Headlines

ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ -Grama One

ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಜಿ ಆಹ್ವಾನ


ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರಗಳಿಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸೇವೆ ನೀಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮ ಒನ್ ಯೋಜನೆ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯಾಗಿದ್ದು ಗ್ರಾಮೀಣ ಜನತೆಗೆ ವಿವಿಧ ಸೇವೆಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಸರ್ಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಆರಂಭಗೊಂಡ ಗ್ರಾಮ ಒನ್ ಯೋಜನೆಯು ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಸ್ಪಂದನೆ ವ್ಯಕ್ತವಾಗುತ್ತಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭ್ರದ್ರಾವತಿ ತಾಲೂಕಿನ ಕೊಮ್ಮನಹಳ್ಳಿ -1, ಹೊಸನಗರ ತಾಲೂಕಿನ ತ್ರಿಣಿವೆ-1, ಬೆಳ್ಳೂರು -1, ಸಾಗರ ತಾಲೂಕಿನ ತಳವಾಟ-1 ಮಾಳ್ವೆ- 1 ಚೆನ್ನಗೊಂಡ -1, ಕುದರೂರು -1, ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ -1 , ಶಿವಮೊಗ್ಗ ತಾಲೂಕಿನ ಗಾಜನೂರು-1, ಸೊರಬ ತಾಲೂಕಿನ- ಮುದ್ದಿದೊಡ್ಡಿಕೊಪ್ಪ-1 , ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ-1 ಆಗುಂಬೆ-1 ಹುದ್ದೆ ಖಾಲಿ ಇದೆ.

ಆಸಕ್ತರು ವೆಬ್ಸೈಟ್  https:/www.Karnatakaone.gov.in/Public/GramaOneFranchiseeTerms ನಲ್ಲಿ ದಿನಾಂಕ: 02-02-2024 ರಿಂದ 15-02-2024 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *