ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ

ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪದ ರಾಮನಸರ ಶ್ರೀನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸುಬ್ರಹ್ಮಣ್ಯ ಷಷ್ಠಿ ಮತ್ತು ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶನಿವಾರದಂದು ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ, ಆಶ್ಲೇಷಾ ಬಲಿ ನಡೆಯಿತು. ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಹಾಗೂ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ತಂಡ ಪೂಜಾ ವಿಧಿವಿಧಾನಗಳ ನೆರವೇರಿಸಿದರು. ಉಡುಪಿ ಜಿಲ್ಲೆ…

Read More

ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ

ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಹಿರಿಯ ನ್ಯಾಯವಾದಿ ಡಾ ಕೆ ವೈ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಹೊಸನಗರ ತಾಲ್ಲೂಕಿನ ಅಮೃತ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ವಿಚಾರವಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಬರೆದ ಪುಸ್ತಕವನ್ನು ಶಿವಮೊಗ್ಗದ ಹಿರಿಯ ನ್ಯಾಯವಾದಿ ಡಾ. ಕೆ. ವೈ. ರಾಮಚಂದ್ರಪ್ಪ…

Read More

ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರಲಿಲ್ಲ – ಗ್ರಾಪಂ ಅಧ್ಯಕ್ಷ ಸಚಿನ್ ಗೌಡ

ರಿಪ್ಪನ್‌ಪೇಟೆ : ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಎಂದು ಅಮೃತ ಗ್ರಾಪಂ ನೂತನ ಅಧ್ಯಕ್ಷ ಸಚಿನ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದಲ್ಲಿ ಇಂದು ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಅಮೃತ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸಿದಾಗ ಅವರು ಮನ್ನಣೆ ನೀಡದ ಕಾರಣ ಬಿಜೆಪಿ ಪಕ್ಷದ ಬಂಡಾಯವಾಗಿ ಸ್ಪರ್ಧಿಸಿದ್ದೆ ಆದರೆ ಕೆಲವು ಮಾದ್ಯಮಗಳಲ್ಲಿ ಕಾಂಗ್ರೆಸ್…

Read More

ಗರ್ತಿಕೆರೆ ಗ್ರಾಪಂ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆ

ಗರ್ತಿಕೆರೆ ಗ್ರಾಪಂ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸಚಿನ್ ಗೌಡ ಆಯ್ಕೆಯಾಗಿದ್ದಾರೆ. ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗಂಧ್ರಳ್ಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಚಿನ್ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 11 ಜನ ಸದಸ್ಯ ಬಲದ ಗ್ರಾಪಂ ಚುನಾವಣೆಯಲ್ಲಿ ಸಚಿನ್ ಗೌಡ 7 ಮತ ಪಡೆದರೆ ಪ್ರತಿಸ್ಪರ್ಧಿ ದೇವರಾಜ್ 4 ಮತ ಪಡೆದಿದ್ದಾರೆ. ಬಿಜೆಪಿ ಬೆಂಬಲಿತ 8 ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ…

Read More