Headlines

ರೈಲ್ವೆ ಇಲಾಖೆ ಅಧಿಕಾರಿಗಳೇ ಬೇಜಾವಬ್ದಾರಿತನ ಬಿಡಿ:: ಆನಂದಪುರ- ಯಡೇಹಳ್ಳಿ, ಅಂದಾಸುರ ರೈಲ್ವೆ ಲೆವಲಿಂಗ್ ಕ್ರಾಸ್ ಹಂಪ್ಸ್ ನ ಸಮಸ್ಯೆಗಳತ್ತ ಗಮನ ಕೊಡಿ.!!!

ಭಾರತ ಸರ್ಕಾರದ ಬಹುಮುಖ್ಯ ಉದ್ಯಮದಲ್ಲಿ ಭಾರತೀಯ ರೈಲ್ವೆ ಬಹು ಅಗ್ರಸ್ಥಾನವನ್ನು ಪಡೆದಿದೆ.ಸುರಕ್ಷತೆಯಿಂದ ಹಿಡಿದು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೀತಿಯ ಅನುಕೂಲಗಳನ್ನು ರೈಲ್ವೆ ಇಲಾಖೆ ಭಾರತೀಯರಿಗೆ ಮಾಡಿಕೊಟ್ಟಿದೆ.

ಆದರೆ ಕೆಲವೊಂದು ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನವೋ ಅಥವಾ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಲೋ ರಸ್ತೆಯಲ್ಲಿ ಪಯಣಿಸುವ  ಪ್ರಯಾಣಿಕರಿಗೆ  ತೊಂದರೆಯೂ ಆಗುತ್ತಿದೆ.
ಇಂತಹದೇ ಸಮಸ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ- ಯಡೇಹಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್ ನ ಬಳಿ ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಹುದೊಡ್ಡ ಉದ್ದನೆಯ ಹಂಪ್ಸ್ ಗಳನ್ನು ಈ ಲೆವಲಿಂಗ್ ಕ್ರಾಸ್ ಬಳಿ ಹಾಕಿರುವುದರಿಂದ ರಸ್ತೆ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.

ಆನಂದಪುರ ಯಡೇಹಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್ ಬಳಿ ವಿಪರೀತ ಹಂಪ್ಸ್  ಇದ್ದು ರಸ್ತೆಯು ಸಹ ಕಿತ್ತು ಹೋಗಿರುವುದರಿಂದ ಹಲವು ಅವಘಡಗಳು  ಈಗಾಗಲೇ ಸಂಭವಿಸಿದೆ.

ಭಾಗಶ: ಈ ಹಂಪ್ಸ್ ಗಳ ರಸ್ತೆಯೂ ಸಹ ಅಂಕುಡೊಂಕಾಗಿದ್ದು ಕಿತ್ತು ಹೋಗಿದ್ದರಿಂದ ಸಾರ್ವಜನಿಕರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಆನಂದಪುರ ರೈಲ್ವೆ ವಲಯದಲ್ಲಿ ಹಲವು ಸಮಸ್ಯೆಗಳು:::

ಆನಂದಪುರ ರೈಲ್ವೆ ವಲಯದಲ್ಲಿ ಸಾರ್ವಜನಿಕರಿಗೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯತನದಿಂದ ಹಲವಾರು ಸಮಸ್ಯೆಗಳಾಗುತ್ತಿವೆ.

ಆನಂದಪುರ ಮುಖ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಬೆಳಕಿನ ವ್ಯವಸ್ಥೆಯೂ ಇಲ್ಲದೆ ಚರಂಡಿಯಂತಾಗಿದೆ ರಸ್ತೆಗಳು.

ಆನಂದಪುರ ಯಡೇಹಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್ ಬಳಿ ವಿಪರೀತ ಹಂಪ್ಸ್  ಇದ್ದು ರಸ್ತೆಯು ಸಹ ಕಿತ್ತು ಹೋಗಿರುವುದರಿಂದ ಹಲವು ಅವಘಡಗಳು  ಈಗಾಗಲೇ ಸಂಭವಿಸಿದೆ.
ಆನಂದಪುರ ಅಂದಾಸುರ ರೈಲ್ವೇ ಲೆವಲಿಂಗ್ ಕ್ರಾಸ್ ನ ಬಳಿ ಕೂಡ ಬಹುದೊಡ್ಡ ಹಂಪಿದ್ದು ರಸ್ತೆಯು ಸಹ ಕಿತ್ತು ಹೋಗಿದೆ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ.

ಮೇಲ್ಕಂಡ ಎಲ್ಲಾ ಸಮಸ್ಯೆಗಳು ಕೂಡ ಆನಂದಪುರ ರೈಲ್ವೇ ವಿಭಾಗದ ಬಹುದೊಡ್ಡ ಸಮಸ್ಯೆಗಳಾಗಿದ್ದು ಇನ್ನಾದರೂ ಕೂಡ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರ ಅನುಕೂಲಕ್ಕೆ ಶ್ರಮಿಸಬೇಕೆಂಬುದೇ ನಮ್ಮ ಆಶಯ.





 ವರದಿ :ಪವನ್ ಕುಮಾರ್ ಕಠಾರೆ






Leave a Reply

Your email address will not be published. Required fields are marked *