Headlines

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಸಾವು ಸೊರಬ : ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ದುರ್ದೈವಿ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ. ಜಯಂತ್ ಎಂದಿನಂತೆ ಬೆಳಗ್ಗೆ ಎದ್ದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್​ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ…

Read More

ರಿಪ್ಪನ್‌ಪೇಟೆ – ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ|Ripponpet

ರಿಪ್ಪನ್‌ಪೇಟೆ – ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ರಿಪ್ಪನ್‌ಪೇಟೆ : ಇಲ್ಲಿನ ಬೆನವಳ್ಳಿ ಗ್ರಾಮದಲ್ಲಿ ಶಾಲಾ ಮಕ್ಕಳ ಪ್ರವಾಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಬೆನವಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಶಾಲಾ ಮಕ್ಕಳನ್ನು ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಕರೆದೊಯ್ದು ವಾಪಾಸ್ ಶಿವಮೊಗ್ಗ ಕಡೆಗೆ ತೆರಳುತಿದ್ದ ವಿಜಯಲಕ್ಷ್ಮಿ ಬಸ್ ಹಾಗೂ ಶಿವಮೊಗ್ಗದಿಂದ ಹೊಂಬುಜ ದೇವಸ್ಥಾನಕ್ಕೆ ಹೊರಟಿದ್ದ ಮಾರುತಿ ಬಲೆನೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ…

Read More

ತ್ಯಾಗರ್ತಿ ಬಳಿ ಭೀಕರ ರಸ್ತೆ ಅಪಘಾತ – ಸಾಗರ ನಗರಸಭೆ ಮಾಜಿ ಅಧ್ಯಕ್ಷ ಸೇರಿದಂತೆ ಮೂವರಿಗೆ ಗಂಭೀರ ಗಾಯ|Accident

ಸಾಗರ ತಾಲ್ಲೂಕಿನ ತ್ಯಾಗರ್ತಿ ಸಮೀಪದಲ್ಲಿ ಮಾರುತಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂರು ಜನರಿಗೆ ಗಂಭೀರ ಗಾಯಾಗಳಾಗಿರುವ ಘಟನೆ ನಡೆದಿದೆ. ತ್ಯಾಗರ್ತಿ ಸಮೀಪದ ಅಬಸೆ ಬಳಿಯಲ್ಲಿ ಮಾರುತಿ ಓಮಿನಿ ಕಾರಿನಲ್ಲಿ ಮೂರು ಜನರು ಸಂಚರಿಸುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಸಾಗರ ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇನ್ನಿಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.ತ್ಯಾಗರ್ತಿ ಯಿಂದ ಸಾಗರ ಕಡೆಗೆ ತೆರಳುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವನ ಕಾಲು ಮುರಿದಿದ್ದು,…

Read More

ರಿಪ್ಪನ್‌ಪೇಟೆ : ಬೆನವಳ್ಳಿಯಲ್ಲಿ ಜಿಂಕೆ ಬೇಟೆ – ಮಾಂಸ ಸಮೇತ ಓರ್ವನ ಬಂಧನ|arrested

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆನವಳ್ಳಿ ಗ್ರಾಮದಲ್ಲಿ  ಜಿಂಕೆ ಭೇಟೆಯಾಡಿ ಮಾಂಸವನ್ನು ಬಳಸಿಕೊಳ್ಳುತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಬೆನವಳ್ಳಿ ಗ್ರಾಮದ ಮನೋಹರ್ (34) ಬಂಧಿತ ಆರೋಪಿ.ಇನ್ನೋರ್ವ ಆರೋಪಿ ಬೆನವಳ್ಳಿ ಗ್ರಾಮದ ವಿನಯ್ (26) ಪರಾರಿಯಾಗಿದ್ದಾನೆ. ಮಾಂಸ ಮಾಡುವ ಉದ್ದೇಶದಿಂದ ಜಿಂಕೆಯನ್ನು ಭೇಟೆ ಮಾಡಿರುವ ಮಾಹಿತಿಯ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೆನವಳ್ಳಿ ಗ್ರಾಮದ ಸನಂ 10|06 ರಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ.ಈ ಹಿನ್ನಲೆಯಲ್ಲಿ ಆರೋಪಿ ಮನೋಹರ್ ನನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ವಿನಯ್ ಬಂಧನಕ್ಕೆ…

Read More

ಸಾಗರದಲ್ಲಿ ಬಜರಂಗ ದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ – ಸಂಘಟನೆಗಳಿಂದ ಪ್ರತಿಭಟನೆ|sagara

ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ,  ಈ ಘಟನೆಯಲ್ಲಿ ಸ್ವಲ್ಪದರಲ್ಲಿಯೆ  ಸುನೀಲ್ ಎಂಬಾತ ತಪ್ಪಿಸಿಕೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಗರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಘಟನೆ ಇದಾಗಿದ್ದು,  ಬೆಳಗ್ಗೆ ೯ ಗಂಟೆ ಸುಮಾರಿಗೆ ನಡೆದಿದೆ.  ಬೈಕ್​ನಲ್ಲಿ ಬರುತ್ತಿದ್ದ ಸುನೀಲ್​ ಮೇಲೆ ಸಮೀರ್​ ಎಂಬಾತ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ.  ಜಿಯೋ ಫೈಬರ್ ಕಚೇರಿಯ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ. ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.  ಸುನೀಲ್…

Read More

ಗರ್ತಿಕೆರೆ ಬಳಿ ಭೀಕರ ಅಪಘಾತ – ಮೀನು ವ್ಯಾಪಾರಿ ಸ್ಥಳದಲ್ಲೇ ಸಾವು|accident

ರಿಪ್ಪನ್‌ಪೇಟೆ : ಗರ್ತಿಕೆರೆ ಕಾಲೇಜು ಸಮೀಪದಲ್ಲಿ ಬೆಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ತಿಕೆರೆ ನಿವಾಸಿ ಮೀನು ವ್ಯಾಪಾರಿ ಕಬೀರ್ ಸಾಬ್ (72) ಎಂಬುವವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಎಕ್ಸ್ಎಲ್ ಸೂಪರ್ ಬೈಕ್ ನಲ್ಲಿ ಹೊರಟು ನಿಂತಿದ್ದ ಕಬೀರ್ ಸಾಬ್ ಎಂಬುವವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಅಪಘಾತದಲ್ಲಿ ಬೊಲೆರೋ ವಾಹನ ಸಹ ಪಲ್ಟಿಯಾಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ….

Read More

ಅಂಬಲಿಗೋಳ ಡ್ಯಾಮ್ ನಲ್ಲಿ ಕಾಲು ತೊಳೆಯಲು ಇಳಿದ ವ್ಯಕ್ತಿ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|dam

ಕಾಲು ತೊಳೆಯಲು ಹೋಗಿ ಅಂಬಲಿಗೋಳ ಡ್ಯಾಮ್ ನಲ್ಲಿ ಜಾರಿ ಬಿದ್ದ ವ್ಯಕ್ತಿ : ಅಗ್ನಿಶಾಮಕ ದಳದಿಂದ ತೀವ್ರ ಶೋಧ…!!! ಶಿಕಾರಿಪುರ ತಾಲೂಕಿನ ಅಂಬಲಿಗೋಳ ಡ್ಯಾಮ್ ನಲ್ಲಿ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ. ಕಪ್ಪನಹಳ್ಳಿ ಗ್ರಾಮದ ನಿವಾಸಿ ಜಗದೀಶ್ ಎಂಬ ವ್ಯಕ್ತಿ ತಮ್ಮ ಸ್ನೇಹಿತರೊಂದಿಗೆ ವಿಹಾರಕ್ಕೆ ಆಗಮಿಸಿದಾಗ ಅಂಬಲಿಗೋಳ ಡ್ಯಾಮ್ ಮೇಲಿನ ರಸ್ತೆಯಲ್ಲಿ ತಿರುಗಾಡಿದ್ದಾರೆ.ನಂತರ ಅಂಬಲಿಗೋಳ ಡ್ಯಾಮ್ ನಲ್ಲಿ ಇಳಿದು ಕಾಲು ತೊಳೆಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಇಂದು…

Read More

ರಿಪ್ಪನ್‌ಪೇಟೆ : ಚಲಿಸುತಿದ್ದ ಟಾಟಾ ಏಸ್ ವಾಹನದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕಣಬಂದೂರು ಶಾಲೆಯ ಬಳಿ ಟಾಟಾ ಏಸ್ ವಾಹನದಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಣಬಂದೂರು ಗ್ರಾಮದ ರಾಘವೇಂದ್ರ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಟಾಟಾ ಏಸ್(tata ace) ವಾಹನದಲ್ಲಿ  ತೋಟಕ್ಕೆ ದರಗಲು ತರುತ್ತಿರುವಾಗ ಕಣಬಂದೂರು ಶಾಲೆಯ(school) ಸಮೀಪದಲ್ಲಿ ಹಿಂಬದಿ ಕುಳಿತಿದ್ದ ರಾಘವೇಂದ್ರ ಆಯ ತಪ್ಪಿ ಕೆಳಗಿನ ಸಿಮೆಂಟ್ ರಸ್ತೆಯ ಮೇಲೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದನು. ಕೂಡಲೇ ಸ್ಥಳೀಯರು ಹಾಗೂ ಸಂಬಂಧಿಕರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ(hospital) ದಾಖಲಿಸಿದ್ದಾರೆ ಆದರೆ…

Read More

ತೀರ್ಥಹಳ್ಳಿ : ಚಾಕಲೇಟ್ ಎಂದು ಇಲಿ ಪಾಷಾಣ ತಿಂದ ಐದು ವರ್ಷದ ಮಗು – ಚಿಕಿತ್ಸೆ ಫಲಿಸದೇ ಸಾವು|rat poison

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದ ಬಳಿಯಲ್ಲಿ ಮಗುವೊಂದು ಇಲಿ ಪಾಷಾಣದ ಪೇಸ್ಟ್ ತಿಂದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೂಲಿ ಕಾರ್ಮಿಕ ಚಂದ್ರಪ್ಪ ಮತ್ತು ಗೀತಾ ದಂಪತಿಯ ಎಂಬುವವರ ಪುತ್ರ ಪ್ರೀತಮ್ (5) ಮೃತ ಬಾಲಕ.  ಇಲಿಗೆ ಅಂತಾ ಇಟ್ಟಿದ್ದ ಪಾಷಾಣವನ್ನು ಮಗು ಚಾಕೊಲೆಟ್ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡಿದೆ. ನಿನ್ನೆ ರಾತ್ರಿ ಮಗು ಅಸ್ಥಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವನ್ನಪ್ಪಿದೆ.  ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ…

Read More

ವಿದ್ಯುತ್ ಟ್ರಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಪವರ್ ಮ್ಯಾನ್ ಸಾವು – ಜಿಲ್ಲೆಯಲ್ಲಿ ವಾರದಲ್ಲಿ ಎರಡು ದುರಂತ ಘಟನೆ|mescom

ಶಿಕಾರಿಪುರ : ಇಲ್ಲಿನ ಕಪ್ಪನಹಳ್ಳಿ ಗ್ರಾಮದಲ್ಲಿ ಟ್ರಾನ್ಸಪಾರ್ಮ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್​  ಸಾವನ್ನಪ್ಪಿರುವ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಶ್ರೀಶೈಲಾ ಎನ್ನುವವರು ಮೃತಪಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಟ್ರಾನ್ಸಫಾರಮ್​ನಲ್ಲಿ ದೋಷ ಕಾಣಿಸಿಕೊಂಡಿತ್ತು ಆ ಹಿನ್ನಲೆಯಲ್ಲಿ ಲೈನ್​ ಮ್ಯಾನ್​ ಶ್ರೀಶೈಲ ಸ್ಥಳಕ್ಕೆ ತೆರಳಿ ಸಂಬಂಧಿಸಿದ ಸ್ಟೇಷನ್ ನಿಂದ ಲೈನ್ ಕ್ಲಿಯರೆನ್ಸ್ ಪಡೆದು ದುರಸ್ತಿ ಕಾರ್ಯ ಕೈಗೊಂಡಿದ್ದರು. ಆದರೆ ಏಕಾಏಕಿ ಆಫ಼್ ಆಗಿದ್ದ ವಿದ್ಯುತ್ ಲೈನ್ ನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಶ್ರೀಶೈಲಾ ಮೃತಪಟ್ಟಿದ್ದಾರೆ. ಲೈನ್​ ಮ್ಯಾನ್​…

Read More