Headlines

ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನ ಅರಳಗೋಡು ಸಮೀಪದ ಮಂಡವಳ್ಳಿ ಗ್ರಾಮದ 9 ಜನರ ಮನೆಯ ವೈರಿಂಗ್ ಸಂಪೂರ್ಣ ಸುಟ್ಟು ಭಸ್ಮ !!!

ಸಾಗರ ತಾಲ್ಲೂಕು ಬಾರಂಗಿ ಹೋಬಳಿ ವ್ಯಾಪ್ತಿಯ ಅರಳಗೋಡು ಗ್ರಾಮ ಪಂಚಾಯತ್​ನ ಮಂಡವಳ್ಳಿ ಗ್ರಾಮದ 9 ಮನೆಗಳ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಘಟನೆಯ ವಿವರ

ಮಂಡವಳ್ಳಿ ಗ್ರಾಮದ ಆಚೆಕೊಪ್ಪದಲ್ಲಿ ಸಿಂಗಲ್​ ಫೇಸ್​ ಲೈನ್​ ಮೊದಲಿನಿಂದಲೂ ಇದೆ. ಈ ಲೈನ್​ ಹಾದು ಹೋಗಿರುವ ಕಂಬದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ತ್ರಿ ಫೇಸ್​ ಲೈನ್​ ಕೂಡ ಅಳವಡಿಸಲಾಗಿದ್ದುಇದು ಅಪಾಯಕಾರಿಯಾಗಿದ್ದರಿಂದ ಗ್ರಾಮಸ್ಥರು ಪಂಚಾಯಿತಿ ಮೂಲಕ ಮೆಸ್ಕಾಂ ಅಧಿಕಾರಿಗಳಿಗೆ ದುರಸ್ಥಿ ಮಾಡಿಕೊಡುವಂತೆ ಮನವಿ ಮಾಡಿರುತ್ತಾರೆ. 
ಒಂದಕ್ಕೊಂದು ತಾಗುವಂತೆ ಲೈನ್ ಹೋಗಿದ್ದು ಏನಾದರೂ ಹೆಚ್ಚು ಕಮ್ಮಿಯಾದರೆ, ಸಾವು ನೋವು ಆಗಬಹುದು, ಹಾಗಾಗಿ ಇದನ್ನು ಕೂಡಲೇ ಸರಿ ಮಾಡ್ಬೇಕು ಅಂತಾ ಮನವಿ ಕೊಟ್ಟಿದ್ದರೂ ಸಹ
ಪಂಚಾಯಿತಿ ಮನವಿ ಆಧರಿಸಿ, ಆಚೆಕೊಪ್ಪದಲ್ಲಿ ಬೇರೆಬೇರೆ ಫೇಸ್​ ಲೈನ್​ ಹೋಗಿದ್ದ ಕಂಬವನ್ನ ಬದಲಾಯಿಸಿ ಪುನಃ ಕನೆಕ್ಷನ್​ ನೀಡಿದ್ದಾರೆ. ಆದರೆ ಹೀಗೆ ಕನೆಕ್ಷನ್​ ನೀಡುವಾಗ ವ್ಯತ್ಯಾಸವಾಗಿದ್ದು ಇದರಿಂದಾಗಿ ಹೆಚ್ಚಿನ ಕರೆಂಟ್ ಹರಿದು ಸಿಂಗಲ್​ ಫೇಸ್​ ಲೈನ್​ ಹೊಂದಿದ್ದ 9 ಮನೆಗಳ ಸ್ವಿಚ್​​ ಬೋರ್ಡ್​ ಸುಟ್ಟು ಹೋಗಿವೆ.4ಮನೆ ಟಿವಿ ಹೋಗಿದ್ದು ಒಬ್ಬರ ಮನೆಯ ವಾಷಿಂಗ್ ಮಷಿನ್ ಸೇರಿದಂತೆ ಎಲ್ಲರ ಮನೆಯ ಮಿಕ್ಸಿಗಳು ಸಹ ಹಾಳಾಗಿವೆ. ಮಂಗಳವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಗ್ರಾಮಸ್ಥರ ಹೇಳಿಕೆಯ ಪ್ರಕಾರ ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನದಿಂದ ನಮ್ಮ ಗ್ರಾಮದ 9ಜನರ ಮನೆಯ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಮನೆಯಲ್ಲಿದ್ದಂತಹ ಎಲ್ಲಾ ಯಂತ್ರೋಪಕರಣಗಳು ಸಹ ಭಸ್ಮವಾಗಿವೆ ಹೀಗಾಗಿ ಮೆಸ್ಕಾಂ ಇಲಾಖೆಯವರು ನಮಗೆ ಪರಿಹಾರವನ್ನು ನೀಡಲೇಬೇಕು ಈ ಬಗ್ಗೆ ಶಾಸಕರ ಗಮನಕ್ಕೂ ತರುತ್ತೇವೆ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಸನತ್ ರವರು  ಮಾಹಿತಿ ನೀಡಿದ್ದಾರೆ.




ವರದಿ: ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *