ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನ ಅರಳಗೋಡು ಸಮೀಪದ ಮಂಡವಳ್ಳಿ ಗ್ರಾಮದ 9 ಜನರ ಮನೆಯ ವೈರಿಂಗ್ ಸಂಪೂರ್ಣ ಸುಟ್ಟು ಭಸ್ಮ !!!
ಸಾಗರ ತಾಲ್ಲೂಕು ಬಾರಂಗಿ ಹೋಬಳಿ ವ್ಯಾಪ್ತಿಯ ಅರಳಗೋಡು ಗ್ರಾಮ ಪಂಚಾಯತ್ನ ಮಂಡವಳ್ಳಿ ಗ್ರಾಮದ 9 ಮನೆಗಳ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ವಿವರ ಮಂಡವಳ್ಳಿ ಗ್ರಾಮದ ಆಚೆಕೊಪ್ಪದಲ್ಲಿ ಸಿಂಗಲ್ ಫೇಸ್ ಲೈನ್ ಮೊದಲಿನಿಂದಲೂ ಇದೆ. ಈ ಲೈನ್ ಹಾದು ಹೋಗಿರುವ ಕಂಬದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ತ್ರಿ ಫೇಸ್ ಲೈನ್ ಕೂಡ ಅಳವಡಿಸಲಾಗಿದ್ದುಇದು ಅಪಾಯಕಾರಿಯಾಗಿದ್ದರಿಂದ ಗ್ರಾಮಸ್ಥರು ಪಂಚಾಯಿತಿ ಮೂಲಕ ಮೆಸ್ಕಾಂ ಅಧಿಕಾರಿಗಳಿಗೆ ದುರಸ್ಥಿ ಮಾಡಿಕೊಡುವಂತೆ ಮನವಿ ಮಾಡಿರುತ್ತಾರೆ. ಒಂದಕ್ಕೊಂದು ತಾಗುವಂತೆ ಲೈನ್ ಹೋಗಿದ್ದು ಏನಾದರೂ…