ಜನಸ್ಪಂದನ ಸಭೆಯಲ್ಲಿ ಜನ ಮೆಚ್ಚುಗೆ ಗಳಿಸಿದ ಶಾಸಕ ಬೇಳೂರು
ರಿಪ್ಪನ್‌ಪೇಟೆ : ನೂರಾರು ಸಮಸ್ಯೆಗಳೊಂದಿಗೆ ಪರಿಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕುತೂಹಲದಿಂದ ಪರಿಹಾರ ಸಿಗಬಹುದೆಂದು ಭರವಸೆಯೊಂದಿಗೆ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರಿಗೆ ತಮ್ಮ ಸಮಸ್ಯೆಗಳಿಗೆತಕ್ಷಣ ಪರಿಹಾರ ಸಿಕ್ಕರೆ ಮತ್ತು ಕೆಲವರಿಗೆ ಆರ್ಥಿಕ ನೆರವು, ಸಮಸ್ಯೆಗಳಿಗೆ ಪರಿಹಾರದ ಭರವಸೆಗಳನ್ನು ಪಡೆದುಕೊಂಡವರು ಸಂತಸದಿಂದ ಕೃತಜ್ಞತೆ ಸಲ್ಲಿಸಿದ ದೃಶ್ಯ ಜನ ಮೆಚ್ಚುಗೆ ಗಳಿಸಿದಂತಿತ್ತು.
ಕಣ್ಣು ಹಾಯಿಸಿದಷ್ಟು ದೂರವೂ ಜನವೋ ಜನ.. ಸಮಸ್ಯೆ ಬಗೆಹರಿಸುವಂತೆ ಸರತಿ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು. ಹೊಸನಗರ ತಾಲೂಕಿನ ವಿವಿಧ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಶಾಸಕ ಬೇಳೂರು ಗೋಪಾಲಕೃಷ್ಣ ಜನ ಸಂಪರ್ಕ ಸಭೆ ನಡೆಸಿದ್ದಾರೆ.ಹಲವಾರು ದೂರುಗಳನ್ನ ಸ್ವೀಕರಿಸಿ ಪರಿಶೀಲನೆ ನಡೆಸಿ, ಶೀಘ್ರವೇ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದ್ದಾರೆ.
ಬಾಗಿಲಿಗೆ ಬಂತು ಸರ್ಕಾರ, ಇರಲಿ ನಿಮ್ಮ ಸಹಕಾರ ಎಂಬ ಶೀರ್ಷಿಕೆಯಡಿ ಶಾಸಕ ಬೇಳೂರು ಜನ ಸಂಪರ್ಕ ಸಭೆ ಆಯೋಜಿಸಿದ್ದರು.ಪಟ್ಟಣದ ಗ್ರಾಪಂ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಹಲವು ಇಲಾಖೆಯ ಕುಂದು ಕೊರತೆಯ ಅಹವಾಲುಗಳನ್ನ ಸ್ವೀಕರಿಸಲಾಯಿತು. ಇದರ ಜೊತೆಗೆ ಜೊತೆಗೆ ಗ್ಯಾರಂಟಿ ಯೋಜನೆಗಳ ಸಮಸ್ಯೆಗಳನ್ನ ಹೊತ್ತು ಕೆಲ ಜನರು ಆಗಮಿಸಿದ್ದರು.
ಸರತಿ ಸಾಲಿನಲ್ಲಿ ಬಂದ ಜನರು ತಮ್ಮ ಸಮಸ್ಯೆಗಳ ಬೇಳೂರು ಮುಂದೆ ತೆರೆದಿಟ್ರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ರು. ಈ ವೇಳೆ ರಸ್ತೆಯಲ್ಲಿ ಜಾನುವಾರುಗಳ ಉಪಟಳ ಜಾಸ್ತಿಯಾಗಿದೆ ಅದಕ್ಕೆ ಕಡಿವಾಣ ಹಾಕಿ ಎಂಬ ಮನವಿಯು ಬಂದಿತ್ತು.
ಜನರ ಅಹವಾಲು ಅರ್ಜಿ ಪರಿಶೀಲಿಸಿ, ಸಮಸ್ಯೆ ಆಲಿಸಿ, ಯಾವ ಇಲಾಖೆಗೆ ಸಂಬಂಧಪಡುತ್ತೆ ಅಂತ ಬರೆದು ಸಹಿ ಮಾಡಿ, ಆ ಇಲಾಖೆಯವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತಿತ್ತು.
ಈ ಕಾರ್ಯಕ್ರಮ ಬಗ್ಗೆ ಪ್ರತಿಕ್ರಿಯೆ ನೀಡಿದ ಬೇಳೂರು ಗೋಪಾಲಕೃಷ್ಣ ಇವತ್ತು ಎಲ್ಲಾ ನಾಯಕರು ಪಕ್ಷಭೇದ ಮರೆತು ಇಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ..ಜನರ ಸಮಸ್ಯೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಪರಿಹಾರ ನೀಡುವ ಕೆಲಸ ಮಾಡುತ್ತೇವೆ..ಜನರ ಸೇವೆ ಮಾಡುವ ಕೆಲಸ ಮಾಡುತ್ತೇವೆ ಅಂದ್ರು. ಇವು ಒಂದು ದಿನ ಮುಗಿಯುವ ಸಮಸ್ಯೆ ಅಲ್ಲ..ಇದನ್ನು ಫಾಲೋ ಮಾಡೋಕೆ ಒಂದು ಟೀಮ್ ಇದೆ.. ನಮ್ಮ ಅಧಿಕಾರಿಗಳು ಫಾಲೋ ಅಫ್ ಮಾಡಿ ಸಮಸ್ಯೆಗೆ ಪರಿಹಾರ ನೀಡ್ತಾರೆ ಅಂತ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ರು.