ಗಾಂಜಾ ಮಾರಾಟ ಪ್ರಕರಣ – ತಾಯಿ, ಮಗನಿಗೆ ಜೈಲು ಶಿಕ್ಷೆ
ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.
ಶಿವಮೊಗ್ಗ : ಗಾಂಜಾ ಮಾರಾಟ ಪ್ರಕರಣದಲ್ಲಿ ತಾಯಿ, ಮಗನಿಗೆ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂನ್ 13 ರಂದು ತೀರ್ಪು ನೀಡಿದೆ.
ಶಿಕಾರಿಪುರ ಪಟ್ಟಣದ ನಿವಾಸಿಗಳಾದ ಯಾಸಿರ್ ಪಾಷಾ (27) ಹಾಗೂ ಈತನ ತಾಯಿ ಶಹಜಾನ್ ಯಾನೆ ಸಾನಿಯಾ ಬೇಗಂ (52) ಜೈಲು ಶಿಕ್ಷೆಗೆ ಗುರಿಯಾದವರು.
ಯಾಸಿರ್ ಪಾಷಾಗೆ 6 ವರ್ಷ ಕಠಿಣ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ಹಾಗೂ ಶಹಜಾನ್ ಯಾನೆ ಸಾನಿಯಾ ಬೇಗಂಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ ಎಂ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
05-12-2021 ರಂದು ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪುರ ಪಟ್ಟಣದ ಕುಂಬಾರಗುಂಡಿ ಏರಿಯಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತಂತೆ ಲಭ್ಯವಾದ ಖಚಿತ ವರ್ತಮಾನದ ಮೇರೆಗೆ, ಇನ್ಸ್’ಪೆಕ್ಟರ್ ಗುರುರಾಜ್ ಮತ್ತವರ ಸಿಬ್ಬಂದಿಗಳು ದಾಳಿ ನಡೆಸಿದ್ದರು.
ತಾಯಿ ಹಾಗೂ ಮಗನ ವಿರುದ್ದ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0113/2021 ಕಲಂ 8(c), 20 (b) (II)(B), NDPS Act ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ನಂತರ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.