ಜಿಲ್ಲಾ ಸುದ್ದಿ:
ನಿವೃತ್ತ ಸೈನಿಕನಿಗೆ ಸಾರ್ವಜನಿಕರಿಂದ ಅದ್ದೂರಿ ಸ್ವಾಗತ
ನಿವೃತ್ತ ಸೈನಿಕನಿಗೆ ಸಾರ್ವಜನಿಕರಿಂದ ಅದ್ದೂರಿ ಸ್ವಾಗತ ರಿಪ್ಪನ್‌ಪೇಟೆ;-ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಊರಿಗೆ ಮರಳಿದ ನಿವೃತ್ತ ಸೈನಿಕ ಮಾದಾಪುರ ಗ್ರಾಮದ ಕೊರಟಿಕೆರೆ ನಿವಾಸಿ ಲಿಂಗಾರಾಜ್ ಜಿ. ಇವರಿಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ನಿವೃತ್ತ ಸೈನಿಕರು ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ನಿವೃತ್ತ ಸೈನಿಕ ಲಿಂಗಾರಾಜ್ ಜಿ.ಇವರು ಊರಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಸಮೀಪದ ಸಿದ್ದಪ್ಪನಗುಡಿ ಬಳಿ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ…
ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ
ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ ರಿಪ್ಪನ್‌ಪೇಟೆ;-ಕಾಯಕಯೋಗಿ ತ್ರಿವಿಧ ದಾಸೋಹಿ ಶತಾಯಿಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 118 ನೇ ಜನ್ಮ ದಿನಾಚರಣೆಯನ್ನು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರೋಟರಿ ಕ್ಲಬ್ ಸದಸ್ಯರು ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು ವಿಶೇಷವಾಗಿ ಜನಮನ ಸೆಳೆಯಿತು. ಜಿ.ಎಸ್.ಬಿ.ಮತ್ತು ಬ್ರಾಹ್ಮಣ ಸಮಾಜ ಹಾಗೂ ರೋಟರಿ ಕ್ಲಬ್ ಸಾರ್ವಜನಿಕರು ಮತ್ತು ಶ್ರೀಗಳ ಅಭಿಮಾನಿ ಬಳಗದವರು ಇಲ್ಲಿನ ವಿನಾಯಕ ವೃತ್ತದಲ್ಲಿ “ಲಿಂ.ಡಾ.ಶಿವಕುಮಾರ ಮಹಾಸ್ವಾಮಿಜಿ’’ಗಳ ಭಾವಚಿತ್ರವನ್ನಿಟ್ಟು ಪೂಜೆಸಿ ಪುಷ್ಪಾ ವೃಷ್ಟಿ ಸಮರ್ಪಿಸುವ…
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ ರಿಪ್ಪನ್‌ಪೇಟೆ : ತ್ರಿವಿಧ ದಾಸೋಹಿ ,ಶತಾಯಿಷಿ ಕಾಯಕಯೋಗಿ ದಿವಂಗತ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು. ರಿಪ್ಪನ್‌ಪೇಟೆ ಭಕ್ತ ಬಳಗದವರು ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಸೇವೆ ಸಲ್ಲಿಸಿದರು. ಸಾಗರ ನಗರ ಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ…
ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ
SHIVAMOGGA | ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂದಿನ ಮೈದಾನದ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಇಲ್ಲಿನ ಈದ್ಗಾ ಮೈದಾನದಲ್ಲಿ ಹಿಂದೂ ಕಾರ್ಯಕರತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ರಂಜಾನ್ ಪ್ರಾರ್ಥನೆ ನಂತರ ವಿವಾದಿತ ಮೈದಾನಕ್ಕೆ ಬೇಲಿ ಹಾಕಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಬೇಲಿ ಹಾಕಿದ್ದು ಯಾರು ಎಂದು ಬೇಲಿ…
ರಿಪ್ಪನ್ ಪೇಟೆಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ
ರಿಪ್ಪನ್ ಪೇಟೆಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ | ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ ನೆಮ್ಮದಿ ಸಾಧ್ಯ – ಮುನೀರ್ ಸಖಾಫ಼ಿ ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ ಮುನೀರ್ ಸಖಾಫಿ ಮತ್ತು ಮೌಲಾನ ರಫ಼ೀದ್ ಹಜರತ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ…
RIPPONPETE | ಪಟ್ಟಣದಾದ್ಯಂತ ಸಂಭ್ರಮದ ಯುಗಾದಿ ಆಚರಣೆ
RIPPONPETE | ಪಟ್ಟಣದಾದ್ಯಂತ ಸಂಭ್ರಮದ ಯುಗಾದಿ ಆಚರಣೆ ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು, ಯುಗಾದಿ ಅಮಾವಾಸ್ಯೆ ಅಂಗವಾಗಿ ಸಾರ್ವಜನಿಕರು ಕುಟುಂಬದವರೊಂದಿಗೆ ಸ್ಥಳೀಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಮನೆಗಳಲ್ಲಿ ವಿಶೇಷ ಸಿಹಿ ಅಡುಗೆಯನ್ನೂ ತಯಾರಿಸಲಾಗುತ್ತಿದೆ.ಹಿಂದೂಗಳ ಧಾರ್ಮಿಕ ನಂಬಿಕೆ ಪ್ರಕಾರ ಯುಗಾದಿಯು ವರ್ಷದ ಮೊದಲ ಹಬ್ಬವಾಗಿದೆ. ಹೀಗಾಗಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಭಾನುವಾರ ಹಬ್ಬ ಆಚರಿಸಲು ಶನಿವಾರವೇ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ…
ವಿದ್ಯುತ್ ಶಾರ್ಟ್‌ಸಕ್ಯೂಟ್ ; ಹೊತ್ತಿ ಉರಿದ ತೆಂಗಿನಮರ
ವಿದ್ಯುತ್ ಶಾರ್ಟ್‌ಸಕ್ಯೂಟ್ ; ಹೊತ್ತಿ ಉರಿದ ತೆಂಗಿನಮರ ಹೊಸನಗರ ; ತೆಂಗಿನಮರಕ್ಕೆ ಬೆಂಕಿ ಬಿದ್ದು ಭಾರಿ ಅನಾಹುತವೊಂದು ತಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಪ್ಪದಲ್ಲಿ ನಡೆದಿದೆ. ಯುಗಾದಿ ಹಬ್ಬದ ಭಾನುವಾರ ಸಂಜೆ ಸುಮಾರು ಏಳು ಗಂಟೆಯ ಸಮಯದಲ್ಲಿ ಶ್ರೀನಿವಾಸ್ ಕಾಮತ್ ರವರಿಗೆ ಸೇರಿದ ತೆಂಗಿನಮರಕ್ಕೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ತೆಂಗಿನಮರ ಸುಟ್ಟು ಕರಕಲಾಗಿದೆ. ಸ್ಥಳೀಯರು ಸೇರಿದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್…
ಹಿಂದುತ್ವದ ಬಗ್ಗೆ ಮಾತನಾಡಿದವರನ್ನೆಲ್ಲ ಬಿಜೆಪಿ ಮುಗಿಸುತ್ತಿದೆ : ಶಾಸಕ ಬೇಳೂರು ಗೋಪಾಲಕೃಷ್ಣ
ಹಿಂದುತ್ವದ ಬಗ್ಗೆ ಮಾತನಾಡಿದವರನ್ನೆಲ್ಲ ಬಿಜೆಪಿ ಮುಗಿಸುತ್ತಿದೆ : ಶಾಸಕ ಬೇಳೂರು ಗೋಪಾಲಕೃಷ್ಣ ಸಾಗರ: ಹಿಂದುತ್ವದ ಬಗ್ಗೆ ಯಾರು ಮಾತನಾಡಿದ್ದಾರೋ ಅವರನ್ನೆಲ್ಲ ಬಿಜೆಪಿ ಮುಗಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಮಾಧ್ಯಮಗಳೆದುರು ಮಾತನಾಡಿದ ಅವರು, ಉತ್ತರ ಕನ್ನಡದ ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ, ಶಿವಮೊಗ್ಗದ ಕೆ ಎಸ್ ಈಶ್ವರಪ್ಪ, ಮೈಸೂರಿನ ಪ್ರತಾಪ್ ಸಿಂಹನ್ನು ಈವರೆಗೆ ಮುಗಿಸಿದ್ದರು. ಈಗ ಆ ಸಾಲಿಗೆ ಶಾಸಕ ಬಸವನಗೌಡ ಪಾಟೀಲ್ ಸೇರಿದ್ದಾರೆ ಎಂದು ಹೇಳಿದ್ದಾರೆ. ಹಿಂದೂ ಹುಲಿಯನ್ನು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು…
RIPPONPETE | ಬಾರ್ ಮಾಲೀಕರ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ – ಗ್ರಾಪಂ ಸದಸ್ಯ ಸುಂದರೇಶ್ ಸ್ಪಷ್ಟನೆ
RIPPONPETE | ಬಾರ್ ಮಾಲೀಕರ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ – ಗ್ರಾಪಂ ಸದಸ್ಯ ಸುಂದರೇಶ್ ಸ್ಪಷ್ಟನೆ ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಬಾರ್ ಮಾಲೀಕರ ಬಳಿ ಸದಸ್ಯರ ಹೆಸರಿನಲ್ಲಿ ಹಣ ಪಡೆದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಗ್ರಾಪಂ ಸದಸ್ಯ ಸುಂದರೇಶ್ ಸ್ಪಷ್ಟನೆ ನೀಡಿದರು. ಪಟ್ಟಣದ ರಾಯಲ್ ಕಂಫರ್ಟ್ ಸಭಾಂಗಣದಲ್ಲಿ ನಡೆದ ಪತ್ರೀಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ನನ್ನ ಏಳಿಗೆಯನ್ನು ಸಹಿಸದ ಕೆಲವರು ನಾನು ಜಾಲುಕ್ಯ…
HOSANAGARA | ಹಾಡಹಗಲೇ ಬೈಕ್ ನಲ್ಲಿ ಬಂದು 50 ಸಾವಿರ ಹಣವಿದ್ದ ಯುವತಿಯ ಬ್ಯಾಗ್ ಎಗರಿಸಿದ ಕಳ್ಳರು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನೂ..!!??
HOSANAGARA | ಹಾಡಹಗಲೇ ಬೈಕ್ ನಲ್ಲಿ ಬಂದು 50 ಸಾವಿರ ಹಣವಿದ್ದ ಯುವತಿಯ ಬ್ಯಾಗ್ ಎಗರಿಸಿದ ಕಳ್ಳರು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನೂ..!!?? ಹೊಸನಗರ : ಪಟ್ಟಣದ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಡಹಗಲೇ ಯುವತಿಯೊಬ್ಬಳ ಬ್ಯಾಗ್ ನ್ನು ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಟ್ಟಣದಾದ್ಯಂತ ಸುದ್ದಿಯಾಗಿತ್ತು. ವಿಷಯ ಹಬ್ಬುತಿದ್ದಂತೆ ಮಾವಿನಕೊಪ್ಪ ಸರ್ಕಲ್ ನಲ್ಲಿ ಇಬ್ಬರು ಕಳ್ಳರನ್ನು ಜನರು ತಡೆಗಟ್ಟಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ ಅಷ್ಟಕ್ಕೂ ಇದೊಂದು ಪೊಲೀಸ್…