Headlines

ಶಿಕ್ಷಣ ಇಲಾಖೆ ನಿವೃತ್ತ ನೌಕರ ಕುಬೇರಪ್ಪ ನಿಧನ

ಶಿಕ್ಷಣ ಇಲಾಖೆ ನಿವೃತ್ತ ನೌಕರ ಕುಬೇರಪ್ಪ ನಿಧನ ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರ ನಿವಾಸಿ, ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಕುಬೇರಪ್ಪ(69) ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು. ಮೃತ ಕುಬೇರಪ್ಪ ಅವರು ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಪಟ್ಟಣದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪುತ್ರರಾದ ಕಾಂಗ್ರೆಸ್ ಮುಖಂಡ ಮಳವಳ್ಳಿ ಮಂಜುನಾಥ್ ,ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು  ಅಗಲಿದ್ದಾರೆ.

Read More

ಮಂಡಾನಿ ಶೇಷನಾಯ್ಕ ನಿಧನ

ಮಂಡಾನಿ ಶೇಷನಾಯ್ಕ ನಿಧನ ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡಾನಿ ಗ್ರಾಮದ ವಾಸಿ ಮಂಡಾನಿ ಶೇಷನಾಯ್ಕ (90) ಮಂಗಳವಾರ ಬೆಳಗಿನ ಜಾವ ತಮ್ಮ ಸ್ವ- ಗೃಹದಲ್ಲಿ ನಿಧನರಾದರು. ಅಲ್ಪಕಾಲ ಅನಾರೋಗ್ಯ ಪೀಡಿತರಾಗಿದ್ದ ಶೌಷನಾಯ್ಕ್  ಇಂದು ಬೆಳಗಿನಜಾವ ಮೃತಪಟ್ಟಿದ್ದಾರೆ. ಮೃತರು ಪುತ್ರ ಕೆಜಿಐಡಿ ಇಲಾಖೆಯಲ್ಲಿನ ನಿವೃತ್ತ ಉಪ ನಿರ್ದೇಶಕ ಎಂ.ಕುಮಾರ್, ಮೊಮ್ಮಗ ವಕೀಲ ಮಂಡಾನಿ ಗುರು ಸೇರಿದಂತೆ ಅಪಾರ ಬಂಧುಗಳನ್ನು ಆಗಲಿದ್ದಾರೆ. ಸಂತಾಪ : ತಮ್ಮ ಒಡನಾಡಿಗಳಾಗಿದ್ದ ಮಂಡಾನಿ ಶೇಷನಾಯ್ಕ್ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು…

Read More

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ | Ripponpete

ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ನಿಧನ – ಗಣ್ಯರ ಸಂತಾಪ ಹಿರಿಯ ಪತ್ರಕರ್ತ, ಸಹಕಾರಿ ಧುರೀಣ ಹಿರಿಯ ಪತ್ರಲರ್ತ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಅರಸಾಳು ಎಸ್.ಜಿ.ರಂಗನಾಥ (93) ಇಂದು ಸಂಜೆ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಾದ್ಯಮ ಕ್ಷೇತ್ರದಲ್ಲಿ ವಿಶಿಷ್ಠವಾದ ಛಾಫು ಮೂಡಿಸಿದ್ದ ಅರಸಾಳು ರಂಗನಾಥ್ ರವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕರಾಗಿ, ಅರಸಾಳು ವ್ಯವಸಾಯ ಸೇವಾ…

Read More

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ

Ripponpete | ಪಟ್ಟಣದ ಹೆಸರಾಂತ ವೈದ್ಯ ಡಾ. ಮಂಜುನಾಥ್ ರಾವ್ (ಕಿರಣ್ ಡಾಕ್ಟರ್) ನಿಧನ ರಿಪ್ಪನ್‌ಪೇಟೆ ; ವಿಶ್ರಾಂತ ವೈದ್ಯರೂ ಹಾಗೂ ಜಿ ಎಸ್ ಬಿ ಸಮಾಜದ ಹಿರಿಯರಾದ ಡಾ. ಮಂಜುನಾಥ್ ರಾವ್ ( ಕಿರಣ್ ಡಾಕ್ಟರ್) ಇಂದು ಬೆಳಗ್ಗೆ 3:30 ಕ್ಕೆ ತೀರ್ಥಹಳ್ಳಿಯಲ್ಲಿರುವ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಕಿರಣ್ ಕ್ಲಿನಿಕ್ ಎಂಬ ಹೆಸರಿನ ಚಿಕಿತ್ಸಾ ಕೇಂದ್ರದಲ್ಲಿ ಮೂವತ್ತು ವರ್ಷಕ್ಕೂ ಅಧಿಕ ಕಾಲ ಜನರ ಸೇವೆ ಸಲ್ಲಿಸಿದ್ದರು.ಬಡವರಿಗೆ ಉಚಿತವಾಗಿ ಸೇವೆ ನೀಡುತಿದ್ದರು. ವೈದ್ಯಕೀಯ ವೃತ್ತಿಯಲ್ಲಿ ಗಣನೀಯ ಸೇವೆ…

Read More

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ | Thirthahalli

ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್ ನಿಧನ! ತೀರ್ಥಹಳ್ಳಿ : ಶ್ವಾಸಕೋದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್. ಪಿ ಇಂದು ಸಂಜೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.  ಆರೋಗ್ಯ ಗಂಭೀರವಾಗಿ ಹದಗೆಟ್ಟಿದ್ದ ಕಾರಣ ಇಂದು ಬೆಳಿಗ್ಗೆಯಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ .ಸಂಜೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಜುನಾಥ್ ರವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More

ಕೋಡೂರು ಗ್ರಾಪಂ ಮಾಜಿ ಅಧ್ಯಕ್ಷ ಕರಿಗೆರಸು ಜಯಂತ್‌ ಕೆ ವೈ ನಿಧನ – ಗಣ್ಯರಿಂದ ಸಂತಾಪ | Koduru

ಕೋಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರಿಗೆರಸು ಜಯಂತ್‌ ಕೆ.ವೈ. ನಿಧನ ರಿಪ್ಪನ್‌ಪೇಟೆ : ಕೋಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರಿಗೆರಸು ನಿವಾಸಿ ಜಯಂತ್ ಕೆ.ವೈ. (50) ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇವರು 2005ರಿಂದ ಕರಿಗೆರಸು ಕ್ಷೇತ್ರದಿಂದ ಮೂರು ಬಾರಿ ಕೋಡೂರು ಗ್ರಾ.ಪಂ.ಗೆ ಆಯ್ಕೆಯಾಗಿದ್ದರು. 2015 ರಲ್ಲಿ 5 ವರ್ಷಗಳ ಅವಧಿಗೆ ಕೋಡೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದರು. ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು…

Read More

Konanduru | ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ನಿಧನ

ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ನಿಧನ ತೀರ್ಥಹಳ್ಳಿ : ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೋಣಂದೂರಿನ ಹಿರಿಯ ಪತ್ರಕರ್ತ ಶೀನಪ್ಪ ಬಂಡಾರಿ ( 68) ವರ್ಷ ಇಂದು ಬುಧವಾರ ಮದ್ಯಾನ್ಹ ವಿಧಿವಷರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಕೋಣಂದೂರು ಭಾಗದಲ್ಲಿ ಪತ್ರಿಕಾ ವಿತರಕರಾಗಿ, ವರದಿಗಾರರಾಗಿ ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ತಮ್ಮ ಸೌಮ್ಯ ಮತ್ತು ಮೃದು ಸ್ವಭಾವದಿಂದ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿ ಕರ್ತವ್ಯ ನಿರ್ವಹಿಸಿ ಕೋಣಂದೂರು ಭಾಗದಲ್ಲಿ ಜನಮನ್ನಣೆ ಪಡೆದಿದ್ದರು. ಆ ಭಾಗದಲ್ಲಿ ಬಂಡಾರಿ ಸಮುದಾಯದ ಏಳಿಗೆಗಾಗಿ…

Read More

ರಿಪ್ಪನ್‌ಪೇಟೆ : ಪಟ್ಟಣದ ಅಡಿಕೆ ಹಾಗೂ ವೀಳ್ಯದೆಲೆ ವ್ಯಾಪಾರಿ ಎಲೆ ಕುಮಾರಣ್ಣ ನಿಧನ |Rpet

ನಿಧನ ವಾರ್ತೆ ಆರ್ ಬಿ ಕುಮಾರ್ ( ಎಲೆ ಕುಮಾರಣ್ಣ ) ರಿಪ್ಪನ್‌ಪೇಟೆ : ಪಟ್ಟಣದ ಚೌಡೇಶ್ವರಿ ಬೀದಿ ನಿವಾಸಿ ಎಲೆ ವ್ಯಾಪಾರಿ ಹಾಗೂ ಜೆಡಿಎಸ್ ಮುಖಂಡರಾದ ಎಲೆ ಕುಮಾರಣ್ಣ(62) ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಿಪ್ಪನ್ ಪೇಟೆ ಪಟ್ಟಣದ ಕುಸ್ತಿಪಟು ದಿವಂಗತ  ಬಸಪ್ಪರವರ ಪುತ್ರರಾದ ಎಲೆ ಕುಮಾರಣ್ಣ ವೀಳ್ಯದೆಲೆ ಮಾರಾಟದ ಜೊತೆಗೆ  ರಾಜಕೀಯವಾಗಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.  ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ  ಶನಿವಾರ ಹಿಂದೂ…

Read More

Ripponpete | ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸುರೇಶ್ ನಿಧನ

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ನಿಧನ ರಿಪ್ಪನ್‌ಪೇಟೆ : ಇಲ್ಲಿನ ಬರುವೆ ಗ್ರಾಮದ ನಿವಾಸಿ ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸುರೇಶ್ (೬೧) ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನಹೊಂದಿದ್ದಾರೆ. ಮೃತರು ಪತ್ನಿ ,ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

Ripponpete | ಹಾಲುಗುಡ್ಡೆ ಘಂಟೆ ದೇವರಾಜ್ ಗೌಡ ನಿಧನ

ರಿಪ್ಪನ್‌ಪೇಟೆ : ಇಲ್ಲಿನ ಬಾಳೂರು ಗ್ರಾಪಂ ವ್ಯಾಪ್ತಿಯ ಹಾಲುಗುಡ್ಡೆ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಘಂಟೆ  ದೇವರಾಜ್ ಗೌಡ(74) ರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಹಾಲುಗುಡ್ಡೆ ಘಂಟೆ ದೇವರಾಜ್ ಗೌಡ ರವರು ಬುಧವಾರ ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಸಹೋದರರು ,ಓರ್ವ ಸಹೋದರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಮೃತರ ಜಮೀನಿನಲ್ಲಿ ನೆರವೇರಿದೆ.

Read More