ಕ್ರೈಂ ಸುದ್ದಿ:
ಮಿನಿ ಲಾರಿ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಚಾಲಕ ಆಸ್ಪತ್ರೆಗೆ ದಾಖಲು|accident
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪದ ಗೌರಿ ಕೆರೆ ಬಳಿ ಇವತ್ತು ಅಪಘಾತ ಸಂಭವಿಸಿದೆ. ಸಾಗರದಿಂದ ಸಿದ್ದಾಪುರದ ಕಡೆಗೆ ತೆರಳುತ್ತಿದ್ದ ಬೈಕ್ವೊಂದಕ್ಕೆ 407 ಲಾರಿ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹರಿಹರದಲ್ಲಿ ಔಷಧಿ ಸಾಗಣೆಯ ವಾಹನವೊಂದು ತೆರೆದ ಚರಂಡಿಗೆ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ಹಳೆ ಪಿ.ಬಿ.ರಸ್ತೆ ಬಳಿಯಲ್ಲಿ ಸಂಭವಿಸಿದೆ. …
ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ ಅಕ್ರಮವಾಗಿ ನಾಟಾ ಸಾಗಿಸುತ್ತಿದ್ದ ಲಾರಿ – ಲಾರಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು – |illegal wood
ತೀರ್ಥಹಳ್ಳಿ : ತಾಲೂಕಿನ ತುದೂರು ಗ್ರಾಮಪಂಚಾಯಿತಿಯ ಹೊಸಕೊಪ್ಪದಿಂದ ಅಕ್ರಮವಾಗಿ ನಾಟ ತುಂಬಿಸಿ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿಯನ್ನು ಕೆರೆಕೊಪ್ಪ ಬಳಿ ತಡೆಹಿಡಿಯಲಾಗಿದೆ. ಮೂರು ಲಕ್ಷಕ್ಕೂ ಅಧಿಕ ಮೊತ್ತದ ಅಕೇಶಿಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. KA-41-B 6435 ಸಂಖ್ಯೆಯ ಲಾರಿ ಶುಕ್ರವಾರ ಮದ್ಯ ರಾತ್ರಿಯ ವೇಳೆ ಅಕ್ರಮವಾಗಿ ಅಕೇಶಿಯ ನಾಟವನ್ನು ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ ಅಕೇಶಿಯ ಮರದ ತುಂಡು ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ್ದು ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳ ಫ್ರಿಡ್ಜ್, ಟಿವಿ, ಯುಪಿಎಸ್ ಸೇರಿ ಹಲವು ಉಪಕರಣ ಹಾಳಾಗಿದೆ….
ಕೌಟುಂಬಿಕ ಕಲಹ : ಪತಿಯಿಂದ ಪತ್ನಿಯ ಮೇಲೆ ಆಸಿಡ್ ದಾಳಿ|acid
ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಸಿಟ್ಟಿನಿಂದ ಹೆಂಡತಿಯ ಮೈಮೇಲೆ ಆಸಿಡ್ ಎರಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಗ್ರಾಮವೊಂದರ ನಿವಾಸಿಯಾದ ಸಂತ್ರಸ್ತೆಯು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ಧಾರೆ. ಬಿಡುವಾದಾಗ ತನ್ನ ಮಕ್ಕಳನ್ನು ನೋಡಲು ತನ್ನ ತಾಯಿ ಮನೆಗೆ ಬರುತ್ತಿದ್ದರು. ಇನ್ನೂ ಪತ್ನಿಯ ಜೊತೆಗೆ ಜಗಳ ತೆಗೆದು ದೂರವೇ ಇದ್ದ ಪತಿಯು ಆಗಾಗ ಪತ್ನಿಯ ತಾಯಿ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ. ಈ ನಡುವೆ ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಪತ್ನಿಯ ತಾಯಿ ಮನೆಗೆ ಬಂದ ಗಂಡ, ಅದೇ…
ಅಬಕಾರಿ ಇಲಾಖೆಯ ಮಿಂಚಿನ ಕಾರ್ಯಾಚರಣೆ – ಗಾಂಜಾ ಸಮೇತ ಆರೋಪಿಯ ಬಂಧನ|Arrested
ಸಾಗರ : ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಸೂರಗುಪ್ಪೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲುಸಹಿತ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸೊರಬ ತಾಲೂಕಿನ ಗಣಪತಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು 500 ಗ್ರಾಂ ಒಣ ಗಾಂಜಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ…
ರಿಪ್ಪನ್‌ಪೇಟೆ : ಸಾಲಬಾಧೆಗೆ ತತ್ತರಿಸಿದ ರೈತ ಆತ್ಮಹತ್ಯೆ|sucide
ರಿಪ್ಪನ್ ಪೇಟೆ : ಚಿಕ್ಕ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಕ್ಕಿ ಗ್ರಾಮದ ನಿವಾಸಿ ರಾಜಪ್ಪ (63) ಅವರು ಸಾಲ ಬಾಧೆ ತಾಳಲಾರದೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಜಮೀನಿಗೆ ತೆರಳಿದ ಅವರು ಗುರುವಾರ ಬೆಳಿಗ್ಗೆ ವರೆಗೆ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಲು ಹೊರಟಾಗ ಶುಂಠಿ ಗದ್ದೆಯಲ್ಲಿ ಕಳೆ ನಾಶಕ ಸೇವಿಸಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಕೊಡೂರು ಕೆನರಾ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್,ವಿವಿಧ ಸಂಘ ಸೇರಿದಂತೆ ವಿವಿದೆಡೆ …
ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿ ಖಾಸಗಿ ಕಾಲೇಜು ವಿದ್ಯಾರ್ಥಿ ಸಾವು|train
ಶಿವಮೊಗ್ಗ : ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಸೋಮಿನಕೊಪ್ಪದ ಪಶು ವೈದ್ಯಕೀಯ ಮಹಾವಿದ್ಯಾಲಯದ ಬಳಿ ಘಟನೆ ಸಂಭವಿಸಿದೆ. ರೈಲ್ವೆ ಹಳಿ ಮೇಲೆ ಯುವಕನೊಬ್ಬನ ಮೃತದೇಹ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದರು. ಮೃತನಿಗೆ ಅಂದಾಜು 17 ವರ್ಷ ಎಂದು ತಿಳಿದು ಬಂದಿದೆ. ಈತ ಶಿವಮೊಗ್ಗ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ರೈಲ್ವೆ…
ಚಿನ್ನದಂಗಡಿಗೆ ಗ್ರಾಹಕಿಯ ಸೋಗಿನಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಮಹಿಳೆಯ ಬಂಧನ|arrested
ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ ಅಂಗಡಿಗೆ ಗ್ರಾಹಕಿಯಂತೆ ಬಂದು ಮಾಂಗಲ್ಯ ಸರ ಕಳವು ಮಾಡಿದ್ದ ಮಹಿಳೆಯನ್ನ ಬಂದಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನವನ್ನೆ ತನ್ನ ಕಸುಬನ್ನಾಗಿ ಮಾಡಿಕೊಂಡಿದ್ದ ವಿಜಯಪುರ ಜಿಲ್ಲೆಯ ಚಿರಸ್ತಹಳ್ಳಿ ಗ್ರಾಮದ ಗುಂಡಗತ್ತಿ ರಸ್ತೆಯ ಹರಪ್ಪನಹಳ್ಳಿ ತಾಲೂಕಿನ ಆರೋಪಿ ರತ್ನ ಟಿ ಕೋಮ್ ಗೋಣಿಪ್ಪ @ ಗೋಣಿ ಬಸಪ್ಪ ಎಂಬ ಮಹಿಳೆಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ಕಳೆದ 24.11.2022 ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ & ಡೈಮಂಡ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ…
ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹ ಪತ್ತೆ|beach death
ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ಸಮುದ್ರಪಾಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಸಾಗರ ತಾಲೂಕಿನ ತುಮರಿ ಗ್ರಾಮದ ಪುನೀತ್ ಚೌಡಪ್ಪ(30) ಹಾಗೂ ರಾಘವೇಂದ್ರ(22) ಮೃತಪಟ್ಟವರು. ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿದ್ದ ಪುನೀತ್ ಮತ್ತು ರಾಘವೇಂದ್ರರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪುನೀತ, ರಾಘವೇಂದ್ರ ಸೇರಿದಂತೆ ಮೂವರು ಯುವಕರು ಸೋಮವಾರ ಸಂಜೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಇಳಿದ ಇಬ್ಬರು ನಾಪತ್ತೆಯಾಗಿದ್ದರು. ಇಬ್ಬರ ಮೃತದೇಹ…
ಕೆಂಚನಾಲದಲ್ಲಿ ಯುವಕನಿಗೆ PFI ಸಂಘಟನೆ ಹೆಸರಿನಲ್ಲಿ ಜೀವ ಬೆದರಿಕೆ ಪ್ರಕರಣ – ಆರೋಪಿಯ ಬಂಧನ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನಿಗೆ ಪಿಎಫ಼್ ಐ ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ instragram ನಲ್ಲಿ ಜೀವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಆನಂದಪುರ ಸಮೀಪದ ಮುರುಘಾಮಠ ಗ್ರಾಮದ ಜಾವದ್ ಅಹಮ್ಮದ್ ಬಿನ್ ಇಪ್ತಿಕಾರ್ ಅಹಮದ್ ಬಂಧಿತ ಆರೋಪಿ. ಕೆಂಚನಾಲ ಗ್ರಾಮದ ಸುಮಂತ್ ಎಂಬ ಯುವಕನಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ only____pfi ಎಂಬ ಖಾತೆಯಿಂದ ಜೀವ ಬೆದರಿಕೆ ಬಂದಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್…
ಹೋರಿ ಬೆದರಿಸುವ ಸ್ಪರ್ಧೆ : ಇಬ್ಬರು ಸಾವು – 6 ಜನರಿಗೆ ಗಾಯ|bull competition
ಪ್ರತ್ಯೇಕ ಪ್ರಕರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಕೊನಗನವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ನಿವಾಸಿ ಲೋಕೇಶ್(32) ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಲೋಕೇಶ್ ಭಾನುವಾರ ರಜೆ ಇದ್ದ ಕಾರಣ…